

ಕಿರುವಾರ ಎಸ್. ಸುದರ್ಶನ್ ಕೋಲಾರ; ಮಹಿಳೆಯರು ಮತ್ತು ಮಕ್ಕಳ ಆರೋಗ್ಯ ಸುಧಾರಣೆಗಾಗಿ ನಿರ್ಮಿಸಿರುವ ನಗರದ ಎಸ್ಎನ್ಆರ್ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಪರಿಸ್ಥಿತಿ ಬಗ್ಗೆ ಹೇಳೋರು, ಕೇಳೊರು ಇಲ್ಲದಂತಾಗಿದೆ.
ಸಾಲು ಸಾಲು ಸಮಸ್ಯೆಗಳು ಕಣ್ಣಮುಂದಿದ್ದರೂ ಅಧಿಕಾರಿಗಳ ದಿವ್ಯ ರ್ನಿಲಕ್ಷ$್ಯದಿಂದ ರೋಗಿಗಳು ಪಡಿಪಾಟಲು ಪಡುವಂತಾಗಿದೆ. ಚಿಕಿತ್ಸೆ ಇರಲಿ, ರೋಗಿಗಳಿಗೆ ಸೌಲಭ್ಯ ದೊರೆಯುವುದು ದೂರದ ಮಾತು ಎಂದು ರೋಗಿಗಳು ಅಲವತ್ತುಕೊಳ್ಳುತ್ತಿದ್ದಾರೆ.
ರಾಜ್ಯ ಮಹಿಳಾ ಆಯೋಗದ ಅಧ್ಯೆ, ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ, ಉಪ ಲೋಕಾಯುಕ್ತರು, ಆರೋಗ್ಯ ಇಲಾಖೆ ಸಚಿವರು ಬಂದು ಹೋದರೂ ಸಮಸ್ಯೆಗಳಿಗೆ ಪರಿಹಾರ ದೊರೆತಿಲ್ಲ. ಸಮಸ್ಯೆಗಳ ಸರಮಾಲೆ ನಡುವೆಯೇ ವೈದ್ಯರು ರೋಗಿಗಳಿಗೆ ಚಿಕಿತ್ಸೆ ನೀಡುವ ಸ್ಥಿತಿ ಇದೆ.
100 ಬೆಡ್ ಸಾಮರ್ಥ್ಯವುಳ್ಳ ಆಸ್ಪತ್ರೆಯಲ್ಲಿ 4 ಮಂದಿ ಪ್ರಸೂತಿ ತಜ್ಞರು, ಐವರು ಮಕ್ಕಳ ತಜ್ಞರು,ಶುಶ್ರೂಷಕಿಯರು, ಡಿ& ಗ್ರೂಪ್ ನೌಕರರು ಇದ್ದಾರೆ. ಇಲ್ಲಿಗೆ ಬಹುತೇಕ ತುರ್ತು ಸಂದರ್ಭದಲ್ಲಿ ಗರ್ಭಿಣಿಯರು, ಮಕ್ಕಳು, ಮಹಿಳೆಯರು ಹೆಚ್ಚಾಗಿ ದಾಖಲಾಗುತ್ತಿದ್ದು, ಸುಸಜ್ಜಿತ ಕಟ್ಟಡ ಇದ್ದರೂ ಒಳಾಂಗಣದಲ್ಲಿ ಸೌಲಭ್ಯ ಮರಿಚೀಕೆಯಾಗಿವೆ.
ವೈದ್ಯರ ಸೇವೆ ಹೊರತು ಪಡಿಸಿದರೆ ರಕ್ತ ಪರೀೆ ಕೇಂದ್ರ, ಸ್ಕಾನಿಂಗ್, ಔಷಧ ಮಳಿಗೆ, ಅಲ್ಪಾವಧಿ ಸಮಯ ಕೆಲಸ ಮಾಡುವ ಒಪಿಡಿ ಕೌಂಟರ್, ಸ್ವಚ್ಛತೆ, ಕುಡಿಯುವ ನೀರು, ಶೌಚಗೃಹಗಳಿಗೆ ಬೀಗ ಹಾಕಿರುವುದು ಹೀಗೆ ಹತ್ತು ಹಲವು ಸಮಸ್ಯೆಗಳು ಅನಾವರಣಗೊಳ್ಳುತ್ತವೆ.
