

ವಿಟ್ಲ: ಬದುಕಿನಲ್ಲಿ ಇಹಪರಗಳ ಅರಿವು ಬೇಕು. ಆಧ್ಯಾತ್ಮಿಕತೆ ಭಾರತದ ಅಂತಸತ್ವ. ರಾಷ್ಟ್ರ ಮುಂದೆ ಇದ್ದಾಗ ಧರ್ಮ ಅನುಷ್ಠಾನ ಸಾಧ್ಯವಾಗುತ್ತದೆ. ಭವ್ಯ ಭಾರತಕ್ಕೆ ಮುನ್ನುಡಿ ಬರೆದ ಸೈನಿಕರನ್ನು ಅಭಿನಂದಿಸಬೇಕಾಗಿದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಅಮೈ ಶ್ರೀ ಉಳ್ಳಾಲ್ತಿ ಭಜನಾ ಮಂಡಳಿಯ ನವೀಕೃತ ಭಜನಾ ಮಂದಿರ ಮತ್ತು ನೂತನ ಸಭಾಭವನ ಮಧುರಾದ ಲೋಕಾರ್ಪಣೆಗೊಳಿಸಿ ಆಶೀರ್ವಚನ ನೀಡಿದರು.
ಬೆಳಗ್ಗೆ ಗಣಪತಿ ಪೂಜೆ, ಪ್ರಧಾನದ್ವಾರ ಪೂಜೆ, ಮಂದಿರ ಪ್ರವೇಶೋತ್ಸವ, ಗಣಪತಿ ಹವನ, ದುರ್ಗಾ ಹೋಮ, ಸಾಮೂಹಿಕ ಶ್ರೀ ದುರ್ಗಾ ನಮಸ್ಕಾರ ಪೂಜೆ, ಮಹಾಮಂಗಳಾರತಿ ನಡೆಯಿತು. ಸಾಮಾಜಿಕ ಚಿಂತಕ ಪ್ರಕಾಶ್ ಮಲ್ಪೆ ಧಾರ್ಮಿಕ ಭಾಷಣ ನಡೆಸಿದರು. ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನ ಆಡಳಿತ ಅಧ್ಯಕ್ಷ ರಂಗಮೂರ್ತಿ ಎಸ್.ಆರ್. ಅಧ್ಯಕ್ಷತೆ ವಹಿಸಿದ್ದರು.
ಧಾರ್ಮಿಕ ಮುಖಂಡ ಅರುಣ್ ಕುಮಾರ್ ಪುತ್ತಿಲ, ಕೆಇಆರ್‌ಎಸ್‌ಕೆಆರ್ ಸಾಗರ ಮಂಡ್ಯದ ಮುಖ್ಯ ಸಂಶೋಧನಾಽಕಾರಿ ಗಿರೀಶ ಶಾಸ್ತ್ರಿ ಕೋಡಂದೂರು, ಪುಣಚ ಪ್ರಾಥಮಿಕ ವ್ಯವಸಾಯ ಸೇವಾ ಸಹಕಾರಿ ಸಂಘದ ಜನಾರ್ದನ ಭಟ್ ಅಮೈ, ಉದ್ಯಮಿ ಶ್ರೀಧರ ಶೆಟ್ಟಿ ಗುಬ್ಯ ಮೇಗಿನಗುತ್ತು, ಪದ್ಮಶ್ರೀ ಪುರಸ್ಕೃತ ಮಹಾಲಿಂಗ ನಾಯ್ಕ ಅಮೈ, ಶ್ರೀನಿವಾಸ ರೈ ಕುಂಡಕೋಳಿ, ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ ದಡ್ಡಂಗಡಿ, ನವೀಕರಣ ಸಮಿತಿ ಅಧ್ಯಕ್ಷ ಸಚ್ಚಿದಾನಂದ ಶಾಸ್ತ್ರಿ ನೆಕ್ಕರೆ ಉಪಸ್ಥಿತರಿದ್ದರು.
ಭಜನಾ ಮಂಡಳಿ ಅಧ್ಯಕ್ಷ ನಾರಾಯಣ ಕುಲಾಲ್ ಅಮೈ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಕೇಶವ ನಾಯ್ಕ ಕೋಪ್ರೆ ವಂದಿಸಿದರು.
ಭಾರತೀಯತೆ ಉಳಿಯಲು ಇನ್ನಷ್ಟು ಕಾನೂನುಗಳು ಜಾರಿಯಾಗಬೇಕಾಗಿದೆ. ಭಜನೆ ಮೂಲಕ ಸಂಸ್ಕಾರ ಸಿಗುತ್ತದೆ. ಭಜತೆಯಿರುವಲ್ಲಿ ಶಾಂತಿ ನೆಮ್ಮದಿ ಇರುತ್ತದೆ. ಮೌಲ್ಯಗಳನ್ನು ಬದುಕಿನಲ್ಲಿ ತುಂಬಿಸಿಕೊಳ್ಳುವ ಕಾರ್ಯವಾಗಬೇಕು.
| ಶ್ರೀ ಗುರುದೇವಾನಂದ ಸ್ವಾಮೀಜಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನ