

ಭಟ್ಕಳ: ತಾಲೂಕಿನ ಅಳ್ವೆಕೋಡಿಯ ಕಿರುಬಂದರು(ಜಟ್ಟಿ)ನ್ನು ಮೆಲ್ದರ್ಜೆಗೆ ಏರಿಸಿ ಬಂದರನ್ನಾಗಿ ಮಾಡುವ ಪ್ರಸ್ತಾವನೆಯನ್ನು ಸಿದ್ಧ ಮಾಡಿಕೊಂಡಿದ್ದು ಶೀಘ್ರದಲ್ಲಿ ಇಲ್ಲಿನ ಬಂದರಿಗೆ ಹಾಗೂ ಮೀನುಗಾರರಿಗೆ ಇನ್ನೂ ಹೆಚ್ಚಿನ ಸೌಕರ್ಯ ಒದಗಿಸಲಾಗುವುದು ಎಂದು ಒಳನಾಡು ಜಲಸಾರಿಗೆ ಹಾಗೂ ಮೀನುಗಾರಿಕೆ ಇಲಾಖೆ ಸಚಿವ ಮಂಕಾಳ ಎಸ್ ವೈದ್ಯ ಹೇಳಿದರು.
ತೆಂಗಿನಗುಂಡಿಯ ಬಂದರಿಗೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇಲ್ಲಿನ ಬಂದರು (ಡಾಕ್) ವಿಸ್ತರಣೆಗೆ 25 ಕೋಟಿ ರೂ. ಅನುದಾನ ಮಂಜೂರಿ ಮಾಡಿಸಲು ಪ್ರಸ್ತಾವನೆ ಈಗಾಗಲೆ ಸಿದ್ಧ್ದಾಗಿದೆ. ಸಚಿವ ಸಂಪುಟದ ಒಪ್ಪಿಗೆ ಪಡೆದು ಅದನ್ನು ಬಿಡುಗಡೆ ಮಾಡಿಸಲಾಗುವುದು.
ಈಗಾಗಲೆ 720 ಮೀ. ಅಲೆ ತಡೆಗೋಡೆ ಇದೆ. ಅದನ್ನು ಇನ್ನೂ 100ಮೀಟರ್ ವಿಸ್ತರಿಸಲಾಗುವುದು. ಈಕುರಿತು ಅಧ್ಯಯನ ನಡೆಯುತ್ತಿದೆ ಎಂದು ಅವರು ಹೇಳಿದರು.
ಶ್ರೀ ದುರ್ಗಾ ಮೊಗೇರ ಅಸೋಸಿಯೇಶನ್ ಅಧ್ಯಕ್ಷ ಯಾದವ ಮೊಗೇರ, ತೆಂಗಿನಗುಂಡಿ ಪರ್ಶಿಯನ್ ಬೋಟ್ ಯುನಿಯನ್ ಅಧ್ಯಕ್ಷ ಜಟಕಾ ಕಾಯ್ಕಿಣಿ, ಅಳಿವೆಕೋಡಿ ಫಿಶ್ರೀಸ್ ಸೊಸೈಟಿಯ ಪದಾಧಿಕಾರಿಗಳು, ಮೀನುಗಾರಿಕೆ ಇಲಾಖೆಯ ಅಧಿಕಾರಿ ರವಿ ಮುನಿಯಪ್ಪ ಇತರರು ಇದ್ದರು.