ಪರ್ಯಾಯ ಗೋದಾಮುಗಳ ವ್ಯವಸ್ಥೆಗೆ ಚಿಂತನೆ

25 snd 02
ಸಿಂಧನೂರು ತಹಸಿಲ್ ಕಚೇರಿಯಲ್ಲಿ ಶಾಸಕ ಹಂಪನಗೌಡ ಬಾದರ್ಲಿ, ಜೋಳ ಬೆಳೆದ ರೈತರೊಂದಿಗೆ ಚರ್ಚಿಸಿದರು. ತಹಸೀಲ್ದಾರ್ ಅರುಣ್ ದೇಸಾಯಿ, ತಾಪಂ ಇಒ ಚಂದ್ರಶೇಖರ ಇದ್ದರು.
Published on

ಸಿಂಧನೂರು: ಬೆಂಬಲ ಬೆಲೆಯಲ್ಲಿ ಖರೀದಿಯಾದ ಜೋಳ ಸಂಗ್ರಹಣೆಗೆ ಗೋದಾಮುಗಳ ಸಮಸ್ಯೆಯಾಗಿದ್ದು ಬೇರೆ ಕಡೆ ಗೋದಾಮುಗಳ ವ್ಯವಸ್ಥೆಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಶಾಸಕ ಹಂಪನಗೌಡ ಬಾದರ್ಲಿ ತಿಳಿಸಿದರು.

ನಗರದ ತಹಸಿಲ್ ಕಚೇರಿಯಲ್ಲಿ ಬುಧವಾರ ತಮ್ಮನ್ನು ಭೇಟಿ ಮಾಡಿದ ರೈತರೊಂದಿಗೆ ಸುದೀರ್ಘವಾಗಿ ಚರ್ಚೆ ನಡೆಸಿ ಮಾತನಾಡಿದರು. ಖರೀದಿಯಾದ ಜೋಳ ಸಂಗ್ರಹಿಸಿಕೊಳ್ಳಲು ಗೋದಾಮುಗಳ ಸಮಸ್ಯೆಯಾಗಿದೆ. ಈಗಾಗಲೇ ಕಂಪ್ಲಿ ಸೇರಿ ಇತರ ಕಡೆಗಳಲ್ಲಿ ಗೋದಾಮುಗಳು ತುಂಬಿದ್ದು ಈಗ ರೈತರ ಜೋಳಗಳಿಗೆ ಗೋದಾಮು ಸಮಸ್ಯೆಯಾಗಿದೆ. ಈಗಾಗಲೇ ಸಂಬಂಧಿಸಿದ ಎಂಡಿ ಜತೆಗೆ ಮಾತನಾಡಿರುವೆ. ಆದಷ್ಟು ಶೀಘ್ರವೇ ಪರಿಹಾರ ನೀಡಲು ಚಿಂತನೆ ನಡೆಸಲಾಗುತ್ತಿದೆ ಎಂದರು.

ಸೂಚನೆ: ಈ ಮೊದಲು ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಶಾಸಕ ಹಂಪನಗೌಡ ಬಾದರ್ಲಿ, ಆಯಾ ಇಲಾಖೆಗೆ ಸಂಬಂಧಿಸಿದಂತೆ ಯೋಜನೆ ಸೇರಿ ಇತರ ಸೌಲಭ್ಯ ಒದಗಿಸುವುದಕ್ಕೆ ಸಂಬಂಧಿಸಿದಂತೆ ಪ್ರಸ್ತಾವನೆ ಸಿದ್ಧಗೊಳಿಸಿದರೆ, ಅನುದಾನ ಒದಗಿಸಲಾಗುವುದು. ಅದಕ್ಕಾಗಿ ವರದಿ ಸಿದ್ಧಗೊಳಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net