ಮೂಲ ವಿಜ್ಞಾನದಲ್ಲಿ ಸಂಶೋಧನೆ -ಡಾ.ಪ್ರವೀಣ್ ಮಾರ್ಟಿಸ್

yyyyyyyyy
Published on





ಮಂಗಳೂರು : ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಸ್ನಾತಕೋತ್ತರ ರಸಾಯನಶಾಸ್ತ್ರ ಅಧ್ಯಯನ ಮತ್ತು
ಸಂಶೋಧನಾ ವಿಭಾಗದ ವತಿಯಿಂದ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ಅನೆಲಿಸ್ಟ್-24 ರಾಷ್ಟ್ರೀಯ ಮಟ್ಟದ ಅಂತರ ಕಾಲೇಜು ಫೆಸ್ಟ್ ನಡೆಯಿತು.
ಮುಖ್ಯ ಅತಿಥಿಯಾಗಿದ್ದ ಮಣಿಪಾಲದ ಮಾಹೆಯ ಕಾರ್ಪೊರೇಟ್ ಸಂಬಂಧಗಳ ನಿರ್ದೇಶಕ ಡಾ.ಹರೀಶ್‌ಕುಮಾರ್ ಎಸ್ ಮಾತನಾಡಿ ಪರಿಸರವನ್ನು ಎಲ್ಲ ಜೀವಿಗಳಿಗೆ ಆರೋಗ್ಯಕರ ಸ್ಥಳವನ್ನಾಗಿ ಮಾಡಲು ಸಂರಕ್ಷಿಸುವಲ್ಲಿ ರಸಾಯನ ಶಾಸ್ತ್ರಜ್ಞರು ಪ್ರಮುಖ ಪಾತ್ರ ವಹಿಸುತ್ತಾರೆ ಎಂದರು.
ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಕುಲಪತಿ ಡಾ.ಪ್ರವೀಣ್ ಮಾರ್ಟಿಸ್ ಮಾತನಾಡಿ ವಿದ್ಯಾರ್ಥಿಗಳು ಉನ್ನತ ಗುರಿ ಮತ್ತು ಮೂಲ ವಿಜ್ಞಾನದಲ್ಲಿ ಸಂಶೋಧನೆಯತ್ತ ಗಮನ ಹರಿಸ ಬೇಕು ಎಂದರು. ಸಂತ ಅಲೋಶಿಯಸ್ ಸಂಸ್ಥೆಗಳ ರೆಕ್ಟರ್ ಫಾ.ಮೆಲ್ವಿನ್ ಜೋಸೆಫ್ ಪಿಂಟೊ ಅಧ್ಯಕ್ಷತೆ ವಹಿಸಿದ್ದರು.
ರಿಜಿಸ್ಟ್ರಾರ್ ಡಾ.ಅಲ್ವಿನ್ ಡೇಸಾ, ಡಾ.ರೊನಾಲ್ಡ್ ನಜರೆತ್, ಡಾ. ಆಶಾ ಅಬ್ರಹಾಂ, ರಸಾಯನ ಶಾಸ್ತ್ರ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥೆ ಡಾ. ವಿನೋಲಾ ರಾಡ್ರಿಗಸ್, ಕಾರ್ಯಕ್ರಮದ ಸಂಚಾಲಕಿ ಡಾ. ಅಕ್ಷತಾ ಆರ್.ಸಾಲಿಯಾನ್, ವಿದ್ಯಾರ್ಥಿ ಸಂಯೋಜಕರಾದ ಲಿಷ್ಮಾ ಡಿಸೋಜಾ ಮತ್ತು ವೈಶಾಕ್ ಉಪಸ್ಥಿತರಿದ್ದರು. ಕಾವ್ಯಾ ಗಣೇಶ್ ಸಾಲಿಯಾನ್ ಕಾರ್ಯಕ್ರಮ ನಿರೂಪಿಸಿದರು.
ಪದವಿ ವಿಭಾಗದಲ್ಲಿ ಮಂಗಳೂರಿನ ಯುನಿವರ್ಸಿಟಿ ಕಾಲೇಜು ಸಮಗ್ರ ಚಾಂಪಿಯನ್‌ಶಿಪ್ ಮತ್ತು ಸಂತ ಆಗ್ನೆಸ್ ಕಾಲೇಜು (ಸ್ವಾಯತ್ತ)ರನ್ನರ್ ಅಪ್ ಪಡೆಯಿತು. ಸ್ನಾತಕೋತ್ತರ ವಿಭಾಗದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ರಸಾಯನಶಾಸ್ತ್ರ ವಿಭಾಗ,
ಮಂಗಳಗಂಗೋತ್ರಿ ಸಮಗ್ರ ಚಾಂಪಿಯನ್‌ಶಿಪ್ ಮತ್ತು ಉಜಿರೆಯ ಎಸ್‌ಡಿಎಂ ಕಾಲೇಜು ರನ್ನರ್ ಅಪ್ ಪಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net