ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರವೂ ಮುಖ್ಯ

3 vikram 5
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಇಂದಿನ ದಿನಗಳಲ್ಲಿ ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರ, ಸಂಸತಿ ಕಲಿಸುವ ಅಗತ್ಯವಿದೆ ಎಂದು ಅಮ್ಮಿನಬಾವಿ ಪಂಚಗೃಹ ಹಿರೇಮಠದ ಶ್ರೀ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನಗರದ ಶ್ರೀ ವೆಂಕಟೇಶ್ವರ ದೇವಸ್ಥಾನ ಟ್ರಸ್ಟ್​ ವತಿಯಿಂದ ಇಲ್ಲಿನ ಯಾಲಕ್ಕಿ ಶೆಟ್ಟರ್​ ಕಾಲನಿ ಶಾರದಾ ಬಡಾವಣೆಯಲ್ಲಿ ನಿಮಿರ್ಸಿರುವ ನೂತನ ದೇವಸ್ಥಾನ ಉದ್ಘಾಟನಾ ಸಮಾರಂಭ ನಿಮಿತ್ತ ಗುರುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.

ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಸಂಸ್ಕಾರದ ಕೊರತೆ ಕಾಣುತ್ತಿದೆ. ಶಿಕ್ಷಣ, ಸಂಸ್ಕಾರದಿಂದ ಮಾತ್ರ ಸಮಾಜ ಸುಧಾರಣೆ ಸಾಧ್ಯ. ಹೀಗಾಗಿ ಪಾಲಕರು ಶಿಕ್ಷಣದಷ್ಟೇ ಮಹತ್ವವನ್ನು ಸಂಸ್ಕಾರ, ಧರ್ಮ, ಸಂಸತಿಗೂ ನೀಡಬೇಕು. ಬಾಲ್ಯದಿಂದಲೇ ಈ ಮೌಲ್ಯಗಳು ಸಿಕ್ಕಾಗ ಮಾತ್ರ ಅವರು ಸಂಸ್ಕಾರವಂತರಾಗಲು ಸಾಧ್ಯ. ಇಂತಹ ಧಾಮಿರ್ಕ ಕಾರ್ಯಕ್ರಮಗಳಿಗೆ ಸಹ ಮಕ್ಕಳನ್ನು ಕರೆತರುವ ಮೂಲಕ ಅವರಲ್ಲಿ ಅಧ್ಯಾತ್ಮದ ಆಸಕ್ತ ಮೂಡಿಸಬೇಕು ಎಂದರು.

ಬೆಳಗ್ಗೆ ಬೆಂಗಳೂರಿನ ಶ್ರೀ ಅವಿಚ್ಛಿನ್ನ ಪರಂಪರ ಕೂಡಲಿ ಶೃಂಗೇರಿ ಮಹಾಸಂಸ್ಥಾನ ಮಠದ ಶ್ರೀ ವಿದ್ಯಾ ವಿಶ್ವೇಶ್ವರ ಭಾರತೀ ಸ್ವಾಮೀಜಿ ಸಾನ್ನಿಧ್ಯ, ವೇದಮೂತಿರ್ ರಮೇಶ ಭಟ್​ ಜೋಶಿ ಹಾಗೂ ಶ್ರೀಮನ್​ ನಾರಾಯಣ ಭಟ್​ ಜೋಶಿ ನೇತೃತ್ವದಲ್ಲಿ ವೇದಪಾರಾಯಣ, ಮೂತಿರ್ಗಳ ಪ್ರಾಣಪ್ರತಿಷ್ಠೆ, ಉತ್ತರಾಂಗ ಹೋಮ, ಮಹಾಪೂರ್ಣಾಹುತಿ, ಮಹಾಮಂಗಳಾರತಿ ನೆರವೇರಿದವು.

ಬಳಿಕ ಆಶೀರ್ವಚನ ನೀಡಿದ ಶ್ರೀಗಳು, ಟ್ರಸ್ಟ್​ ವತಿಯಿಂದ ದೇವಸ್ಥಾನ ನಿಮಿರ್ಸಿರುವ ಕಾರ್ಯ ಮಹತ್ತರವಾಗಿದೆ. ಇದರಿಂದ ಯುವಕರಲ್ಲಿ ಅಧ್ಯಾತ್ಮಿಕ ಚಿಂತನೆಗೆ ಆಸಕ್ತಿ ಬೆಳೆಸಿದಂತಾಗಲಿದೆ. ಟ್ರಸ್ಟ್​ ವತಿಯಿಂದ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕಾರ್ಯಕ್ರಮಗಳು ನೆರೇರಲಿ ಎಂದು ಹಾರೈಸಿದರು.

ಸಂದ ಅಧ್ಯಕ್ಷ ಶಶಿಧರ ಉಜ್ಜಿನಿ, ಉಪಾಧ್ಯಕ್ಷರಾದ ಶ್ರೀಧರ ಶೇಟ್​, ಕೊಟ್ರೇಶ ನಾಗಪ್ಪ ಹೂಗಾರ, ಪ್ರಧಾನ ಕಾರ್ಯದಶಿರ್ ಅಶೋಕ ಕೋಳಕೂರ, ಸಹ ಕಾರ್ಯದಶಿರ್ ಶ್ರೀನಿವಾಸ ಸವಣೂರ, ಕೋಶಾಧ್ಯಕ್ಷ ಟಿ. ರುನಾಥ ಪ್ರಭು, ಮಡಿವಾಳಪ್ಪ ಶಿರಿಯಣ್ಣವರ, ಹನುಮಂತಗೌಡ ಪಾಟೀಲ, ವಿಲಾಸ ದುಮ್ಮವಾಡ, ಮಾರುತಿ ತುಪಸುಂದರ, ಅನ್ನದಾನಪ್ಪ ಕಾಟ್ರಿಹಳ್ಳಿ, ಪ್ರಕಾಶ ಅಂತಣ್ಣವರ, ಸದಯ್ಯ ಪಾಲಭಾವಿಮಠ, ರಾಜಶೇಖರ ಅಣಗೌಡರ, ವಿಜಯ ಅಗಡಿ, ಮಹಾಂತೇಶ ಭಾವಿ, ಮಹಿಳಾ ಮಂಡಳಗಳ ಸದಸ್ಯರು, ಬಡಾವಣೆ ನಿವಾಸಿಗಳು, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net