ಜೀವನದಲ್ಲಿ ಸದಾ ಇರಲಿ ಹುಮ್ಮಸ್ಸು

Kmt-Kandaya
Published on

ಕುಮಟಾ: ಪ್ರತಿಯೊಬ್ಬರಿಗೂ ಜೀವನದಲ್ಲಿ ಹುರುಪು ಮತ್ತು ಹುಮ್ಮಸ್ಸು ಸದಾ ಇರಬೇಕು ಎಂದು ತಾಪಂ ಇಒ ರಾಜೇಂದ್ರ ಎಲ್. ಭಟ್ ಹೇಳಿದರು.
ಪಟ್ಟಣದ ಪುರಭವನದಲ್ಲಿ ಕಂದಾಯ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಾರ್ಯಕ್ರಮವನ್ನು ಯಲ್ಲಾಪುರದ ಪ್ರಭಾರ ತಹಸೀಲ್ದಾರ ಅಶೋಕ ಭಟ್ ಉದ್ಘಾಟಿಸಿ, ಕಂದಾಯ ದಿನಾಚರಣೆಯ ಮಹತ್ವವನ್ನು ವಿವರಿಸಿದರು.
ಅತಿಥಿಗಳಾಗಿ ನಿವೃತ್ತ ಸರ್ವೆಯರ್ ಕೆ.ಟಿ.ತಾಂಡೇಲ, ನಿವೃತ್ತ ಲೆಕ್ಕಪರಿಶೋಧಕ ಡಿ.ಎಸ್. ನಾಯ್ಕ, ಪುರಸಭೆ ಮುಖ್ಯಾಧಿಕಾರಿ ವಿದ್ಯಾಧರ ಕಲಾದಗಿ, ತಹಸೀಲ್ದಾರ್ ಪ್ರವೀಣ ಕರಾಂಡೆ, ಗ್ರೇಡ್ 2 ತಹಸೀಲ್ದಾರ್ ಸತೀಶ ಗೌಡ, ವಸಂತ ಸಾವಂತ, ಮಂಜುನಾಥ ಸುಳ್ಳೊಳ್ಳಿ ಇತರರು ಇದ್ದರು.

ಕಂದಾಯ ವಿಭಾಗ ವಿವಿಧ ಹಂತದ ನೌಕರರನ್ನು ಗೌರವಿಸಲಾಯಿತು. ಶಿರಸ್ತೇದಾರ್ ಉಷಾ ನಾಯ್ಕ ನಿರ್ವಹಿಸಿದರು. ಬಳಿಕ ಕಂದಾಯ ನೌಕರರು ಹಾಗೂ ಅವರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net