ವಿದ್ಯಾಭ್ಯಾಸದ ಜತೆಗೆ ಸಂಗೀತ ಕಲಿಕೆಯು ಮುಖ್ಯ

11 rtl 1
Published on

ರಟ್ಟಿಹಳ್ಳಿ: ಪಟ್ಟಣದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರಾವಣ ಮಾಸದ ನಿಮಿತ್ತ ಶ್ರೀ ಗುರು ಕೃಪಾ ಸಂಗೀತ ಸಂಸ್ಥೆಯ ಉದ್ಘಾಟನೆ ಮತ್ತು ಸಂಗೀತ ಶ್ರಾವಣ ಕಾರ್ಯಕ್ರಮ ಭಾನುವಾರ ಜರುಗಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವರ್ತಕ ಶಂಭಣ್ಣ ಗೂಳಪ್ಪನವರ, ಮಕ್ಕಳಿಗೆ ವಿದ್ಯಾಭ್ಯಾಸದ ಜತೆಗೆ ಸಂಗೀತ ಕಲಿಕೆಯು ಸಹ ಮುಖ್ಯವಾಗಿರುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳಿಗಾಗಿ ಶ್ರೀ ಗುರು ಕೃಪಾ ಸಂಗೀತ ಸಂಸ್ಥೆಯು ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಮತ್ತು ವಾದನ ತರಬೇತಿ ನೀಡಲು ಪ್ರಾರಂಭಿಸಿದೆ. ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಎನ್.ಸಿ.ಕಠಾರೆ ಮಾತನಾಡಿ, ಮನಷ್ಯನ ಒತ್ತಡದ ಪರಿಸ್ಥಿತಿಯಲ್ಲಿ ಸಂಗೀತ ಎಂಬುದು ಮನಸಿನಗೆ ನೆಮ್ಮದಿ, ಉತ್ಸಾಹ ಮತ್ತು ಚೇತನ ನೀಡುವ ಔಷಧವಾಗಿದೆ ಎಂದರು.

ಕಬ್ಬಿಣಕಂತಿಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ನಂತರ ನಡೆದ ಸಂಗೀತ ಕಾರ್ಯಕ್ರಮ ಮನಸೂರೆಗೊಂಡಿತು. ಪವನಕುಮಾರ ಬಡಿಗೇರ ಗಾಯನ, ಮನೋಜ ಹುಲ್ಮನಿ ಸಿತಾರ ವಾದನ, ಯೋಗಾನಂದ ಭಟ್ ತಬಲಾ ಸೋಲೊ ನಿರ್ವಹಿಸಿದರು.

ಕಾಳಿಕಾಂಬ ಸಂಗೀತ ಪಾಠ ಶಾಲೆಯ ಸೋಮೇಶ್ವರ ಮೇಸ್ತಾ, ಆರ್.ಜಿ. ದ್ಯಾವಕ್ಕಳವರ, ಪ್ರಾಚಾರ್ಯ ಎ.ಜಿ. ರಾಘವೇಂದ್ರ, ಡಾ.ಸಿ.ಎಸ್.ಕಮ್ಮಾರ, ಗುಡ್ಡಚಾರಿ ಕಮ್ಮಾರ, ಚಿರಂಜೀವಿ ಪೂಜಾರ ಇತರರು ಇದ್ದರು. ಹಿರೇಕೆರೂರು ಹನಿಕೇತನ ಸಂಗೀತ ಪಾಠ ಶಾಲೆಯಿಂದ ಪ್ರಾರ್ಥನೆ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net