ಶಿಕ್ಷಣದೊಟ್ಟಿಗೆ ಸಂಸ್ಕಾರ ಅಳವಡಿಸಿಕೊಳ್ಳಿ

28Snk1
Published on

ಸಂಕೇಶ್ವರ: ವಿದ್ಯಾರ್ಥಿಗಳು ಜ್ಞಾನದೊಟ್ಟಿಗೆ ಸಂಸ್ಕಾರ, ಸಂಸ್ಕೃತಿ ಮೌಲ್ಯ ಅಳವಡಿಸಿಕೊಳ್ಳಬೇಕು ಎಂದು ಪುಣೆಯ ಕೆ ಆ್ಯಂಡ್ ಕೆ ಕಂಪನಿ ಇಂಜಿನಿಯರ್ಸ್‌ ಸಿಇಒ ಶ್ರೀಕಾಂತ ಕುರಣೆ ಹೇಳಿದರು.

ಸಮೀಪದ ನಿಡಸೋಸಿ ಪಾಲಿಟೆಕ್ನಿಕ್‌ನಲ್ಲಿ ಡಿಪ್ಲೊಮಾ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಶನಿವಾರ ಹಮ್ಮಿಕೊಂಡಿದ್ದ ಸ್ಪಾಗತ ಸಮಾರಂಭದಲ್ಲಿ ಮಾತನಾಡಿ, ನಮ್ಮ ಘನತೆ ಗೌರವಗಳಿಗೆ ಮೆರುಗು ಬರುತ್ತದೆ. ಸಮಸ್ಯೆ, ಕಷ್ಟ ಅನುಭವವನ್ನು ವೃದ್ಧಿಸುತ್ತವೆ ಮತ್ತು ನಮ್ಮ ಉಜ್ವಲ ಭವಿಷ್ಯ ರೂಪಿಸಿಕೊಳ್ಳುವ ಮೆಟ್ಟಿಲುಗಳಾಗುತ್ತವೆ ಎಂದರು.

ಕಾರ್ಯಕ್ರಮ ಸಂಯೋಜಕ ಜಿ.ಬಿ. ಸಂಗೋಟೆ ಮಾತನಾಡಿ, ಸಮಸ್ಯೆಗಳೆಂಬ ಹಾದಿ ಸವೆಸಿದಾಗ ಸಾಧನೆಯೆಂಬ ಶಿಖರ ಏರಲು ಸಾಧ್ಯ ಎಂದು ಹೇಳಿದರು.

ಕಾಲೇಜು ಪ್ರಾಚಾರ್ಯ ಪ್ರೊ. ಬಿ.ಆರ್.ಉಮರಾಣಿ ಮಾತನಾಡಿ, ಜ್ಞಾನದ ಜತೆಗೆ ಕೌಶಲ ವೃದ್ಧಿಸಿಕೊಳ್ಳಬೇಕು. ಹಳೆಯ ವಿದ್ಯಾರ್ಥಿಗಳು ಕಾಲೇಜಿನ ಕಳಶವಿದ್ದಂತೆ. ಅವರ ಸಾಧನೆಗಳು ನಮ್ಮ ಕಾಲೇಜು ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುತ್ತವೆ ಎಂದರು.

ಪಾಲಕರ ಪ್ರತಿನಿಧಿ ಆನಂದ ರೇಬಿನಾಳ ಮಾತನಾಡಿದರು. ಹಳೆಯ ವಿದ್ಯಾರ್ಥಿ ಶ್ರೀಕಾಂತ ಕುರಣೆ ಕಾಲೇಜು ವಿದ್ಯಾರ್ಥಿ ವೇತನ ನಿಧಿಗೆ 2 ಲಕ್ಷ ರೂ. ಮತ್ತು ನಿವೃತ್ತ ಶಿಕ್ಷಕರ ನಿಧಿಗೆ 50 ಸಾವಿರ ರೂ. ದೇಣಿಗೆ ನೀಡಿದರು. ಎಸ್.ಐ. ಬೆಳವಿ ಸ್ವಾಗತಿಸಿದರು. ಆರ್.ಎಂ. ಝಳಕೆ ವಂದಿಸಿದರು. ಇಂದ್ರಯಾಣಿ ಪಾಟೀಲ ಮತ್ತು ಮಹೇಶ ಗಡ್ಡಿ ಪರಿಚಯಿಸಿದರು. ದಾನೇಶ್ವರಿ ಉದೋಶಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net