ವೈದ್ಯರಿಗೂ ಮುಜುಗರ ತರುತ್ತಿರುವ ನಾನ್ಕ್ಲಿನಿಕಲ್ ಸಿಬ್ಬಂದಿ:
24/7 ಅಡಿಯಲ್ಲಿ ಆರೋಗ್ಯ ಸೇವೆ ಸಲ್ಲಿಸಲು ವೈದ್ಯರು ಸಿದ್ಧರಿದ್ದರೂ ಕೆಲ ಹಿರಿಯ ಶುಶ್ರೂಷಕಿಯರು, ನಾನ್ ಕ್ಲಿನಿಕಲ್ ಸಿಬ್ಬಂದಿ ಆಡಿದ್ದೆ ಆಟವಾಗಿದ್ದು, ಇದು ವೈದ್ಯರು, ರೋಗಿಗಳ ಆಕ್ರೋಶಕ್ಕೂ ಕಾರಣವಾಗಿದೆ. ನಿತ್ಯ ಸರಾಸರಿ 10 ರಿಂದ 15 ಹೆರಿಗೆ, 800ಕ್ಕೂ ಹೆಚ್ಚು ಮಹಿಳೆಯರು ಮತ್ತು ಮಕ್ಕಳು ಹೊರ ರೋಗಿಗಳು ಚಿಕಿತ್ಸೆಗಾಗಿ ಆಗಮಿಸುತ್ತಾರೆ. ಇವರಿಗೆ ಇಲ್ಲಿ ಚಿಕಿತ್ಸೆಯಾದರೆ ರಕ್ತ ಪರೀೆ, ಔಷಧಕ್ಕಾಗಿ ಹಳೇ ಕಟ್ಟಡಕ್ಕೆ ಹೋಗಬೇಕು. ಆಸ್ಪತ್ರೆಗೆ ಬಂದಿರುವ ರೋಗಿ ಸುತ್ತಾಡಿ ಸುತ್ತಾಡಿಯೇ ಸುಸ್ತಾಗಬೇಕಾಗುವುದೇ ಹೊರತು ಅಗತ್ಯ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತಿಲ್ಲ ಎಂಬುದು ರೋಗಿಗಳು ಅಳಲು.
ಹಳೇ ಸಿಬ್ಬಂದಿಯಿಂದ ದಲ್ಲಾಳಿ ಕೆಲಸ?:
ಆಸ್ಪತ್ರೆಯಲ್ಲಿ ಸುಮಾರು ವರ್ಷಗಳಿಂದ ಕೆಲ ಸಿಬ್ಬಂದಿಯೇ ದಲ್ಲಾಳಿಗಳಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹೆರಿಗೆಗಾಗಿ ಗರ್ಭಿಣಿಯರು ಆಸ್ಪತ್ರೆಗೆ ಬಂದರೆ ಅವರ ಬಳಿ ಹಣ ಪೀಕುವುದು ಮಾಮೂಲಿಯಾಗಿದೆ. ಇದರಿಂದ ವೈದ್ಯರ ಗೌರವಕ್ಕೂ ಧಕ್ಕೆಯುಂಟಾಗುತ್ತಿದೆ. ಆಸ್ಪತ್ರೆಯಲ್ಲಿ ಒಪಿಡಿ ಪತ್ರ ವಿತರಿಸುವ ಕೌಂಟರ್ ಬೆಳಗ್ಗೆ 10 ರಿಂದ ಸಂಜೆ 4 ಗಂಟೆ ಮಾತ್ರ ಕಾರ್ಯನಿರ್ವಹಿಸುತ್ತದೆ. ಆನಂತರ ಆಸ್ಪತ್ರೆಗೆ ಬರುವವರು ತುರ್ತು ಚಿಕಿತ್ಸಾ ಟಕಕ್ಕೆ ಹೋಗಿ ಒಪಿಡಿ ಪಡೆದುಕೊಂಡು ಬರಬೇಕು. ಕೌಂಟರ್ 24/4 ತಾಸು ಕಾರ್ಯನಿರ್ವಹಿಸಬೇಕು ಎಂಬ ನಿಯಮ ಇದ್ದರೂ ಇಲ್ಲಿ ಸಿಬ್ಬಂದಿಯೇ ಸಮಯ ನಿಗದಿ ಮಾಡಿಕೊಂಡಿದ್ದು, ಬೀಗ ಹಾಕಿಕೊಂಡು ಹೋಗುತ್ತಾರೆ. ಇದರಿಂದ ರೋಗಿಗಳು ಪರದಾಡುವಂತಾಗಿದೆ.
