ರೇಣುಕ ವಾಣಿಗೆ ಹೆಸರು ನೋಂದಾಯಿಸಿ

Published on

ಆಲೂರು : ಶ್ರೀ ರಂಭಾಪುರಿ ವೀರಸಿಂಹಾಸನ ಶಾಖಾ ಸಂಸ್ಥಾನ ಶ್ರೀ ಕಾರ್ಜುವಳ್ಳಿ ಹಿರೇಮಠದಿಂದ ರೇಣುಕ ವಾಣಿ - ಧಾರ್ಮಿಕ ಮಾಸಪತ್ರಿಕೆಯನ್ನು ಹೊರತರಲಾಗಿದೆ. ಸದಸ್ಯತ್ವ ಅಭಿಯಾನ ಪ್ರಾರಂಭವಾಗಿದೆ. ಆಸಕ್ತರು ತಮ್ಮ ಹೆಸರು ನೋಂದಾಯಿಸಿಕೊಳ್ಳುವಂತೆ ಮಠದ ಶ್ರೀ ಸದಾಶಿವ ಸ್ವಾಮೀಜಿ ತಿಳಿಸಿದ್ದಾರೆ. ಭಾರತದ ಶಾಸ್ತ್ರಗಳಲ್ಲಿ ಜ್ಞಾನಕ್ಕೆ ಮಹತ್ವವಾದ ಸ್ಥಾನವಿದೆ. ಪ್ರತಿಯೊಬ್ಬರೂ ಜ್ಞಾನ, ಸಂಸ್ಕಾರವಂತರಾಗಬೇಕು. ಸನ್ನಡತೆ, ಸದ್ವಿಚಾರಗಳಿಂದ ತುಂಬಿದ ಜೀವನ ನಡೆಸಬೇಕು ಎಂಬುದು ಪೀಠದ ಉದ್ದೇಶ. ಈ ನಿಟ್ಟಿನಲ್ಲಿ ಸಾಹಿತ್ಯ, ಸಂಸ್ಕೃತಿ ಮತ್ತು ಸಂಸ್ಕಾರವನ್ನು ಸಂವರ್ಧಿಸುವ ನಿಟ್ಟಿನಲ್ಲಿ ಮಾಸಪತ್ರಿಕೆ ರೂಪಿಸಲಾಗಿದೆ. ಭಕ್ತರು ತಮ್ಮ ಪೂರ್ಣ ಹೆಸರು, ಅಂಚೆ ವಿಳಾಸ ಮತ್ತು ಮೊಬೈಲ್ ಫೋನ್ ಸಂಖ್ಯೆಯನ್ನು ನಿಖರವಾಗಿ ನೋಂದಾಯಿಕೊಳ್ಳಬೇಕು ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net