ಶರಣ-ಶರಣೆಯರನ್ನು ನಿತ್ಯವೂ ಸ್ಮರಿಸಿ

SANMANA
Published on

ನರಗುಂದ: ಹಿಂದುಗಳಿಗೆ ಸನಾತನ ಧರ್ಮದ ಆಚರಣೆಯೇ ಬಹಳ ಮಹತ್ವದ್ದಾಗಿದೆ. ಕಾಯಕ, ಅನ್ನ ದಾಸೋಹದಿಂದ ಸಮಾಜ ಸುಧಾರಣೆಗೆ ನಿರಂತರವಾಗಿ ಶ್ರಮಿಸಿರುವ ಪ್ರತಿಯೊಬ್ಬ ಶರಣ-ಶರಣೆಯರನ್ನು ನಿತ್ಯವು ಸ್ಮರಿಸುವಂತಾಗಬೇಕು ಎಂದು ಚಿಕ್ಕನರಗುಂದ ಸರ್ಕಾರಿ ಪ್ರೌಢಶಾಲೆ ಶಿಕ್ಷಕಿ ಅನ್ನಪೂರ್ಣ ತೇಲಿ ಹೇಳಿದರು.

ಪಟ್ಟಣದ ಶ್ರೀಬಸವೇಶ್ವರ ಸಮುದಾಯ ಭವನದಲ್ಲಿ ಬಸವ ಕೇಂದ್ರ, ಶ್ರೀಮುರುಘ ರಾಜೇಂದ್ರ ಫ್ರೀ ಬೋರ್ಡಿಂಗ್ ಟ್ರಸ್ಟ್, ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಚನಾಮೃತ ಶ್ರಾವಣದಲ್ಲಿ ಅವರು ಉಪನ್ಯಾಸ ನೀಡಿದರು.

ಮನಸೆಂಬ ಚೇಷ್ಠೆಗೆ ಮನವೇ ಮೂಲ ಕಾರಣ. ಶರಣೆ ಅಕ್ಕಮಹಾದೇವಿಯವರ ಧಾರ್ಮಿಕ ಪರಿಕಲ್ಪನೆ ಅತ್ಯದ್ಭುತವಾಗಿತ್ತು. ಕಲಿಗಾಲದಲ್ಲಿ ಅಧರ್ಮ, ಅಸತ್ಯತೆಗಳು ಹೆಚ್ಚಾಗುತ್ತಿವೆ. ನಾವೆಲ್ಲರೂ ಸ್ವಚ್ಛ ಮನಸಿನಿಂದ ಮಾಡುವ ಕಾಯಕ, ದಾಸೋಹ, ಧಾರ್ಮಿಕ ಆಚರಣೆಗಳು ದೇವರ ಒಲುಮೆಗೆ ಅರ್ಪಿತಗೊಳ್ಳುತ್ತವೆ ಎಂದರು.

ಬಸವ ಕೇಂದ್ರದ ಅಧ್ಯಕ್ಷ ಚನ್ನಬಸಪ್ಪ ಕಂಠಿ, ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಾಪಾಟೀಲ ಮಾತನಾಡಿ, ಸ್ವಚ್ಛತೆ ಹಾಗೂ ಸಮಾಜದ ಸುಧಾರಣೆಗೆ 12ನೇ ಶತಮಾನದ ಜಂಗಮರ ಪಾತ್ರ ಮಹತ್ವದ್ದಾಗಿತ್ತು. ಬಸವಣ್ಣನವರ ಕಾಲದಲ್ಲಿ ವಚನ ಸಾಹಿತ್ಯದ ಮೂಲಕ ಪ್ರತಿಯೊಂದು ಸಮಾಜದ ಓರೆ, ಕೋರೆಗಳನ್ನು ತಿದ್ದುವ ಕೆಲಸವಾಯಿತು ಎಂದರು. ಅನ್ನಪೂರ್ಣ ತೇಲಿ ಅವರನ್ನು ಬಸವಕೇಂದ್ರದ ವತಿಯಿಂದ ಸನ್ಮಾನಿಸಲಾಯಿತು.

ಬಸವ ಕೇಂದ್ರದ ನಿರ್ದೇಶಕ ಶಂಕ್ರಣ್ಣ ವಾಳದ, ಎಸ್.ವೈ. ಹುಂಬಿ, ಸಿ.ಎಚ್. ಕೋರಿ, ಜೆ.ಅರ್. ಕದಂ. ಸಂಗಪ್ಪ ಪೂಜಾರ, ಕದಳಿ ವೇದಿಕೆ ಅಧ್ಯಕ್ಷೆ ಲೀಲಕ್ಕ ಹಸಬಿ, ಸುಕನ್ಯಾ ಸಾಲಿ, ಡಾ.ಕಲಾಶ್ರೀ ಹಾದಿಮನಿ, ಗಂಗಮ್ಮ ಪಾಟೀಲ, ರೇಣುಕಾ ಶಿವನಗೌಡ್ರ, ವಿ.ಕೆ.ಹಿರೇಗೌಡ್ರ, ವೈ.ಐ. ಕುಂಬಾರ, ಬಿ.ಎಸ್. ನಾಶಿಶೆಟ್ಟಿ, ಡಾ. ಎಂ.ಪಿ. ಕುಲಕರ್ಣಿ, ಸೀಮಣ್ಣ ಗೋವೇಶ್ವರ, ಬಿ.ಎಚ್. ಕ್ಯಾರಕೊಪ್ಪ, ಪತ್ರೆಪ್ಪ ಹಡಪದ, ಬಸಣ್ಣ ಗೊವೇಶ್ವರ, ಸಿ.ಎಸ್. ಸಾಲೂಟಗಿಮಠ, ಆರ್.ಬಿ. ಚಿನಿವಾಲರ ಇತರರಿದ್ದರು. ನಿವೃತ್ತ ಪಿಎಸ್‌ಐ ಟಿ.ಆರ್.ಉಳ್ಳೇಗಡ್ಡಿ ವಚನ ಸಂಗೀತ ಪ್ರಸ್ತುತಪಡಿಸಿದರು. ಆರ್.ಎಚ್. ತಿಗಡಿ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net