ವಿದ್ಯೆಯ ಜತೆಗೆ ಸಂಸ್ಕಾರ ರೂಢಿಸಿಕೊಳ್ಳಿ

11 GVT 05
ಗಂಗಾವತಿ ಶ್ರೀ ಚನ್ನಮಲ್ಲಿಕಾರ್ಜುನ ಸಭಾಂಗಣದಲ್ಲಿ ಶ್ರೀ ಗುರು ಚನ್ನಬಸವಸ್ವಾಮಿ ಉಚಿತ ಕೋಚಿಂಗ್ ಸೆಂಟರ್‌ನಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ಬೇಸಿಗೆ ಅವಧಿಯ ಉಚಿತ ತರಬೇತಿ ಶಿಬಿರವನ್ನು ಹಾಸ್ಯ ಭಾಷಣಕಾರ ಗಂಗಾವತಿ ಬೀಚಿ ಬಿ.ಪ್ರಾಣೇಶ ಶುಕ್ರವಾರ ಉದ್ಘಾಟಿಸಿದರು. ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿ, ಮಾಜಿ ಉಪಾಧ್ಯಕ್ಷ ಹೊಸಳ್ಳಿ ಶಂಕರಗೌಡ, ಸಂಚಾಲಕ ಸಿದ್ಧಲಿಂಗೇಶ ಪೂಲಭಾವಿ ಇತರರಿದ್ದರು.
Published on

ಗಂಗಾವತಿ: ಪಠ್ಯಕ್ರಮದ ವಿದ್ಯಾಭ್ಯಾಸದೊಂದಿಗೆ ಸಂಸ್ಕಾರ ಮತ್ತ ಸಂಸ್ಕೃತಿ ಬಗ್ಗೆ ಅರಿವು ಪ್ರತಿಯೊಬ್ಬ ಮಕ್ಕಳಲ್ಲೂ ಬರಬೇಕಿದ್ದು, ಏಕಾಗ್ರತೆಯನ್ನು ರೂಢಿಸಿಕೊಳ್ಳುವಂತೆ ಹಾಸ್ಯ ಭಾಷಣಕಾರ ಗಂಗಾವತಿ ಬೀಚಿ ಬಿ.ಪ್ರಾಣೇಶ ಸಲಹೆ ನೀಡಿದರು.

ನಗರದ ಶ್ರೀ ಚನ್ನಮಲ್ಲಿಕಾರ್ಜುನ ಸಭಾಂಗಣದಲ್ಲಿ ಶ್ರೀ ಗುರು ಚನ್ನಬಸವಸ್ವಾಮಿ ಉಚಿತ ಕೋಚಿಂಗ್ ಸೆಂಟರ್‌ನಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಶುಕ್ರವಾರ ಹಮ್ಮಿಕೊಂಡ ಬೇಸಿಗೆ ಅವಧಿಯ ಉಚಿತ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಎಸ್ಸೆಸ್ಸೆಲ್ಸಿ ಲಿತಾಂಶ ಮುಂದಿನ ವಿದ್ಯಾಭ್ಯಾಸಕ್ಕೆ ಪ್ರಮುಖ ಘಟ್ಟವಾಗಿದ್ದು, ವಿಷಯಗಳ ಮೇಲಿನ ಹಿಡಿತದೊಂದಿಗೆ ಉತ್ತಮ ಲಿತಾಂಶ ಪಡೆಯಬೇಕು. ವಿದ್ಯಾ ಕಲಿಕೆ ಜತೆಗೆ ಸಂಸ್ಕಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದ್ದು, ಎಷ್ಟೇ ಉನ್ನತ ಪದವಿ ಪಡೆದರೂ, ಸಂಸ್ಕಾರ ಇಲ್ಲದಿದ್ದರೆ ಸಮಾಜದಲ್ಲಿ ಬೆಲೆಯಿರಲ್ಲ.

ಓದಿನ ಜತೆಗೆ ಇತರೆ ಚಟುವಟಿಕೆಗಳಲ್ಲೂ ಸಕ್ರಿಯರಾಗುವಂತೆ ಸಲಹೆ ನೀಡಿದರು. ಶಿಬಿರದ ಸಂಚಾಲಕ ಸಿದ್ಧಲಿಂಗೇಶ ಪೂಲಭಾವಿ ಮಾತನಾಡಿ, ಶಿಬಿರದಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಗಣಿತ, ಇಂಗ್ಲಿಷ್, ವಿಜ್ಞಾನ ವಿಷಯಗಳ ಬಗ್ಗೆ ತರಬೇತಿ ನೀಡಲಾಗುತ್ತಿದ್ದು, ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ನೀಡಲಾಗುವುದು. 17 ವರ್ಷಗಳಿಂದ ಉಚಿತ ತರಬೇತಿ ನೀಡಲಾಗುತ್ತಿದ್ದು, ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುತ್ತಿದೆ.

ನಗರಸಭೆ ಪೌರಾಯುಕ್ತ ಆರ್. ವಿರೂಪಾಕ್ಷಮೂರ್ತಿ, ಮಾಜಿ ಉಪಾಧ್ಯಕ್ಷ ಹೊಸಳ್ಳಿ ಶಂಕರಗೌಡ, ಯೋಗ ತರಬೇತುದಾರ ಶಾಂತವೀರಯ್ಯಸ್ವಾಮಿ ಗಂಧದಮಠ, ಸಂಪನ್ಮೂಲ ವ್ಯಕ್ತಿಗಳಾದ ಶಿವಾನಂದ ತಿಮ್ಮಾಪುರ, ಮಂಜುನಾಥ ದರೋಜಿ, ಮಹಾಂತೇಶ, ಉಮೇಶ, ಚಂದ್ರಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net