

ಉಡುಪಿ: ಆಳ್ವಾಸ್ ಶಿಕ್ಷಣ ಪತಿಷ್ಠಾನದ ವತಿಯಿಂದ ಆಯೋಜನೆಗೊಳ್ಳುತ್ತಿರುವ ಬೃಹತ್ ಉದ್ಯೋಗ ಮೇಳ ಆಳ್ವಾಸ್ ಪ್ರಗತಿ ಆ. 1 ಹಾಗೂ 2ರಂದು ಮೂಡುಬಿದಿರೆಯ ವಿದ್ಯಾಗಿರಿ ಆವರಣದಲ್ಲಿ ನಡೆಯಲಿದೆ. ಈಗಾಗಲೇ 302 ಕಂಪೆನಿಗಳ ನೋಂದಾಯಿಸಿದ್ದು, ಒಟ್ಟು 16,027 ಉದ್ಯೋಗ ಅವಕಾಶಗಳು ಲಭ್ಯವಾಗಲಿವೆ ಎಂದು ಆಳ್ವಾಸ್ ಕಾಲೇಜು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಮುಖ್ಯಸ್ಥ ಪ್ರಸಾದ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಉದ್ಯೋಗ ಮೇಳದಲ್ಲಿ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಶಿಕ್ಷಣ ಪಡೆದವರಿಗೆ -3012, ಐಟಿಐ ಹಾಗೂ ಡಿಪ್ಲೋಮಾ- 4350, ಯಾವುದೇ ಪದವಿ- 3847, ಬಿಇ/ಬಿಟೆಕ್- 805, ಕೋರ್ ಐಟಿ- 119, ಮೆಡಿಕಲ್ ಹಾಗೂ ಪ್ಯಾರಾ ಮೆಡಿಕಲ್- 709, ಯಾವುದೇ ಸ್ನಾತಕೋತ್ತರ ಅಥವಾ ಎಂಬಿಎ- 1446, ಬಿಕಾಂ ಹಾಗೂ ಬಿಬಿಎ- 1176, ಗಲ್ಫ್ ರಾಷ್ಟ್ರ-ದಲ್ಲಿ 316 ಉದ್ಯೋಗದ ಅವಕಾಶಗಳಿವೆ ಎಂದರು.
13 ವಲಯ ಭಾಗಿ
ಮ್ಯಾನುಫ್ಯಾಕ್ಚರಿಂಗ್ ವಲಯ, ಲಾಜಿಸ್ಟಿಕ್ಸ್ , ಐಟಿ, ಐಟಿಇಎಸ್, ಬ್ಯಾಂಕಿಂಗ್ ಮತ್ತು ಹಣಕಾಸು, ಹೆಲ್ತ್ಕೇರ್, ಫಾಮಾರ್ವಲಯ, ಮಾಧ್ಯಮ, ಮಾರಾಟ ಮತ್ತು ಚಿಲ್ಲರೆ, ಕನ್ಸ್ಸ್ಟ್ರಕ್ಷನ್, ಹಾಸ್ಪಿಟಾಲಿಟಿ, ಶಿಕ್ಷಣ ಹಾಗೂ ಎನ್ಜಿಒ, ಟೆಲಿಕಮ್ಯೂನಿಕೇಷನ್ ಸೇರಿದಂತೆ 13 ವಲಯಗಳಿಂದ ವಿವಿಧ ಕಂಪೆನಿಗಳು ಭಾಗವಹಿಸಲಿವೆ-. ಹೊರ ರಾಜ್ಯದ ಹಾಗೂ ಹೊರ ಜಿಲ್ಲೆಗಳಿಂದ ಆಗಮಿಸುವ ಆಕಾಂಕ್ಷಿಗಳಿಗೆ ಜುಲೈ 31ರಿಂದ ಉಚಿತ ವಾಸ್ತವ್ಯ ವ್ಯವಸ್ಥೆ ಕಲ್ಪಿಸಲಾಗುವುದು. ಐಟಿಐ ಅಥವಾ ಡಿಪ್ಲೋಮಾ ಅಭ್ಯರ್ಥಿಗಳಿಗೆ ಉಚಿತ ಬಸ್ನ ವ್ಯವಸ್ಥೆ ಮಾಡಲಾಗಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ದೂ.ಸಂ. 9741440490 ಥವಾ 7975223865 ಸಂಪರ್ಕಿಸಬಹುದು ಎಂದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ - ತರಬೇತಿ ಮತ್ತು ನಿಯೋಜನೆ ವಿಭಾಗದ ಮುಖ್ಯಸ್ಥೆ ರಂಜಿತಾ ಆಚಾರ್ಯ ಉಪಸ್ಥಿತರಿದ್ದರು.