ರಕ್ತ ಪರೀಕ್ಷಾ ಕೇಂದ್ರ, ಔಷಧ ಮಳಿಗೆ ಪ್ರಾರಂಭಿಸಲಿ
ಹೆರಿಗೆಗಾಗಿ ಆಗಮಿಸುವವರಿಗೆ ತುರ್ತಾಗಿ ಎಎನ್ಡಿ ಪ್ರೊೈಲ್, ಆರ್ಎ್ಟಿ, ಆರ್ಟಿಎಪಿಟಿಟಿಐಎನ್ಆರ್ ಸೇರಿ ವಿವಿಧ ರೀತಿಯ ರಕ್ತ ಪರೀೆಗಳನ್ನು ಕಡ್ಡಾಯವಾಗಿ ಮಾಡಿಸಬೇಕು. ಆದರೆ ಇಲ್ಲಿ ಪ್ರಯೋಗಾಲಯ ಸೌಲಭ್ಯ ಇದ್ದರೂ ಸಹ ಬೀಗ ಹಾಕಲಾಗಿದೆ. ರಕ್ತ ಪರೀೆ ಮಾಡಿಸಬೇಕಾದರೆ ಹಳೇ ಕಟ್ಟಡಕ್ಕೆ ಹೋಗಬೇಕಾದ ಪರಿಸ್ಥಿತಿಯಿದೆ. ವೈದ್ಯರು ಶಿಾರಸು ಮಾಡುವ ಪರೀೆಗಳು ಆಸ್ಪತ್ರೆಗಳಲ್ಲಿ ಲಭ್ಯವಾಗದೆ ಇರುವುದರಿಂದ ಹೊರಗಡೆ ಮಾಡಿಸಬೇಕಾದ ಪರಿಸ್ಥಿತಿ ಎದುರಾಗಿದೆ. ರಕ್ತ ಪರೀಾ ಕೇಂದ್ರ ಮತ್ತು ಔಷಧ ಮಳಿಗೆಗೆ ಬೀಗ ಹಾಕಿದ್ದು, ರೋಗಿಗಳ ಹಿತ ದೃಷ್ಟಿಯಿಂದ ಸೇವೆ ಪ್ರಾರಂಭಿಸಬೇಕು ಎಂದು ರೋಗಿಗಳು ಒತ್ತಾಯಿಸಿದ್ದಾರೆ.
