ಸರ್ಕಾರದಿಂದ ಬೆಂಬಲ ಬೆಲೆ ನಿಗದಿ

ALM 17-1
Published on

ಆಲಮೇಲ: ಸರ್ಕಾರ ತೊಗರಿ ಬೆಳೆಗೆ ಈಗಾಗಲೆ ಘೋಷಿಸಿದ ಬೆಂಬಲ ಬೆಲೆಯಲ್ಲಿ ರೈತರ ತೊಗರಿ ಖರೀದಿಸಲಾಗುವುದು. ಈ ಭಾಗದ ರೈತರು ಕೂಡಲೇ ಫ್ರುಟ್ ಕಾರ್ಡ್ ಐಡಿ, ಆಧಾರ್ ಕಾರ್ಡ್ ಕಡ್ಡಾಯವಾಗಿ ತಂದು ಜ.31ರ ವರೆಗೆ ನೋಂದಣಿ ಮಾಡಿಸಬೇಕೆಂದು ಪಿಕೆಪಿಎಸ್ ಅಧ್ಯಕ್ಷ ಸಿದ್ದು ಹಾವಳಗಿ ತಿಳಿಸಿದ್ದಾರೆ.
ಪಟ್ಟಣದ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಶುಕ್ರವಾರ ರೈತರ ತೊಗರಿ ಖರೀದಿ ಕೇಂದ್ರದ ಕಂಪ್ಯೂಟರ್‌ಗೆ ಪೂಜೆ ಸಲ್ಲಿಸಿ ಚಾಲನೆ ನೀಡಿ ಅವರು ಮಾತನಾಡಿದರು.
ಇಂಡಿ ರಸ್ತೆಯ ಯುಕೆಪಿ ಕ್ಯಾಂಪ್‌ನ ಗೋದಾಮಿನಲ್ಲಿ ನಿತ್ಯ ಬೆಳಗ್ಗೆ 8 ರಿಂದ ಸಂಜೆ 5 ರವರೆಗೆ ತೊಗರಿ ಖರೀದಿಸಲಾಗುವುದು. ಇದಕ್ಕೆ ಸಂಬಂಧಿಸಿದ ಮಾಹಿತಿ ಬೇಕಾದರೆ ನಮ್ಮ ಸಹಕಾರಿ ಸಂಘಕ್ಕೆ ಭೇಟಿ ನೀಡಬಹುದು ಎಂದರು.
ಪಿಕೆಪಿಎಸ್ ಉಪಾಧ್ಯಕ್ಷರ ಪ್ರತಿನಿಧಿ ಖಲೀಲ ಹುಂಡೇಕಾರ, ಮಹಿಬೂಬ್ ಮಸಳಿ, ಶ್ರೀಶೈಲ ಭೋವಿ, ಭೀಮಾಶಂಕರ ಬಂಡಗಾರ, ಸಿದ್ದು ಕೊಳ್ಳಾರಿ, ಸಿದ್ದಪ್ಪ ಗುರಕಾರ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಭಾಗಣ್ಣ ಗುರಕಾರ ಸಿಬ್ಬಂದಿಗಳಾದ ಶಂಕರಗೌಡ ಪಾಟೀಲ, ಶಿವುಕುಮಾರ ಬಿರಾದಾರ, ವಿಜಯಕುಮಾರ ಸಾಲೋಕೆ, ಕರೆಪ್ಪ ಕೋಳಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net