ಹಳೇ ವಿದ್ಯಾರ್ಥಿ ಸಂಘದ ದಿನಾಚರಣೆ

New Jabin
Published on

ಹುಬ್ಬಳ್ಳಿ : ಇಲ್ಲಿನ ಕೆಎಲ್​ಇ ಸಂಸ್ಥೆಯ ಪಿ.ಸಿ. ಜಾಬಿನ ವಿಜ್ಞಾನ ಕಾಲೇಜಿನ 40ನೇಯ ಅಲ್ಯುಮಿನಿ ದಿನಾಚರಣೆಯನ್ನು ಕಾಲೇಜಿನ ಸೆಮಿನಾರ್ ಹಾಲ್​ನಲ್ಲಿ ಶುಕ್ರವಾರ ಆಯೋಜಿಸಲಾಗಿತ್ತು.

ಅತಿಥಿಯಾಗಿದ್ದ ಕಾಲೇಜಿನ ಹಳೇಯ ವಿದ್ಯಾರ್ಥಿ ಹಾಗೂ ತತ್ವದರ್ಶ ಆಸ್ಪತ್ರೆಯ ನ್ಯೂರೊ ಸರ್ಜನ್ ಡಾ. ಶಿವಯೋಗಿ ಬಳಿಗಾರ ಮಾತನಾಡಿ, ತಾವು 1980ರಲ್ಲಿ ಈ ಕಾಲೇಜಿನಲ್ಲಿ ಕಲಿತ ಅವಿಸ್ಮರಣೀಯ ಘಟನೆಗಳನ್ನು ಸ್ಮರಿಸುತ್ತ ಕಾಲೇಜು ಈಗ ಅತ್ಯಂತ ವೇಗದಲ್ಲಿ ಬೆಳೆದಿರುವುದನ್ನು ವಿವರಿಸಿದರು. ರಾಷ್ಟ್ರೀಯ ಪುನರಮೌಲೀಕರಣದಲ್ಲಿ ಕಾಲೇಜು ಎ++ ಶ್ರೇಣಿ ಪಡೆದಿರುವುದನ್ನು ಮತ್ತು ಕಾಲೇಜಿನ ಸ್ವಾಯತ್ತತೆ ಹತ್ತು ವರ್ಷಗಳವರೆಗೆ ಮುಂದುವರೆದಿರುವುದನ್ನು ಶ್ಲಾಘಿಸಿದರು.

ಕುಟುಂಬ ಮತ್ತು ವೈಯಕ್ತಿಕ ಜೀವನದ ನಡುವೆ ಸಮತೋಲನ ಕಾಯ್ದುಕೊಳ್ಳಬೇಕು. ಉತ್ತಮ ಭಾವನಾತ್ಮಕ ಅಂಶ, ತಾಳ್ಮೆ, ದೃಢತೆ ಮತ್ತು ಶಿಸ್ತು ಯಶಸ್ಸಿನ ಕೀಲಿಕೈ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

2023-24 ನೇ ಸಾಲಿನ ನಿವೃತ್ತ ಹೊಂದಿದ ಕಾಲೇಜಿನ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.

ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ವಿ.ಆರ್. ವಾಘಮೋಡೆ, ಪದವಿ ಕಾಲೇಜಿನ ಪ್ರಾಚಾರ್ಯ ಡಾ. ಎಲ್.ಡಿ. ಹೊರಕೇರಿ, ಸುಮಂಗಲಾ ಪಾಟೀಲ, ಸತೀಶ ದಬೀರ, ಡಾ. ಜಿ.ಬಿ. ಕಲಕೋಟಿ, ರವೀಂದ್ರ ಬಳಿಗಾರ, ಮಹೇಶ ದ್ಯಾಮಪ್ಪನವರ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net