ಶುಶ್ರೂಷಕಿಯರ ವರ್ತನೆಗೆ ಆಕ್ರೋಶ
ಆಸ್ಪತ್ರೆಯಲ್ಲಿನ ಕೆಲ ಹಿರಿಯ ಶುಶ್ರೂಷಕಿಯರು ಹಲವು ವರ್ಷಗಳಿಂದ ಬೇರೂರಿದ್ದು, ಕೆಲಸದಲ್ಲಿ ಉದಾಸೀನ ತೋರುತ್ತಾರೆ ಎಂಬ ಆರೋಪ ಕೇಳಿ ಬಂದಿದೆ. ತುರ್ತು ಸಂದರ್ಭದಲ್ಲಿ ರೋಗಿಗಳಿಗೆ ಸೇವೆ ನೀಡುವುದಿಲ್ಲ. ವೈದ್ಯರು ಇರುವುದು ಏಕೆ ಎಂದು ದರ್ಪ ತೋರುವುದು, ಒಳ ರೋಗಿಗಳಿಗೆ ಸಕಾಲಕ್ಕೆ ಚಿಕಿತ್ಸೆ ನೀಡದಿರುವುದು, ರೋಗಿ ಡಿಸ್ಚಾರ್ಜ್ ಆಗಿ ಮನೆಗೆ ಕಳುಹಿಸಬೇಕಾದರೆ ಔಷಧ ತಂದುಕೊಡದಿರುವುದು... ಹೀಗೆ ಕರ್ತವ್ಯಲೋಪ ಎಸಗುತ್ತಾರೆ ಎಂದು ರೋಗಿಗಳು ದೂರುತ್ತಾರೆ.
ಸ್ವಚ್ಛತೆ ಮರೀಚಿಕೆ
ಆಸ್ಪತ್ರೆಯನ್ನು ಮೂರು ಬಾರಿ ಸ್ವಚ್ಛತೆ ಮಾಡಬೇಕಾಗಿರುವ ನಾನ್ ಕ್ಲಿನಿಕಲ್ ಸಿಬ್ಬಂದಿ ಬೆಳಗ್ಗೆ ಮಾತ್ರ ಸ್ವಚ್ಛಗೊಳಿಸಿ ಸುಮ್ಮನಾಗುತ್ತಾರೆ. ಬೆಳಗ್ಗೆ 8 ಗಂಟೆಗೆ, ಮಧ್ಯಾಹ್ನ 2 ಗಂಟೆಗೆ ಹಾಗೂ ಸಂಜೆ 8 ಗಂಟೆಗೆ ಕಡ್ಡಾಯವಾಗಿ ವಾರ್ಡ್, ವೈದ್ಯರ ಕೊಠಡಿ, ಶಸ್ತ್ರ ಚಿಕಿತ್ಸೆ ಕೊಠಡಿ ಸ್ವಚ್ಛಗೊಳಿಸಬೇಕು. ಇದನ್ನು ಪರಿಶೀಲನೆ ಮಾಡಬೇಕಾಗಿರುವ ಶುಶ್ರೂಷಕಿಯರು, ಮಾನ್ಯಟ್ರಿನ್ ಅವರು ಏನೂ ಸಂಬಂಧವಿಲ್ಲದಂತೆ ಸುಮ್ಮನಿರುತ್ತಾರೆ.
ಸುಮಾರು ವರ್ಷಗಳಿಂದ ಒಂದೇ ಕಡೆ ಕೆಲಸ ಮಾಡಿಕೊಂಡಿರುವ ಸಿಬ್ಬಂದಿಯನ್ನು ಬೇರೆ ಕಡೆಗೆ ವರ್ಗಾವಣೆ ಮಾಡಬೇಕು. ಮುಚ್ಚಲಾಗಿರುವ ಔಷಧ ಮಳಿಗೆ, ರಕ್ತ ಪರೀಕ್ಷಾ ಕೇಂದ್ರವನ್ನು ರೋಗಿಗಳ ಹಿತದೃಷ್ಟಿಯಿಂದ ಪ್ರಾರಂಭಿಸಬೇಕು.
- ಈಕಂಬಳ್ಳಿ ಮಂಜುನಾಥ್
ರೈತ ಸಂದ ಜಿಲ್ಲಾಧ್ಯಕ್ಷ, ಕೋಲಾರ