ಕೋರಳ್ಳಿ ಗ್ರಾಪಂ ಅಧ್ಯಕ್ಷೆ ನೀಲಮ್ಮ ಉಪಾಧ್ಯಕ್ಷೆ ಲಕ್ಷ್ಮೀ

ALM 4-2
Published on

ಆಲಮೇಲ: ತಾಲೂಕಿನ ಕೋರಳ್ಳಿ ಗ್ರಾಪಂ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ನಿಲಮ್ಮ ಶಿವಶರಣ ಬಿರಾದಾರ(ಮದರಿ) ಹಾಗೂ ಉಪಾಧ್ಯಕ್ಷರಾಗಿ ಲಕ್ಷ್ಮೀ ಶರಣಪ್ಪ ಶಿಂದೆ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿ ಐ.ಎಸ್. ಔರಾಂಗಾಬಾದ ತಿಳಿಸಿದರು.

ಈ ಪಂಚಾಯಿತಿಗೆ ಒಟ್ಟು 18 ಸದಸ್ಯರ ಬಲವಿದ್ದು, ಅಧ್ಯಕ್ಷ ಸ್ಥಾನಕ್ಕೆ 2ಎ(ಮಹಿಳೆ) ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಎಸ್‌ಸಿ ಸಾಮಾನ್ಯ ಮಿಸಲಾತಿ ಪ್ರಕಟವಾದ ಹಿನ್ನೆಲೆ ಅಧ್ಯಕ್ಷ ಸ್ಥಾನಕ್ಕೆ ಕಸ್ತೂರಿಬಾಯಿ ಮೋಹನ ತಳವಾರ ಹಾಗೂ ನಿಲಮ್ಮ ಶಿವಶರಣ ಬಿರಾದಾರ ಸ್ಪರ್ಧಿಸಿದ್ದರು. ಚುನಾವಣೆಯಲ್ಲಿ ನಿಲಮ್ಮ ಬಿರಾದಾರ 11 ಮತಗಳನ್ನು ಪಡೆದರೆ, ಕಸ್ತೂರಿಬಾಯಿ ತಳವಾರ 6 ಮತಗಳನ್ನು ಪಡೆದುಕೊಂಡರು. ಉಪಾಧ್ಯಕ್ಷ ಸ್ಥಾನಕ್ಕೆ ಸಂಗಮ್ಮ ಯಲ್ಲಪ್ಪ ಶಿಂಗೆ ಹಾಗೂ ಲಕ್ಷ್ಮೀ ಶರಣಪ್ಪ ಶಿಂದೆ ಸ್ಪರ್ಧಿಸಿದ್ದರು. ಲಕ್ಷ್ಮಿ ಶಿಂದೆ 12 ಮತ ಪಡೆದರೆ, ಸಂಗಮ್ಮ ಸಿಂಗೆ 6 ಮತಗಳು ಪಡೆದುಕೊಂಡರು ಎಂದು ಚುನಾವಣೆ ಅಧಿಕಾರಿ ತಿಳಿಸಿದ್ದಾರೆ.

ಈ ವೇಳೆ ಎಲ್ಲ ಸದಸ್ಯರೂ ಹಾಜರಿದ್ದರು.

ನಂತರ ಜಿಪಂ ಮಾಜಿ ಉಪಾಧ್ಯಕ್ಷ ಸಿದ್ಧರಾಮ ಪಾಟೀಲ(ಹೂವಿನಳ್ಳಿ), ಜಿಲ್ಲಾ ಯುನಿಯನ್ ನಿರ್ದೇಶಕ ಎಂ. ಎಸ್. ಪಾಟೀಲ, ಶರಣು ಶಿಂದೆ, ಗೊಲಾಳಪ್ಪಗೌಡ ಪಾಟೀಲ, ರೇವಪ್ಪಗೌಡ ಪಾಟೀಲ, ಮಲಕಣ್ಣಗೌಡ ಪಾಟೀಲ, ನಿತ್ಯಾನಂದ ದೊಡ್ಡಮನಿ, ಮಲ್ಲಣ್ಣ ಬಿರಾದಾರ, ಬಸವರಾಜ ರೇವತಗಾಂವ, ಬಿ. ಸಿ. ಪಾಟೀಲ(ಮದರಿ) ನೇತೃತ್ವದಲ್ಲಿ ವಿಜಯೋತ್ಸವ ಆಚರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net