ಶಿಕ್ಷಣದೊಂದಿಗೆ ಸಂಸ್ಕಾರವೂ ಮುಖ್ಯ

Along with education, culture is also important.
ರಬಕವಿ ಬನಹಟ್ಟಿ ತಾಲೂಕಿನ ನಾವಲಗಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನಕ್ಕೆ ವಿದ್ಯಾದರ ಸವದಿ ಚಾಲನೆ ನೀಡಿದರು. ರೇಖಾ ಕದಂ, ಆನಂದ ಕಂಪು, ಬಸವರಾಜ ಗಣಿ ಇದ್ದಾರೆ.
Published on

ರಬಕವಿ/ಬನಹಟ್ಟಿ: ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಸಂಸ್ಕಾರ, ಸಂಸ್ಕೃತಿ ಹಾಗೂ ಆಚಾರ ವಿಚಾರ ಮೈಗೂಡಿಸಿಕೊಳ್ಳಬೇಕು ಎಂದು ಚಿಮ್ಮಡದ ಪ್ರಭುಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ವಿದ್ಯಾಧರ ಸವದಿ ಹೇಳಿದರು.

ತಾಲೂಕಿನ ನಾವಲಗಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ತಮ್ಮ ಪ್ರತಿಭೆ ಅನಾವರಣಗೊಳಿಸಬೇಕು. ಶಿಕ್ಷಕರ ಸಲಹೆಯಂತೆ ಅಧ್ಯಯನ ಮಾಡಿದರೆ ಪರೀಕ್ಷೆ ಎಂಬ ಯುದ್ಧ ಗೆಲ್ಲಲು ಸಹಕಾರಿ ಎಂದರು.

ಶಾಲೆಯ ಮುಖ್ಯಶಿಕ್ಷಕಿ ರೇಖಾ ಕದಂ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಆದರ್ಶ ವಿದ್ಯಾಲಯದ ಮುಖ್ಯ ಶಿಕ್ಷಕ ಭೂಷಣ ಪತ್ತಾರ, ಕಾಲೇಜು ಪ್ರಾಚಾರ್ಯ ಶರತಚಂದ್ರ ಜಂಬಗಿ, ಎಸ್‌ಡಿಎಂಸಿ ಅಧ್ಯಕ್ಷ ಬಸವರಾಜ ಗಣಿ, ಗ್ರಾಪಂ ಅಧ್ಯಕ್ಷ ಸದಾಶಿವ ಸವದಿ, ದಾನಪ್ಪ ಆಸಂಗಿ, ಮುತ್ತಪ್ಪ ಅಂಗಡಿ, ತಾಪಂ ಮಾಜಿ ಸದಸ್ಯ ಗುರು ಮರಡಿಮಠ, ಆನಂದ ಕಂಪು, ಗಂಗಪ್ಪ ಅಮ್ಮಲಜೇರಿ, ಹಣಮಂತ ಕಟಗೇರಿ, ಹಣಮಂತ ನಾವಿ, ಈರಪ್ಪ ಕಡಕಬಾವಿ, ಮಹಾದೇವ ಸಿದ್ದಾಪುರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net