ಸಾಮಾಜಿಕ ಹೋರಾಟದಲ್ಲಿಯೂ ಮುಂಚೂಣಿ

ಕೊಟ್ಟೂರಿನ ಚಾನುಕೋಟಿ ಮಠದಲ್ಲಿ ಹಮ್ಮಿಕೊಂಡಿದ್ದ ಡಾ.ಸಿದ್ದಲಿಂಗ ಶಿವಾಚಾರ್ಯರ ಷಷ್ಠಿ ಸಂಭ್ರಮ ಹಾಗೂ ಪಂಚಾಚಾರ್ಯರ ಯುಗಮನೋತ್ಸವ ಕಾರ್ಯಕ್ರಮಕ್ಕೆ ಜಿಪಂ ಮಾಜಿ ಉಪಾಧ್ಯಕ್ಷ ಪಿ.ಎಚ್.ದೊಡ್ಡರಾಮಣ್ಣ ಚಾಲನೆ ನೀಡಿದರು. ಉಜ್ಜಿನಿ ಪೀಠದ ಜಗದ್ಗುರು ಸಿದ್ದಲಿಂಗ ರಾಜದೇಶಿ ಕೇಂದ್ರ ಶಿವಾಚಾರ್ಯರು, ಶ್ರೀಮಠದ ಡಾ.ಸಿದ್ದಲಿಂಗ ಶಿವಾಚಾರ್ಯರು ಇತರರಿದ್ದರು.

Published on

ಕೊಟ್ಟೂರು: ಚಾನುಕೋಟಿ ಮಠ ಶೈಕ್ಷಣಿಕ, ದಾಸೋಹ ಮತ್ತು ಸಾಮೂಹಿಕ ವಿವಾಹಗಳ ಸಾಮಾಜಿಕ ಕ್ರಾಂತಿ ಮಾಡಿದೆ ಎಂದು ಜಿಪಂ ಮಾಜಿ ಉಪಾಧ್ಯಕ್ಷ ಪಿ.ಎಚ್.ದೊಡ್ಡರಾಮಣ್ಣ ಹೇಳಿದರು.

ಕೊಟ್ಟೂರಿನ ಚಾನುಕೋಟಿ ಮಠದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಷಷ್ಠಿ ಹಾಗೂ ಪಂಚಾಚಾರ್ಯರ ಯುಗಮನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಶ್ರೀಗಳು ಕೇವಲ ಮಠದ ಧಾರ್ಮಿಕ ಸೇವೆಗೆ ಸೀಮಿತವಾಗದೆ ಸಾಮಾಜಿಕ ಹೋರಾಟದಲ್ಲಿಯೂ ಮುಂಚೂಣಿಯಲ್ಲಿದ್ದರು. ಕೆರೆಗಳಿಗೆ ನೀರು ತುಂಬಿಸುವ ಹೋರಾಟದಲ್ಲಿ ನೇತೃತ್ವ ವಹಿಸಿ ಕೆರೆಗೆ ನೀರು ತುಂಬಿಸಿದರು ಎಂದರು.

ಉಜ್ಜಿನಿ ಪೀಠದ ಜಗದ್ಗುರು ಸಿದ್ದಲಿಂಗ ರಾಜದೇಶಿ ಕೇಂದ್ರ ಶಿವಾಚಾರ್ಯರು. ಶ್ರೀಮಠದ ಡಾ.ಸಿದ್ದಲಿಂಗ ಶಿವಾಚಾರ್ಯರು, ಜಿಪಂ ಮಾಜಿ ಉಪಾಧ್ಯಕ್ಷ ಪಿ.ಎಚ್.ದೊಡ್ಡರಾಮಣ್ಣ, ಪ್ರಮುಖರಾದ ಲಕ್ಷ್ಮೀ ಚನ್ನಪ್ಪ. ಪಕ್ಕೀರಪ್ಪ. ಶಂಬುನಾಥ ಶೆಟ್ಟಿ. ಕೋಗಳಿ ಕೊಟ್ರೇಶ, ಡಾ. ವಿಜಯಕುಮಾರ್, ಮರಿಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net