ಅಳ್ನಾವರ ಪತ್ತಿನ ಸಹಕಾರಿಗೆ 80 ಲಕ್ಷ ರೂ. ಲಾಭ

ALN SANMAN
Published on

ಅಳ್ನಾವರ: ಅಳ್ನಾವರ ಪತ್ತಿನ ಸಹಕಾರಿ ಸಂಘದ 13ನೇ ಆರ್ಥಿಕ ವರ್ಷದಲ್ಲಿ 54 ಕೋಟಿ ರೂ. ವ್ಯವಹಾರ ನಡೆಸುವ ಮೂಲಕ 80 ಲಕ್ಷ ರೂ.ಗಳ ಲಾಭ ಗಳಿಸಿದೆ ಎಂದು ಅಳ್ನಾವರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಂ.ಸಿ. ಹಿರೇಮಠ ಹೇಳಿದರು.

ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಬ್ಯಾಂಕ್ ವ್ಯವಹಾರಗಳ ಸ್ಪರ್ಧಾತ್ಮಕ ಸಮಯದಲ್ಲಿ ಸದಸ್ಯರು ಹಾಗೂ ಗ್ರಾಹಕರಿಗೆ ಉತ್ತಮ ಸೇವೆಗಳನ್ನು ನೀಡಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ 1 ಕೋಟಿ 60 ಲಕ್ಷ ರೂ.ಗಳ ಷೇರು ಬಂಡವಾಳ 14 ಕೋಟಿ ರೂ. ಠೇವಣಿ, 16 ಕೋಟಿ ರೂ. ಸಾಲ ಹಾಗೂ ಮುಂಗಡಗಳು ಇದ್ದು, 6 ಕೋಟಿ ರೂ.ಗಳನ್ನು ಸಾಲ ನೀಡಿ 9.5 ಕೋಟಿ ರೂ. ವಸೂಲಾತಿ ಮಾಡುವ ಮೂಲಕ 2 ಕೋಟಿ ರೂ.ಗಳ ಹೆಚ್ಚುವರಿ ಸಾಲ ವಸೂಲಿ ಮಾಡಲಾಗಿದೆ. ಪಿಗ್ಮಿ ಆಧಾರಿತ 1 ಲಕ್ಷ ರೂ.ಗಳವರೆಗೆ ಸಾಲ ನೀಡುವ ಯೋಜನೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಉಪಾಧ್ಯಕ್ಷ ಅಮೃತ ಪಟೇಲ, ಡಾ, ಅಶೋಕ ಟೆಂಕಪ್ಪನವರ, ವಿ.ಬಿ. ಲಿಂಗನಮಠ, ಬಿ.ಎಸ್. ಹಿರೇಮಠ, ಸುರೇಶ ಕೊಡಳ್ಳಿ,ನಾರಾಯಣ ಮೋರೆ, ಆಯ್.ಡಿ. ದಾಸ್ತಿಕೊಪ್ಪ, ಆನಂದ ಪೆಡನೆಕರ, ವಿನಾಯಕ ಹಿರೇಮಠ, ಲಲಿತಾ ಪಾಟೀಲ, ರೋಹಿಣಿ ತೋರಗಲ್ಲಮಠ, ಇತರರಿದ್ದರು. ಅಖಿಲ ಭಾರತ ಸ್ಥಾನಿಕ ಸ್ವರಾಜ್ಯ ಸಂಸ್ಥೆಗೆ ನೇಮಕಗೊಂಡ ಎಂ.ಸಿ. ಹಿರೇಮಠ ಅವರನ್ನು ನಿರ್ದೇಶಕ ಮಂಡಳಿಯಿಂದ ಸತ್ಕರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net