

ಚಿಕ್ಕೋಡಿ: ವಿದ್ಯಾರ್ಥಿಗಳು ಮೊಬೈಲ್ ವ್ಯಸನದಿಂದ ದೂರ ಉಳಿಯಬೇಕು ಎಂದು ಉಪನ್ಯಾಸಕ ರವಿ ಭಜಂತ್ರಿ ಹೇಳಿದರು.
ಇಲ್ಲಿನ ಸಿಟಿಇ ಸಂಸ್ಥೆಯ ಆರ್.ಡಿ.ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ, ಸಾಂಸ್ಕೃತಿಕ, ಕ್ರೀಡಾ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ನಿರಂತರ ಅಭ್ಯಾಸ ಮಾಡಬೇಕು ಎಂದರು.
ಪ್ರಾಚಾರ್ಯ ಯು.ಎಸ್.ಶಿಂಧೆ ಮಾತನಾಡಿ, ವಿದ್ಯಾರ್ಥಿಗಳು ಪಠ್ಯದ ಜತೆ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಎಂದರು. ಎನ್.ವಿ.ಶಿರಗಾಂವಕರ ಮಾತನಾಡಿದರು. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು.
ಉಪನ್ಯಾಸಕರಾದ ಪಿ.ಎ. ಕುಲಕರ್ಣಿ, ಎ.ಎಲ್.ಮಾನೆ, ಆರ್.ಆರ್.ಓತಾರೆ, ಜೆ.ಬಿ.ಪಾಟೀಲ, ಡಿ.ಎಂ.ಕಾಳಿಂಗೆ, ಡಿ.ಟಿ.ಸಾಳುಂಕೆ, ಎಲ್.ಜಿ.ತೋಟಗಿ, ಎಸ್.ಎಚ್.ಜಮಾದಾರ, ಎಸ್.ಬಿ.ಪಾಟೀಲ, ಎಸ್.ಎ.ಬೋಸಲೆ, ಎಂ.ಎಸ್.ಕುಲಕರ್ಣಿ, ಎಸ್.ಎಂ.ಕವಟಗಿಮಠ, ಎನ್.ಆರ್.ಕುಲಕರ್ಣಿ, ಡಿ.ಎಸ್.ವಂಜಿರೆ ಇತರರು ಇದ್ದರು. ಪಿ.ಆರ್.ಮನಗೂಳಿ ಸ್ವಾಗತಿಸಿದರು. ಸುಜಾತಾ ರಾಯಣ್ಣವರ ನಿರೂಪಿಸಿದರು. ಎನ್.ಪಿ.ಚಿಟ್ನಿಸ ವಂದಿಸಿದರು.