

ತುಮಕೂರು: ನಗರದ ಹೊರವಲಯದ ಗಂಗಸಂದ್ರದಲ್ಲಿ ಜಿ.ಎಸ್. ಪರಮಶಿವಯ್ಯ ನೀರಾವರಿ ಅಧ್ಯಯನ ಪೀಠ ಹಾಗೂ ಅಮಾನಿಕರೆಯಲ್ಲಿ ಬಟಾನಿಕಲ್ ಗಾರ್ಡನ್ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಸಂಸದ ಜಿ.ಎಸ್.ಬಸವರಾಜು ಹೇಳಿದರು.
ನಗರದ ಗಂಗಸಂದ್ರದಲ್ಲಿ ನೀರಾವರಿ ಅಧ್ಯಯನ ಪೀಠ ಹಾಗೂ ಡಿಜಿಟಲ್ ಗ್ರಂಥಾಲಯ ನಿರ್ಮಾಣಕ್ಕೆ ಭೂಮಿ ಪರಿಶೀಲನೆ ನಡೆಸಿ ಮಾತನಾಡಿದರು.
ಜಿ.ಎಸ್.ಪರಮಶಿವಯ್ಯ ಅವರ ಹೆಸರನ್ನು ಶಾಶ್ವತವಾಗಿ ಉಳಿಸುವ ಉದ್ದೇಶದಿಂದ ತುಮಕೂರು ವಿವಿ ಪರಮಶಿವಯ್ಯ ಅಧ್ಯಯನ ಪೀಠದಿಂದ ಗಂಗಸಂದ್ರದಲ್ಲಿ ಅಧ್ಯಯನ ಪೀಠ ಸ್ಥಾಪಿಸಲು ನಿದೇಶಕ ಜೈಪ್ರಕಾಶ್ ಮುಂದಾಗಿದ್ದಾರೆ. ಹೇಮಾವತಿ ಕೆನಾಲ್ ಅಭಿವೃದ್ಧಿಗೆ 550 ಕೋಟಿ ರೂ. ಅನುದಾನ ನೀಡಲಾಗಿದೆ ಎಂದು ಕಾವೇರಿ ನೀರಾವರಿ ನಿಗಮದ ಎಂಡಿ ಜೈಪ್ರಕಾಶ್ ತಿಳಿಸಿದರು.
ಮುಂದಿನ ದಿನಗಳಲ್ಲಿ ಬೇಕಿರುವ ನೀರಿನ ಸಂಪನ್ಮೂಲವನ್ನು ಉಳಿಸುವ ನಿಟ್ಟಿನಲ್ಲಿ ತೆಗೆದುಕೊಳ್ಳುವ ನಿಟ್ಟಿನಲ್ಲಿ ಚಿಂತನೆ ಮಾಡಲಾಗುತ್ತಿದ್ದು, ಇಸ್ರೇಲ್ ಮಾದರಿಯಲ್ಲಿ ನೀರಾವರಿ ಬಳಸುವ ನಿಟ್ಟಿನಲ್ಲಿ ಪ್ರಧಾನಿಗೆ ಪತ್ರ ಬರೆಯಲಾಗುವುದು ಎಂದರು. ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಅಭಿವೃದ್ಧಿ ರೆವಲ್ಯೂಷನ್ ಪೋರಂ ಅಧ್ಯಕ್ಷ ಕುಂದರನಹಳ್ಳಿ ರಮೇಶ್, ಟೂಡಾ ಆಯುಕ್ತ ಯೋಗಾನಂದ್, ತಹಸೀಲ್ದಾರ್ ಮೋಹನ್‌ಕುಮಾರ್ ಮತ್ತಿತರರು ಇದ್ದರು.