ಅಮದಳ್ಳಿ ವೀರ ಗಣಪತಿ ದೇವರ ವಾರ್ಷಿಕೋತ್ಸವ ಸಂಪನ್ನ

Amadalli-Ganapati
Published on

ಕಾರವಾರ: ತಾಲೂಕಿನ ಅಮದಳ್ಳಿ ಶ್ರೀ ವೀರಗಣಪತಿ ದೇವರ 40 ನೇ ವಾರ್ಷಿಕೋತ್ಸವ ಶುಕ್ರವಾರ ವಿಜ್ರಂಭಣೆಯಿಂದ ನಡೆಯಿತು.
ಬೆಳಗ್ಗೆ 5.30 ಕ್ಕೆ ಮಂಗಳಾರತಿ, ಸಾಮೂಹಿಕ ಹಾಗೂ ದೇವಸ್ಥಾನ ವತಿಯಿಂದ108 ತೆಂಗಿನ ಕಾಯಿ ಗಣಹೋಮ,ಅಭಿಷೇಕ, ಅಷ್ಟೋತ್ತರ ಅರ್ಚನೆ, ಮಹಾಪೂಜೆ, ಸಾಮೂಹಿಕ ಸತ್ಯ ಗಣಪತಿ ವೃತ, ಅನ್ನಸಂತರ್ಪಣೆ, ರಂಗಪೂಜೆ , ದೀಪೋತ್ಸವ ಕಾರ್ಯಕ್ರಮಗಳು ಜರುಗಿದವು.
ಜಿಲ್ಲೆ, ಹೊರ ಜಿಲ್ಲೆಗಳಿಂದ ಸಾವಿರಾರು ಭಕ್ತಾದಿಗಳು ಆಗಮಿಸಿ ದೇವರ ಕೃಪೆಗೆ ಪಾತ್ರರಾದರು. ಗೋವಾ ಮಡಗಾಂವನ ಇಚ್ಛಿತ ಗುರುದಾಸ ತಳಾವಳಿಕರ ಅನ್ನಸಂತರ್ಪಣೆ ಮಾಡಿದರು. ವೀರಗಣಪತಿ ಪಡ್ತಿ ಸಮಾಜ ಸೇವಾ ಸಂಘದ ವತಿಯಿಂದ ಜಾತ್ರೆಗೆ ಬಂದ ಭಕ್ತಾದಿಗಳಿಗೆ ಉಚಿತ ತಂಪು ಪಾನೀಯವನ್ನು ಸಂಜೆಯವರೆಗೂ ವಿತರಿಸಲಾಯಿತು.
ಸನ್ಮಾನ:
ವೀರಗಣಪತಿ ದೇವರ ವಾರ್ಷಿಕೋತ್ಸವದಂದು ಸತತ 19 ವರ್ಷಗಳಿಂದ ಅನ್ನ ಸಂತರ್ಪಣೆ ನೀಡುತ್ತಿರುವ ಇಚ್ಛಿತ ತಳಾವಳಿಕರ್ ಅವರನ್ನು ದೇವಸ್ಥಾನದ ಆಡಳಿತ ಮಂಡಳಿಯಿಂದ ಸನ್ಮಾನಿಸಲಾಯಿತು. ದೇವಸ್ಥಾನ ಆಡಳಿತ ಸಮಿತಿಯ ಶಿವಪ್ರಸಾದ ಜಿ.ಕೆ, ಉಪಾಧ್ಯಕ್ಷರಾದ ರವೀಂದ್ರ ಅಮದಳ್ಳಿ, ಕಾರ್ಯದರ್ಶಿ ವಿ.ಪಿ ಗಾಂವಕರ್, ಸದಸ್ಯರಾದ ಜಿ.ಡಿ ಗೋವಿಂದ ಕುಮಾರ, ನಾರಾಯಣ ಖಾರ್ವಿ, ಸುಭಾಷ್ ನಾಯ್ಕ, ಮಾರುತಿ ಕೊಳಂಕರ್,ದಿವಾಕರ ಅಮದಳ್ಳಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net