ಒಂಟಿ ಮಹಿಳೆಯರ ಗಣತಿ ಪುನರ್ವಸತಿ ಮಾಡಿ,  ಜಿಲ್ಲಾ ಸಮಾವೇಶದಲ್ಲಿ ಒಕ್ಕೋರಲ ಆಗ್ರಹ

IMG_20250719_205815_455.jpg
Published on

ಹುಬ್ಬಳ್ಳಿ: ಒಂಟಿ ಮಹಿಳೆಯರು ಕೇವಲ ಲಿಂಗ ತಾರತಮ್ಯ, ಜಾತಿ ತಾರತಮ್ಯಕ್ಕೆ ಒಳಗಾಗಿಲ್ಲ. ಸಾಮಾಜಿಕವಾಗಿ ಬಹಿಷ್ಕಾರಕ್ಕೆ ಒಳಪಡಿಸಲಾಗಿದೆ. ದೌರ್ಜನ್ಯದಿಂದ ಪಾರಾಗಿ ಗೌರವಸ್ಥ ಬದುಕನ್ನು ನಡೆಸಲು ಸಂಘಟಿತರಾಗಬೇಕಿದೆ ಎಂದು ಕರ್ನಾಟಕ ರಾಜ್ಯ ಒಂಟಿ ಮಹಿಳೆಯರ ಸಂರಕ್ಷಣ ಸಂಘದ ಸಂಚಾಲಕಿ ಬಿ. ಮಾಳಮ್ಮ ಹೇಳಿದರು.

ನಗರದ ಅಕ್ಕನ ಬಳಗದಲ್ಲಿ ಶನಿವಾರ ಧಾರವಾಡ ಜಿಲ್ಲಾ ಒಂಟಿ ಮಹಿಳೆಯರ ಸಮಾವೇಶದದಲ್ಲಿ ಅವರು ಅತಿಥಿಯಾಗಿ ಮಾತನಾಡಿದರು.

ರಾಜ್ಯದ ಒಂಟಿ ಮಹಿಳೆಯರ ಗಣತಿ ಮಾಡಿ ಅವರಿಗೆ ಪುನರ್ವಸತಿ ಕಲ್ಲಿಸಲು ರಾಜ್ಯ ಬಜೆಟ್ ನಲ್ಲಿ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.

ಸಮಾವೇಶ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಸಮಾಜದ ಅಭಿವೃದ್ಧಿಯಲ್ಲಿ ಮಹಿಳೆ ಪ್ರಮುಖ ಪಾತ್ರ ವಹಿಸಿಸುತ್ತಾಳೆ. ಮಹಿಳೆಯನ್ನು ಸಮಾನವಾಗಿ ಕಾಣುವ ಮೂಲಕ ಘನತೆಯಿಂದ ಬದಕಲು ಅವಕಾಶ ನೀಡಬೇಕಾಗಿದೆ ಎಂದರು.

ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಯು. ಬಸವರಾಜ ಮಾತನಾಡಿ, ಗಂಡು ಮಗ ಒಂಟಿ ಬದುಕು ಹಾಗೂ ಜೀವನ ಹೇಗೆ ನಿರ್ವಹಿಸಬಲ್ಲನೆಂದು ಅನುಕಂಪ ತೋರಿ ಆತನಿಗೆ ಕೂಡಲೇ ಮರು ಮದುವೆ ಮಾಡಲಾಗುತ್ತದೆ. ಆದರೆ, ಒಂಟಿ ಮಹಿಳೆ, ಗಂಡ ಬಿಟ್ಟಿರುವ, ಗಂಡ ಸತ್ತಿರುವ ಮಹಿಳೆಗೆ ಅಂತಹ ಪ್ರೋತ್ಸಾಹ, ಬೆಂಬಲ ನೀಡಲು ಇದೇ ಸಮಾಜ ನಿರಾಕರಿಸುತ್ತದೆ. ಈ ತಾರತಮ್ಯ ದೂರವಾಗಿಸಲು ಸರ್ಕಾರವೂ ಗಮನ ಹರಿಸಬೇಕು ಎಂದರು.

ಅಖಿಲ ಭಾರತ ವಕೀಲರ ಒಕ್ಕೂಟದ ರಾಜ್ಯ ಸಂಚಾಲಕಿ ಸವಿತಾ ಪಾಟೀಲ, ಕಾರ್ಮಿಕ ಮುಖಂಡ ಜಿ.ಎಂ. ವೈದ್ಯ, ಜಿಲ್ಲಾ ಸಂಚಾಲಕಿ ಎಚ್. ದುರ್ಗಮ್ಮ ಮಾತನಾಡಿದರು.

ಸುಜಾತಾ ಬೇಸ್ತರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಹೇಶ ಪತ್ತಾರ ಕಾರ್ಯಕ್ರಮ ನಿರೂಪಿಸಿದರು. ಮಂಜುಳಾ ಪವಾರ ವಂದಿಸಿದರು.

ಸುನಂದಾ ಚಿಗರಿ, ಶಕುಂತಲಾ ತಹಶೀಲ್ದಾರ, ರಾಧಾ ಗುಡಿಹಾಳ, ಚನ್ನವ್ವ ಹೊಂಗಲ್, ಅನ್ನಪೂರ್ಣ ಮಡಿವಾಳರ, ಸುನಂದಾ ಸಿದ್ಲಿಂಗ್, ಕ್ಕೀರವ್ವ ತೆಂಬದಮನಿ, ಭಾಗವಹಿಸಿದ್ದರು.

ಸಮಾವೇಶದ ತೀರ್ಮಾನಗಳು :
ಒಂಟಿ ಮಹಿಳೆಯರ ಹಕ್ಕೋತ್ತಾಯಗಳಿಗಾಗಿ ಹೋರಾಟ ನಡೆಸಲು ತೀರ್ಮಾನಿಸಲಾಯಿತು. ಒಂಟಿ ಮಹಿಳೆಯರ ಗಣತಿ ಮಾಡಿ, ಪುನರ್ವಸತಿಗೆ ಕ್ರಮ ವಹಿಸಿ. ಒಂಟಿ ಮಹಿಳೆಯರಿಗೆ ಮಾಸಿಕ ಸಹಾಯಧನ 5 ಸಾವಿರ ರೂ. ಒದಗಿಸಿ ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net