

ಇಂಡಿ:ದೇಶ ಕಾಯುವ ಯೋಧ, ಅನ್ನ ನೀಡುವ ರೈತರನ್ನು ನಿತ್ಯವೂ ನೆನೆಯಬೇಕೆಂದು ಶಿವಯೋಗಾಶ್ರಮ ಸಿದ್ಧಾರೂಢ ಮಠದ ಶಂಕರಾನಂದ ಮಹಾಸ್ವಾಮಿಗಳು ಹೇಳಿದರು.ತಾಲೂಕಿನ ಆಳೂರ ಗ್ರಾಮದಲ್ಲಿ ಸಿದ್ಧಾರೂಢರ ನೂತನ ಮಂದಿರದ ಕಲಶಾರೋಹಣ ಹಾಗೂ ಲಕ್ಷಿ$್ಮ ಬಾಯಿ ತಾಯಿ, ಪಾರ್ವತೆಮ್ಮನವರ ಮೂರ್ತಿ ಪ್ರಾಣ ಪ್ರತಿಷ್ಠಾಪನೆ, 55ನೇ ವರ್ಷದ ಆಧ್ಯಾತ್ಮಿಕ ಪ್ರವಚನ ಮಹೋತ್ಸವದಲ್ಲಿ ಗುರುವಾರ ಮಾಜಿ ಸೈನಿಕರನ್ನು ಸನ್ಮಾನಿಸಿ ಆಶೀರ್ವಚನ ನೀಡಿದರು.
ನಾವು ನೆಮ್ಮದಿಯ ಜೀವನ ನಡೆಸಲು, ಗಡಿ ಕಾಯುವ ಯೋಧರು ಕಾರಣ, ಯೋಧನ ಕುಟುಂಬದವರನ್ನು ಗೌರವಯುತವಾಗಿ ಕಾಣುವುದು ಪ್ರತಿಯೊಬ್ಬರ ಕರ್ತವ್ಯ ಎಂದರು.ಮಾಜಿ ಸೈನಿಕರ ಅಧ್ಯ ರಾಮಪ್ಪ ಎಲ್.ಕೆ. ಮಾತನಾಡಿ, ದೇಶದ ಭದ್ರತೆಗೆ ಯೋಧರ ತ್ಯಾಗ, ಬಲಿದಾನ ಅಪಾರವಾಗಿದೆ ಎಂದರಲ್ಲದೆ, ಇಂದಿನ ಯುವಕರು ದೇಶ ಸೇವೆಗೆ ಮುಂದಾಗಬೇಕು ಎಂದರು.
.
ಕಲಬುರಗಿಯ ಸಿದ್ಧಾರೂಢ ಮಠದ ಲಕ್ಷಿ$್ಮದೇವಿ ತಾಯಿ ಮಾತನಾಡಿದರು.ಭೀಮರಾಯನ ಗುಡಿಯ ಸಿದ್ದಾರೂಢ ಮಠದ ಜ್ಞಾನೇಶ್ವರಿ ತಾಯಿ, ಯರಗಲ್ ಸಿದ್ದಾರೂಢ ಮಠದ ಅದ್ವೆತಾನಂದ ಸ್ವಾಮೀಜಿ, ಜಮಖಂಡಿಯ ಸಿದ್ದಾನಂದ ಸ್ವಾಮೀಜಿ, ಬೆಳವಡಾ ಸಿದ್ದಾರೂಢ ಮಠದ ಪರಿಪೂರ್ಣಾನಂದ ಸ್ವಾಮೀಜಿ, ಮುಳಸಾವಳಗಿಯ ಸಿದ್ದಾರೂಢ ಮಠದ ದಯಾನಂದ ಸ್ವಾಮೀಜಿ ಮಾತನಾಡಿದರು.
ಶ್ರೀಶೈಲ ಅರ್ಜುಣಗಿ, ತುಕಾರಾಮ ಬೇವನೂರ, ಬಸವರಾಜ ಅರ್ಜುಣಗಿ, ನಂದಬಸು ನುಚ್ಚಿ, ಅಶೋಕ ಬಳಬಟ್ಟಿ, ರಾಮಚಂದ್ರ ಯಂಕಂಚಿ, ಯಲಗೊಂಡ ಬೇವನೂರ, ಖಾಜು ಸಿಂಗೆಗೋಳ, ರಾಚಪ್ಪ ಕಲಶೆಟ್ಟಿ, ಎಸ್.ಎಂ. ಬಿರಾದಾರ, ಎ.ಎಸ್. ಗಾಣಿಗೇರ, ಪ್ರಕಾಶ ಲೋಣಿ ಇತರರಿದ್ದರು.
ಇದೇ ಸಂದರ್ಭ ಶ್ರೀಮಠದಿಂದ ಮಾಜಿ ಸೈನಿಕರು ಹಾಗೂ ಮಾಧ್ಯಮದವರನ್ನು ಸನ್ಮಾನಿಸಲಾಯಿತು.
ಸುರೇಶ ನಾಟೀಕಾರ ಸ್ವಾಗತಿಸಿ, ವಂದಿಸಿದರು.
ಇಂಡಿ ತಾಲೂಕಿನ ಆಳೂರ ಗ್ರಾಮದ ಸಿದ್ಧಾರೂಢರ ನೂತನ ಮಂದಿರದ ಕಲಶಾರೋಹಣ ಕಾರ್ಯಕ್ರಮವನ್ನು ಶ್ರೀಗಳು ಉದ್ಘಾಟಿಸಿದರು. ಶ್ರೀಶೈಲ ಅರ್ಜುಣಗಿ, ತುಕಾರಾಮ ಬೇವನೂರ, ಬಸವರಾಜ ಅರ್ಜುಣಗಿ, ನಂದಬಸು ನುಚ್ಚಿ, ಅಶೋಕ ಬಳಬಟ್ಟಿ, ರಾಮಚಂದ್ರ ಯಂಕಂಚಿ, ಯಲಗೊಂಡ ಬೇವನೂರ ಇತರರಿದ್ದರು.