

ಪುತ್ತೂರು: ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಬೇರೆ ಜಿಲ್ಲೆಗೆ ಶಿಕ್ಷಕಿಯನ್ನು ವರ್ಗಾವಣೆ ಮಾಡಿ ಮಕ್ಕಳ ಕಡ್ಡಾಯ ಶಿಕ್ಷಣದ ಹಕ್ಕನ್ನು ಕಸಿಯುವ ಕಾರ್ಯವಾಗಿದೆ. ಶಾಲೆಗೆ ಕಾಯಂ ಶಿಕ್ಷಕರ ನೇಮಕಾತಿಯನ್ನು ತಕ್ಷಣ ಮಾಡಬೇಕು ಎಂದು ಆಗ್ರಹಿಸಿ ಪೋಷಕರು ಹಾಗೂ ಊರಿನವರು ಬೆಳಂದೂರು ಅಮೈ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಗೇಟಿನ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.
ಅಮೈ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ೧ರಿಂದ ೫ನೇ ತರಗತಿವರೆಗೆ ೨೩ ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಎರಡು ವರ್ಷಗಳಿಂದ ವರ್ಗಾವಣೆಗೊಂಡ ಶಿಕ್ಷಕಿಗೆ ಪ್ರಭಾರ ಮುಖ್ಯಶಿಕ್ಷಕಿ ಅಽಕಾರ ನೀಡಲಾಗಿತ್ತು. ಅನಽಕೃತವಾಗಿ ರಜೆ ಹಾಕಿ, ಹಾಜರಾತಿ ಹಾಕುವ, ಕೆಲವು ಸರ್ಕಾರದ ಜಯಂತಿ ಆಚರಣೆ ಮಾಡದೆ, ಹಾಲಿನ ಹುಡಿಯನ್ನು ಮಕ್ಕಳಿಗೆ ನೇರವಾಗಿ ನೀಡುವ ಮೂಲಕ ಶಾಲೆಯಲ್ಲಿ ಸರ್ವಾಽಕಾರ ಮಾಡಿ ಊರಿನವರ ಕೆಂಗಣ್ಣಿಗೆ ಗುರಿಯಾಗಿದ್ದರು.
೧೦ ವರ್ಷ ಕಡ್ಡಾಯ ಸೇವೆಯ ನಿಮಯವನ್ನು ಇಟ್ಟುಕೊಂಡು ಇಲಾಖೆ ೨೦೧೬ರ ಬ್ಯಾಚ್ ಶಿಕ್ಷಕರಿಗೆ ತಾಲೂಕಿನ ಒಳಗೆ ಕೂಡಾ ವರ್ಗಾವಣೆ ನೀಡಿಲ್ಲ. ಆದರೆ ಅಮೈ ಶಾಲೆಯ ಶಿಕ್ಷಕಿಗೆ ಏಕಾಏಕಿ ದಾವಣಗೆರೆಯ ಹೊನ್ನಾಳಿ ತಾಲೂಕಿಗೆ ವರ್ಗಾವಣೆ ನೀಡಲಾಗಿತ್ತು. ಕಾಯಂ ಶಿಕ್ಷಕರು ನೇಮಕವಾಗುವ ಮೊದಲೇ, ದಾಖಲೆಗಳ ಹಸ್ತಾಂತರ ಮಾಡದೆ ಶಾಲೆಯಿಂದ ತೆರಳಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದೆ.
ಓರ್ವ ಅತಿಥಿ ಶಿಕ್ಷಕಿ ಶಾಲೆಯಲ್ಲಿದ್ದು, ವರ್ಗಾವಣೆಯಾದ ಬಳಿಕ ಇಬ್ಬರು ಅತಿಥಿ ಶಿಕ್ಷಕರು ಶಾಲೆಗೆ ಬರುತ್ತಿದ್ದರೂ ಅವರಿಗೆ ಯಾವುದೇ ಅಽಕಾರಗಳಿರುವುದಿಲ್ಲ. ಈ ಹಿನ್ನಲೆಯಲ್ಲಿ ಊರಿನವರು ಪ್ರತಿಭಟನೆ ನಡೆಸಿದ್ದಾರೆ. ಪ್ರಮುಖರಾದ ಕೇಶವ ಗೌಡ, ಬಾಬು ಗೌಡ, ನಿರ್ಮಲ, ಎಸ್‌ಡಿಎಂಸಿ ಅಧ್ಯಕ್ಷ ಶರೀಫ್, ಸದಸ್ಯ ಮಹಮ್ಮದ್, ಕರ್ನಾಟಕ ಎಸ್ಡಿಎಂಸಿ ಸಮನ್ವಯ ಕೇಂದ್ರ ವೇದಿಕೆ ದಿನೇಶ್ ಬಿಳೆನೆಲು, ರಾಮಕೃಷ್ಣ ಹೊಳ್ಳಾರು, ನವಾಜ್ ಪಳ್ಳಾರು, ಅಶ್ರಫ್ ಕಲ್ಲೇರಿ, ಸಾಜಸ್ ಕೆ. ಜಿ. ಮತ್ತಿತರರು ಇದ್ದರು.
