

* ಪ್ರಾಮಾಣಿಕ ಸೇವೆ ಭರವಸೆ * ಸಿಹಿ ಹಂಚಿ ಸಂಭ್ರಮಿಸಿದ ಅಭಿಮಾನಿಗಳು
ಆಲೂರು : ತಾಲೂಕಿನ ಚಿಕ್ಕಕಣಗಾಲು ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ಜೆ.ತಿಮ್ಮನಹಳ್ಳಿಯ ರವಿಪ್ರಕಾಶ, ಉಪಾಧ್ಯಕ್ಷರಾಗಿ ವೀರಭದ್ರಪ್ಪ ಅವಿರೋಧ ಆಯ್ಕೆಯಾದರು. ಸಂಘದ ಕಚೇರಿಯಲ್ಲಿ ಸೋಮವಾರ ಆಯೋಜನೆಗೊಂಡಿದ್ದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ತಿಮ್ಮನಹಳ್ಳಿ ಗ್ರಾಮದ ರವಿಪ್ರಕಾಶ ಹಾ
ಗೂ ಉಪಾಧ್ಯಕ್ಷ ಸ್ಥಾನಕ್ಕೆ ವೀರಭದ್ರಪ್ಪ ಹೊರತುಪಡಿಸಿ ಬೇರೆ ಯಾರೂ ನಾಮ ಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಶಕುಂತಲಾ ಅವರು ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು. ಗುಣಮಟ್ಟದ ಹಾಲು ಪೂರೈಕೆಗೆ ಮುಂದಾಗಿ: ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಹಾಸನ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ಪಿ.ಎಲ್ ಲಿಂಗರಾಜು, ಹೈನುಗಾರರು, ಸಹಕಾರ ಸಂಘಕ್ಕೆ ಗುಣಮಟ್ಟದ ಹಾಲು ಪೂರೈಕೆ ಮಾಡಬೇಕು. ಗುಣಮಟ್ಟದ ಹಾಲಿನಿಂದ ಸಂಘದ ಶ್ರೇಯೋಭಿವೃದ್ಧಿ ಸಾಧ್ಯವಿದೆ ಎಂದರು. ಒಕ್ಕೂಟವು ಹೈನುಗಾರರಿಗೆ ಹತ್ತು ಹಲವು ಸೌಲಭ್ಯಗಳನ್ನು ಕಲ್ಪಿಸುತ್ತಿದೆ. ಇದರ ಸದ್ಬಳಕೆಗೆ ಮುಂದಾಗಿ ಆರ್ಥಿಕ ಸ್ವಾಲವಂಬಿ ಬದುಕನ್ನು ರೂಪಿಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು. ಪ್ರಸ್ತುತ ದಿನಗಳಲ್ಲಿ ಮಹಿಳೆಯರು ಹೈನುಗಾರಿಕೆಯನ್ನು ನಂಬಿ ಜೀವನ ಸಾಗಿಸಿ ಸ್ವಾವಲಂಬಿತನ ಸಾಧಿಸಬೇಕು ಎಂದು ಅವರು ಸಲಹೆ ನೀಡಿದರು.
ಅಧ್ಯಕ್ಷ ರವಿಪ್ರಕಾಶ ಮಾತನಾಡಿ, ಸಂಘದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಸೇವೆ ಮಾಡುವೆ ಎಂದರು. ಹಾಸನ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ, ಸೂಪರ್ ವೈಸರ್, ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ನಿರ್ದೇಶಕರು, ಮಾಜಿ ಅಧ್ಯಕ್ಷರು, ಬೆಂಬಲಿಗರು ಸನ್ಮಾನಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಪರಮೇಶ, ಬೆಳ್ಳೂರು ಸೊಸೈಟಿ ನಿರ್ದೇಶಕ ಧರಣೇಶ್, ಡೇರಿ ನಿಕಟಪೂರ್ವ ಅಧ್ಯಕ್ಷ ಟಿ.ಕೆ ಶಿವಣ್ಣ, ನೂತನ ನಿರ್ದೇಶಕದರಾದ ಮಹೇಶ್ವರಪ್ಪ, ಬಸವಣ್ಣ, ತೀರ್ಥ ಕುಮಾರ ( ಕಟ್ಟೆಗಿಡ), ಗುರು, ಮಾಲಿಂಗಯ್ಯ, ಚಂದ್ರು, ಸುಶೀಲ ಸೋಮಶೇಖರ, ಸಿದ್ದಮ್ಮ, ಮಾಜಿ ಅಧ್ಯಕ್ಷ ಅಣ್ಣಪ್ಪ, ಡೇರಿ ಮೇಲ್ವಿಚಾರಕ ಪುಟ್ಟರಾಜು, ಕಾರ್ಯದರ್ಶಿ ನಾಗರಾಜ್, ಹಾಲು ಪರೀಕ್ಷಕ ರಾಜಶೇಖರ ಹಾಜರಿದ್ದರು.