ಎನ್‌ಟಿಪಿಸಿ ಕಾರ್ಮಿಕರಿಂದ ಪ್ರತಿಭಟನೆ

NTPC, Labour, Golasangi, Suspension, Fine, Coal, Manjunatha Bellada, Cylinder,
ಗೊಳಸಂಗಿ ಸಮೀಪದ ಕೂಡಗಿ ಎನ್‌ಟಿಪಿಸಿ ಕಾರ್ಮಿಕನಿಗೆ ದಂಡ ವಿಧಿಸಿರುವ ಕ್ರಮ ವಿರೋಧಿಸಿ ಕಾರ್ಮಿಕರು ಶನಿವಾರ ಪ್ರತಿಭಟನೆ ನಡೆಸಿದರು. ಸಂಘಟನೆ ಅಧ್ಯಕ್ಷ ಆರೀಫ್ ತಾಳಿಕೋಟಿ, ಕಾರ್ಮಿಕ ಮುಖಂಡ ಮಂಜುನಾಥ ಬೆಲ್ಲದ, ರಾಜೇಂದ್ರ ಕಾಂಬಳೆ ಇದ್ದರು.
Published on

ಗೊಳಸಂಗಿ: ಸಮೀಪದ ಕೂಡಗಿ ಎನ್‌ಟಿಪಿಸಿಯ ಕಾರ್ಮಿಕನನ್ನು ಹತ್ತು ದಿನ ಅಮಾನತು ಮಾಡಿ, ಹತ್ತು ಸಾವಿರ ರೂ. ದಂಡ ವಿಧಿಸಿದ್ದನ್ನು ವಿರೋಧಿಸಿ ಕಾರ್ಮಿಕರು ಎನ್‌ಟಿಪಿಸಿ ಸ್ಥಾವರದ ಮುಖ್ಯದ್ವಾರದ ಎದುರು ಶನಿವಾರ ಪ್ರತಿಭಟನೆ ನಡೆಸಿದರು.

ಎನ್‌ಟಿಪಿಸಿಯ ಕಂಪನಿಯೊಂದರಲ್ಲಿ ಕಲ್ಲಿದ್ದಲು ಪೂರೈಕೆ ವಿಭಾಗದ ವ್ಯಾಗನ್ ಟಿಪ್ಪರ್ ಡೋಜರ್ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ ಮಂಜುನಾಥ ಬೆಲ್ಲದಗೆ ದಂಡ ವಿಧಿಸಲಾಗಿದೆ.

ಕೆಲಸದ ವೇಳೆ ಪಕ್ಕದಲ್ಲಿದ್ದ್ದ ಸಿಲೆಂಡರ್‌ಗೆ ಕಲ್ಲು ಬಡಿದಿದೆ ಎಂಬ ಕಾರಣದಿಂದ ಮಂಜುನಾಥನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಕಂಪನಿಯ ಕ್ರಮ ವಿರೋಧಿಸಿ 26 ಕಾರ್ಮಿಕರು ಸ್ಥಾವರದ ಮುಖ್ಯ ಪ್ರವೇಶ ದ್ವಾರದ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಮಂಜುನಾಥ ಬೆಲ್ಲದ, ರಾಜೇಂದ್ರ ಕಾಂಬಳೆ, ಸೋಮು ಲಮಾಣಿ, ರಸೂಲಸಾಬ ಹೊಸಟಿ, ಪರಶುರಾಮ ವಾಲಿಕಾರ, ವಾಚು ಲಮಾಣಿ, ಶಿವಾನಂದ ದೊಡಮನಿ, ಮಹಾದೇವ ದಳವಾಯಿ, ವಸಂತ ಭಜಂತ್ರಿ, ಸಂತೋಷ ಬಿರಾದಾರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಎನ್‌ಟಿಪಿಸಿಯಲ್ಲಿ ಕಾರ್ಯ ನಿರ್ವಹಿಸುವ ಕಾರ್ಮಿಕರಿಗೆ ಅಧಿಕಾರಿಗಳು ವಿನಾಕಾರಣ ಕಿರುಕುಳ ನೀಡುತ್ತಿದ್ದಾರೆ. ಪ್ರತಿ ತಿಂಗಳು ನೀಡಬೇಕಿದ್ದ ಬೋನಸ್ 13 ತಿಂಗಳಿಂದ ನೀಡಿಲ್ಲ. ಆರೀಫ್ ತಾಳಿಕೋಟಿ, ಎನ್‌ಟಿಪಿಸಿ ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net