

ಗೋಕಾಕ: ಪವಿತ್ರ ಶಿಣ ವೃತ್ತಿ ಅಲಂಕರಿಸಲಿರುವ ಪ್ರಶಿಣಾರ್ಥಿಗಳು ಶಿಣದೊಂದಿಗೆ ಸಂಸ್ಕಾರ ಅಳವಡಿಸಿಕೊಳ್ಳಬೇಕು ಎಂದು ನಿವೃತ್ತ ಪ್ರಾಚಾರ್ಯ ಡಾ.ಬಿ.ಜಿ.ಧಾರವಾಡ ಹೇಳಿದರು.
ನಗರದ ಶ್ರೀ ಲಕ್ಷ$್ಮಣರಾವ್ ಜಾರಕಿಹೊಳಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹಸಮ್ಮೇಳನ ಹಾಗೂ ದೀಪದಾನ ಸಮಾರಂಭದಲ್ಲಿ ಮಾತನಾಡಿದ ಅವರು, ತಾಳ್ಮೆ ಹಾಗೂ ಸತತ ಪರಿಶ್ರಮದಿಂದ ಸುಲಭವಾಗಿ ಪರೀೆ ಎದುರಿಸಬಹುದು. ಸಂಸ್ಕಾರಯುತವಾಗಿ ಶಿಣ ಸಂಸ್ಥೆ ಬೆಳೆಯುತ್ತಿದೆ. ಕಲಿತ ಜ್ಞಾನದ ಲವಾಗಿವ ಜೀವನದಲ್ಲಿ ಮಾದರಿಯಾಗಿ ಕಾರ್ಯನಿರ್ವಹಿಸಬೇಕು. ಪ್ರತಿಭಾನ್ವಿತರಿಗೆ ಹೆಚ್ಚಿನ ಉದ್ಯೋಗವಕಾಶಗಳಿದ್ದು, ಸದುಪಯೋಗ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಪ್ರಾಚಾರ್ಯ ಡಾ.ಎ.ಬಿ.ಪಾಟೀಲ, ವಿದ್ಯಾರ್ಥಿ ಪ್ರತಿನಿಧಿಗಳಾದ ಶಿಲ್ಪಾ ಪಟಗುಂದಿ, ದೀಪಾ ಹಿರಿಹೊಳಿ ಇತರರಿದ್ದರು. ತಷ್ಕಿನ್ ಅಕಾನಿ ಸ್ವಾಗತಿಸಿದರು. ರಾವೇಂದ್ರ ನಿಂಗನ್ನವರ ನಿರೂಪಿಸಿದರು. ಶ್ವೇತಾ ಹುಬ್ಬಳ್ಳಿ ವಂದಿಸಿದರು.