ಬಾಲ್ಯದಿಂದಲೇ ಕ್ರೀಡೆಯ ಮಹತ್ವವನ್ನು ಅರಿತುಕೊಳ್ಳಿ

20 Aluru 1
Published on

 ಆಲೂರು: ಬಾಲ್ಯದಿಂದಲೇ ಕ್ರೀಡೆಯ ಮಹತ್ವವನ್ನು ಅರಿತುಕೊಳ್ಳಬೇಕು ಎಂದು ಬಿಜೆಪಿ ಮುಖಂಡ ಕಟ್ಟೆಗದ್ದೆ ನಾಗರಾಜ್ ಸಲಹೆ

ನೀಡಿದರು. ತಾಲೂಕಿನ ಪಾಳ್ಯ ಹೋಬಳಿ ತೊರಗರಳ್ಳಿ ಗ್ರಾಮದಲ್ಲಿ ಗ್ರಾಮಸ್ಥರು ಹಮ್ಮಿಕೊಂಡಿದ್ದ ಪ್ರೀಮಿಯರ್ ಲೀಗ್‌ಕ್ರಿಕೆಟ್ ಪಂದ್ಯಾವಳಿ ಉದ್ಘಾಟನಾ ಸಮಾರಂಭದಲ್ಲಿ ಆಟಗಾರರಿಗೆ ಶುಭಹಾರೈಸಿ ಮಾತನಾಡಿದರು. ದೈಹಿಕ ಚಟುವಟಿಕೆಯ ಮುಂದುವರಿದ ಭಾಗವೇ ಕ್ರೀಡೆ, ಪ್ರತಿಯೊಬ್ಬ ಮಕ್ಕಳೂ ಹೊರಾಂಗಣ ಆಟದಲ್ಲಿ ತೊಡಗಬೇಕು ಎಂದು ಅವರು ಹೇಳಿದರು.

ಪ್ರಸ್ತುತ ದಿನಗಳಲ್ಲಿ ಮೊಬೈಲ್ ಫೋನ್ ಹಾವಳಿಯಿಂದ ಮಕ್ಕಳು ಕ್ರೀಡಾಂಗಣದಲ್ಲಿ ಆಟ ಆಡುವುದು ಕಡಿಮೆ ಆಗುತ್ತಿದೆ. ಇದರಿಂದ ಅನೇಕ ಸಮಸ್ಯೆಗಳು ಎದುರಾಗುತ್ತಿವೆ. ಪಾಲಕರು ಮಕ್ಕಳಿಗೆ ಕ್ರೀಡಾಂಗಣ ಪರಿಚಯಿಸಿ ಪ್ರೋತ್ಸಾಹಿಸಲು ನೆರವಾಗಬೇಕು ಎಂದು ಅವರು ಹೇಳಿದರು.

ಯುವಜನರು ಕ್ರೀಡೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ದೈಹಿಕ ಮತ್ತು ಮಾನಸಿಕವಾಗಿ ಸದೃಢರಾದರೆ ಭವಿಷ್ಯ ಉಜ್ವಲ ವಾಗುತ್ತದೆ. ಪಂದ್ಯಾವಳಿಯಲ್ಲಿ ಕ್ರಿಯಾಶೀಲವಾಗಿ ಪಾಲ್ಗೊಳ್ಳಬೇಕು. ಆಟದಲ್ಲಿ ಸೋಲು, ಗೆಲುವು ಸಾಮಾನ್ಯ. ಸೋಲೇ ಗೆಲುವಿಗೆ ಮುಖ್ಯ ಮೆಟ್ಟಿಲು ಎಂಬುದನ್ನು ಮರೆಯಬಾರದು ಎಂದರು. ಗ್ರಾಮಸ್ಥರಾದ ಪ್ರೀತಮ್,ಪುನೀತ, ಸತೀಶ, ಮಧು, ಮಂಜು, ಸಂಜಯ್, ಗೋಪಾಲ್ ಹಾಗೂ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net