ಅಭಿವೃದ್ಧಿ ಜತೆ ಪರಿಸರ ಸಂರಕ್ಷಣೆಯೂ ಮುಖ್ಯ

Nellikeri
Published on

ಕುಮಟಾ: ಪಟ್ಟಣದ ನೆಲ್ಲಿಕೇರಿ ಹನುಮಂತ ಬೆಣ್ಣೆ ಸರ್ಕಾರಿ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದಿಂದ ಕಾಲೇಜಿನ ಆವಾರದಲ್ಲಿ ಸೋಮವಾರ ಆಯೋಜಿಸಿದ್ದ ವನಮಹೋತ್ಸವಕ್ಕೆ ಶಾಸಕ ದಿನಕರ ಶೆಟ್ಟಿ ಗಿಡ ನೆಡುವ ಮೂಲಕ ಚಾಲನೆ ನೀಡಿದರು.

ಬಳಿಕ ಮಾತನಾಡಿ, ಸರ್ಕಾರದಿಂದ ರಸ್ತೆ, ಸೇತುವೆ, ಕಟ್ಟಡಗಳನ್ನು ನಿರ್ಮಿಸುವುದಷ್ಟೇ ಸಾಧನೆಯಲ್ಲ. ಅಭಿವೃದ್ಧಿಯ ಜತೆಗೆ ಸುತ್ತಮುತ್ತಲಿನ ಸಸ್ಯ ಸಂಪತ್ತನ್ನು ಉಳಿಸಿ ಬೆಳೆಸಿಕೊಂಡು ಹೋಗುವುದೂ ಅತಿ ಮುಖ್ಯವಾಗಿದೆ ಎಂದರು.

ಬಿಇಒ ರಾಜೇಂದ್ರ ಎಲ್. ಭಟ್, ಪ್ರಾಂಶುಪಾಲ ಸತೀಶ್ ಬಿ. ನಾಯ್ಕ, ಸಾಮಾಜಿಕ ಅರಣ್ಯ ವಿಭಾಗದ ಉಪವಲಯ ಅರಣ್ಯಾಧಿಕಾರಿ ಸುದರ್ಶನ ಪಟಗಾರ, ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಾಧಿಕಾರಿ ರಾಘವೇಂದ್ರ ಮಡಿವಾಳ, ಉಪನ್ಯಾಸಕರಾದ ಆನಂದ ವೈ.ನಾಯ್ಕ, ಆರ್.ಎಚ್. ನಾಯ್ಕ, ಆರ್.ಟಿ. ನಾಯಕ, ಎಸ್.ಎಂ. ನಾಯ್ಕ, ನಾಗರಾಜ ನಾಯ್ಕ, ಗಣೇಶ ಭಟ್ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net