ಬೇಡಿಕೆ ಈಡೇರಿಕೆ ಆಗ್ರಹ
ಸ್ಥಳಕ್ಕಾಗಮಿಸಿದ ಕ್ಷೇತ್ರ ಶಿಕ್ಷಣಾಽಕಾರಿ ಲೋಕೇಶ್ ಎಸ್. ಆರ್. ಹಾಗೂ ಸಿಆರ್‌ಪಿ ಜಯಂತ್ ಪ್ರತಿಭಟನಾಕಾರರ ಮನಾವೊಲಿಸುವ ಕಾರ್ಯಕ್ಕೆ ಮುಂದಾದರು. ಕೊನೆಗೆ ವಾರದಲ್ಲಿ ಶಾಲೆಗೆ ಕಾಯಂ ಶಿಕ್ಷಕರನ್ನು ನೀಡುವ ಜತೆಗೆ ಈಗಾಗಲೇ ಹೊರಜಿಲ್ಲೆಗೆ ಹೋಗಿರುವ ಶಿಕ್ಷಕಿ ಶಾಲೆಗೆ ಆಗಮಿಸಿ ದಾಖಲೆ ಹಸ್ತಾಂತರ ಮಾಡಿ, ಊರಿನವರ ಪ್ರಶ್ನೆಗೆ ಉತ್ತರ ನೀಡಬೇಕೆಂಬ ಬೇಡಿಕೆಯನ್ನು ಪ್ರತಿಭಟನೆಯಲ್ಲಿದ್ದವರು ಇಟ್ಟಿದ್ದಾರೆ.
೫೦೦ಕ್ಕೂ ಅಽಕ ಶಿಕ್ಷಕರು ಡೆಪ್ಯುಟೇಶನ್ ಕೇಳಿಕೊಂಡಿದ್ದು, ಸರ್ಕಾರ ಅದನ್ನು ಮಾಡಿದೆ. ಶಿಕ್ಷರು ಕೇಳಿಕೊಂಡಂತೆ ಸರ್ಕಾರ ಅವಕಾಶ ನೀಡಿದೆ. ವಿದ್ಯಾರ್ಥಿಗಳಿಗೆ ಸಮಸ್ಯೆಯಾಗದ ರೀತಿಯಲ್ಲಿ ಅತಿಥಿ ಶಿಕ್ಷಕರ ನೇಮಕ ಮಾಡಲಾಗಿದೆ. ತಾಲೂಕಿನ ೧೫ ಶಾಲೆಗಳಲ್ಲಿ ಶಿಕ್ಷಕರಿಲ್ಲ. ಅಲ್ಲೆಲ್ಲಾ ಅತಿಥಿ ಶಿಕ್ಷಕರೇ ಕೆಲಸ ಮಾಡುತ್ತಿದ್ದಾರೆ. ಒಬ್ಬರು ಒರಿಜಿನಲ್ ಟೀಚರ್ ಅನ್ನು ಬಿಸಿಯೂಟ ಸೇರಿ ಎಲ್ಲಾ ವ್ಯವಸ್ಥೆ ನೋಡಲು ಚಾರ್ಜ್ ನೀಡಲಾಗಿದೆ. ಅಮೈ ಶಾಲೆಗೆ ಒಬ್ಬರು ಒರಿಜಿನಲ್ ಹಾಗೂ ಒಬ್ಬರು ಅತಿಥಿ ಶಿಕ್ಷಕರನ್ನು ನೀಡಲಾಗುವುದು.
| ಲೋಕೇಶ್ ಎಸ್. ಆರ್.
ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪುತ್ತೂರು