ಕೃಷಿಯೊಂದಿಗೆ ಹೈನುಗಾರಿಕೆ ಅಳವಡಿಸಿಕೊಳ್ಳಲಿ

25ATHANIGRAMIN1
Published on

ಅಥಣಿ ಗ್ರಾಮೀಣ: ರೈತರು ಕೃಷಿ ಜತೆಗೆ ಹೈನುಗಾರಿಕೆ ಹಾಗೂ ಮೇಕೆ ಸಾಕಾಣಿಕೆ ಮಾಡಿ ಆರ್ಥಿಕವಾಗಿ ಸಬಲರಾಗಬೇಕು ಎಂದು ಅಥಣಿ ಪಶುವೈದ್ಯಕಿಯ ಮಹಾವಿದ್ಯಾಲಯದ ಡೀನ್​ ಡಾ.ಎನ್​.ಎ.ಪಾಟೀಲ ಹೇಳಿದರು.

ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ಅಥಣಿ ಬಾವುರಾವ್​ ದೇಶಪಾಂಡೆ ಪಶುವೆದ್ಯಕಿಯ ಮಹಾವಿದ್ಯಾಲಯದಲ್ಲಿ ಬೀದರನ ಕರ್ನಾಟಕ ಪಶುವೆದ್ಯಕಿಯ ಪಶು ಹಾಗೂ ಮೀನುಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯ ಹಾಗೂ ಜಾನುವಾರು ಉತ್ಪಾದನೆ ನಿರ್ವಹಣೆ ವಿಭಾಗ ಹಾಗೂ ವಿಸ್ತರಣಾ ನಿರ್ದೇಶನಾಲಯ ಇವರ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಎರಡು ದಿನಗಳ ವೆಜ್ಞಾನಿಕ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಕುರಿ, ಮೇಕೆ, ಕೋಳಿ ಸಾಕಾಣಿಕೆ ಹಾಗೂ ಹೈನುಗಾರಿಕೆ ರೈತರ ಆರ್ಥಿಕತೆ ಹೆಚ್ಚಿಸಲು ಸಹಕಾರಿಯಾಗಿವೆ. ಕಳೆದ 5 ವರ್ಷದ ಪಶು ಗಣತಿಯಲ್ಲಿ ಜಾನುವಾರು, ಮೇಕೆ ಹಾಗೂ ಕುರಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಕೃಷಿಯಲ್ಲಿ ಅತಿವೃಷ್ಟಿ ಹಾಗೂ ಅನಾವೃಷ್ಟಿಗಳಿಂದ ಹಾನಿಯಾದರೂ ಪಶು ಸಂಗೋಪನೆ ಭದ್ರತೆ ಒದಗಿಸುತ್ತದೆ ಎಂದರು.

ತಾಲೂಕು ಪಶುವೆದ್ಯಕಿಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಡಿ.ಜೆ.ಕಾಂಬಳೆ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಕುರಿ ಮತ್ತು ಮೇಕೆ ಸಾಕಾಣಿಕೆಗೆ ಹಲವಾರು ಯೋಜನೆ ಜಾರಿಗೊಳಿಸಿದೆ. ರೈತರು ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ಮುಖ್ಯ ಪಶುವೈದ್ಯಾಧಿಕಾರಿ ಮಲ್ಲಿಕಾರ್ಜುನ ಹುಂಡೆಕರ, ಡಾ.ಸುದರ್ಶನ ಧಡಕೆ, ತರಬೇತಿ ಸಂಯೋಜಕಿ ಷೇರಿಲ್​ ಮಿರಾಂಡ ಕುರಿ ಮತ್ತು ಮೇಕೆ ಸಾಕಾಣಿಕೆ ಕುರಿತು ಮಾಹಿತಿ ನೀಡಿದರು.

ಡಾ.ಶ್ವೇತಾ ಎಚ್​.ಎಸ್​., ಡಾ.ಅಜಿತಕುಮಾರ ಎಚ್​.ಎಂ., ಡಾ.ಮಾಲತೇಶ ಡಿ.ಎಸ್​., ಡಾ.ಶಿವನಗೌಡ ಪಾಟೀಲ,

ಡಾ.ಎಸ್​,ವೆ ಮುರ್ತಾಳ, ಕೆನರಾ ಬ್ಯಾಂಕ್​ ಅಧಿಕಾರಿ ಶೀತಲಾ ಪಾಟೀಲ ಇತರರಿದ್ದರು. ಡಾ.ಪರಮೇಶ ಎಸ್​.ಸಿ. ಸ್ವಾಗತಿಸಿದರು. ಡಾ.ಅಪರ್ಣಾ ಹೆಬ್ಬಾರ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net