‘ಗುರು’ವಂದನೆ ಸಲ್ಲಿಸಿದ ಹಳೆಯ ವಿದ್ಯಾರ್ಥಿಗಳು

ಕೆ.ಆರ್.ಪೇಟೆ ತಾಲೂಕಿನ ಅಕ್ಕಿಹೆಬ್ಬಾಳು ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಆಯೋಜಿಸಿದ್ದ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಕೆ.ಆರ್.ಪೇಟೆ ತಾಲೂಕಿನ ಅಕ್ಕಿಹೆಬ್ಬಾಳು ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಆಯೋಜಿಸಿದ್ದ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
Published on

ಕೆ.ಆರ್.ಪೇಟೆ: ತಾಲೂಕಿನ ಅಕ್ಕಿ ಹೆಬ್ಬಾಳು ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆಯಲ್ಲಿ 2001ರಿಂದ 2004ರ ಶೈಕ್ಷಣಿಕ ಅವಧಿಯ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳಿಂದ ಸೋಮವಾರ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಆಯೋಜಿಸಲಾಗಿತ್ತು.

20 ವರ್ಷಗಳ ಬಳಿಕ ಗುರು-ಶಿಷ್ಯರು ಒಂದೆಡೆ ಸೇರಿ ಹಿಂದಿನ ದಿನಗಳನ್ನು ಮೆಲುಕು ಹಾಕಿದರು. ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ ಸಂಭ್ರಮಪಟ್ಟರಲ್ಲದೆ, ತಮ್ಮ ಶಾಲೆಯ ದಿನಗಳನ್ನು ನೆನೆಯುವುದರ ಜತೆಗೆ ಗುರುಗಳನ್ನು ಸ್ಮರಿಸಿ ಭಾವುಕರಾದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪ್ರಾಂಶುಪಾಲ ಜಿ.ಬಾಲಕೃಷ್ಣ, ತಾವು ಕಲಿತ ಶಾಲೆ ಹಾಗೂ ಶಿಕ್ಷಕರನ್ನು ಗುರುತಿಸಿ ಗುರುವಂದನೆ ಮೂಲಕ ಗೌರವ ಸಲ್ಲಿಸುತ್ತಿರುವುದು ನಿಜಕ್ಕೂ ಮೆಚ್ಚುವಂತದ್ದು. ವಿದ್ಯೆ ಕಲಿಸಿದ ಗುರುಗಳನ್ನು ಹಲವು ವರ್ಷಗಳ ನಂತರವೂ ನೆನಪಿನಲ್ಲಿಟ್ಟುಕೊಂಡಿರುವುದು ಸಂತಸದ ವಿಚಾರ ಎಂದರು.

ನಿವೃತ್ತ ಶಿಕ್ಷಕ ಜೆ.ಬಿ.ಬೋರೇಗೌಡ ಮಾತನಾಡಿ, ವಿದ್ಯಾರ್ಥಿಗಳೇ ನಮ್ಮ ಆಸ್ತಿ. ಅಂದು ಅವರಿಗೆ ಕಲಿಸಿದ ವಿದ್ಯೆ ಇಂದು ಹೆಮ್ಮರವಾಗಿ ಬೆಳೆದು ಸಮಾಜಕ್ಕೆ ಉತ್ತಮ ಕೊಡುಗೆಯನ್ನು ನೀಡುತ್ತಿರುವುದು ಗುರುಬಳಗಕ್ಕೆ ಸಂತಸ ತಂದಿದೆ ಎಂದರು.

ಹಿರಿಯ ವಿದ್ಯಾರ್ಥಿನಿ ಎಂ.ಜೆ.ದೀಪಿಕಾ, ವಿದ್ಯಾರ್ಥಿ ದೇವರಾಜ್ ಮಾತನಾಡಿದರು. ನಿವೃತ್ತ ಶಿಕ್ಷಕರಾದ ಎಂ.ಎಸ್.ಪ್ರಶಾಂತ್ ಕುಮಾರ್, ಡಿ.ಎ.ನಿಂಗಪ್ಪ ಸಾಹೀದ ನುಶ್ರತ್, ಉಪನ್ಯಾಸಕರಾದ ಜೆ.ಆರ್.ರಾಜೇಗೌಡ, ಎಂ.ಮಹದೇವ್, ಕೆ.ಎಲ್.ಗಿರೀಶ್, ಶಿಕ್ಷಕರಾದ ಪಿ.ಎನ್.ಶಿವಣ್ಣ, ಎಂ.ವೇದಾವತಿ, ಆಯಿಷಾ ಫಾತಿಮಾ, ಬಿ.ಎಸ್.ಪರಿಮಳಾ, ಎಸ್.ಸಿ. ಚೆಲುವರಾಜು, ಲೀಲಾವತಿ, ಹಮೀದ್ ಖಾನ್, ಎಂ. ಜೆ.ಪುಟ್ಟರಾಜು, ಎಸ್‌ಡಿಎಂಸಿ ಅಧ್ಯಕ್ಷ ಜಮೀರ್ ಅಹಮದ್, ಶಿವಣ್ಣನಾಯಕ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net