ವಲಸೆ ಜನರನ್ನು ಕಡ್ಡಾಯವಾಗಿ ಮಲೇರಿಯ ತಪಾಸಣೆಗೊಳಪಡಿಸಬೇಕು: ಡಾ.ನಾಗಪ್ಪ.

25 Hospital WORK Shop
Published on
ಆಲೂರು: ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಬರುವ ವಲಸೆ ಜನರಲ್ಲಿ   ಮಲೇರಿಯ ಪ್ರಕರಣಗಳು ಕಂಡು ಬರುತ್ತಿರುವುದರಿಂದ, ಅವರನ್ನು   ಕಡ್ಡಾಯವಾಗಿ ತಪಾಸಣೆಗೊಳಿಸಬೇಕೆಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಜಿ.ಎಸ್ ನಾಗಪ್ಪ ತಿಳಿಸಿದರು.
ತಾಲ್ಲೂಕು ಆರೋಗ್ಯಾಧಿಕಾರಿಗಳ ಕಛೇರಿ ಹಾಸನಾಂಭ ಸಭಾಂಗಣದಲ್ಲಿ,  ಮಲೇರಿಯಾ ಹಾಗೂ ಡೆಂಗ್ಯೂ ವಿರೋಧಿ ಮಾಸಾಚರಣೆ ಅಂಗವಾಗಿ, ತಾಲ್ಲೂಕಿನ ಖಾಸಗಿ ವೈದ್ಯರು ಹಾಗೂ ಪ್ರಯೋಗ ಶಾಲಾ ತಂತ್ರಜ್ಞರಿಗೆ ಮತ್ತು ತಾಲ್ಲೂಕಿನ ಎಲ್ಲಾ ವಸತಿ ನಿಲಯಗಳ/ ವಸತಿ ಶಾಲೆಗಳ ವಾರ್ಡ್ನ್ ಮತ್ತು ಇತರೆ ಸಿಬ್ಬಂದಿಯವರಿಗೆ ಏರ್ಪಡಿಸಲಾಗಿದ್ದ ಅಡ್ವೊಕೆಸಿ ಕಾರ್ಯಗಾರವನ್ನು  ಉದ್ಘಾಟಿಸಿ ಮಾತನಾಡಿದರು.
ಮಲೇರಿಯ ದೃಢಪಟ್ಟರೆ ಕ್ರಮಬದ್ದವಾದ ಚಿಕಿತ್ಸೆಯನ್ನು ನೀಡಿದಾಗ ಮಾತ್ರ ಈ ರೋಗವನ್ನು ನಿರ್ಮೂಲನೆ ಮಾಡಬಹುದು. ರೋಗದ ಮುನ್ನೆಚ್ಚರಿಕೆ ಹಾಗೂ ಸೂಳ್ಳೆಗಳ ನಿಯಂತ್ರಣದ ಬಗ್ಗೆ ಸೂಕ್ತ ಗಮನ ಹರಿಸಬೇಕು.   ತೀವ್ರ ಚಿಕಿತ್ಸೆ, ಸ್ವಯಂ ರಕ್ಷಣಾ ವಿಧಾನಗಳು ಮತ್ತು ಸ್ಥಳೀಯ ವೈದ್ಯರ ಸಹಕಾರದಿಂದ ಮಲೇರಿಯಾ ಪ್ರಸರಣವನ್ನು ತಪ್ಪಿಸಬಹುದು ಎಂದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಜಿ. ಎಸ್. ಸತೀಶ್,    ವೈದ್ಯರುಗಳಾದ ಡಾ. ಡಿ. ಆರ್. ಗಂಗಾಧರ್. ಡಾ.ಗಿರೀಶ್ ಬಸಪ್ಪ ಜಿಲ್ಲಾ ಮೇಲ್ವಿಚಾರಕರಾದ ರಾಮಪ್ಪ ಕೋಳಿ, ನಾಗರಾಜು ಹಾಗೂ ತಾಲ್ಲೂಕು  ಮೇಲ್ವಿಚಾರಕರಾದ  ಸಿ.ಆರ್, ಮೋಹನ್, ಬಿ.ಎಸ್. ಸತೀಶ್ ಹಾಗೂ ಇಲಾಖೆಯ ಆರೋಗ್ಯ ಕಾರ್ಯಕರ್ತರು   ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net