ಮಕ್ಕಳಿಗೆ ಪಡಿತರ ಧಾನ್ಯ ವಿತರಣೆ!

ALM 30-1
Published on

ಆಲಮೇಲ: ಸಮೀಪದ ಕೋರಳ್ಳಿ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಮತ್ತು ಉರ್ದು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಮಕ್ಕಳಿಗೆ ಪಡಿತರ ಧಾನ್ಯವನ್ನು ಪಾಲಕ ಪ್ರತಿನಿಧಿಗಳ ಮುಂದೆ ಮುಖ್ಯೋಪಾಧ್ಯಾಯ ಎಲ್.ಟಿ. ಹರಿಜನ ಹಾಗೂ ಶಿಕ್ಷಕ ಶಫೀಕ್ ಮೋಮಿನ್ ವಿತರಿಸಿದರು.
150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರಸ್ಪರ ಅಂತರದೊಂದಿಗೆ ಸರದಿಯಲ್ಲಿ ನಿಂತು ಪಡಿತರ ಧಾನ್ಯ ಪಡೆದರು. ಮುಖಕ್ಕೆ ಮಾಸ್ಕ್ ಧರಿಸದೆ ಬಂದಂತಹ ವಿದ್ಯಾರ್ಥಿಗಳಿಗೆ ಶಿಕ್ಷಕ ಶಫೀಕ್ ಮೋಮಿನ್ ಮಾಸ್ಕ್ ಧರಿಸುವುದು ಹಾಗೂ ಅಭ್ಯಾಸದೊಂದಿಗೆ ಮನೆಯಲ್ಲಿ ಪರಸ್ಪರ ಅಂತರ ಕಾಯ್ದುಕೊಳ್ಳುವುದರಿಂದ ಆರೋಗ್ಯಕ್ಕೆ ಆಗುವ ಲಾಭಗಳ ಬಗ್ಗೆ ತಿಳಿವಳಿಕೆ ನೀಡಿದರು.
ಕನ್ನಡ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ನಾನಾಗೌಡ ಪಾಟೀಲ, ಉರ್ದು ಎಸ್‌ಡಿಎಂಸಿ ಅಧ್ಯಕ್ಷ ಬಾಬುಸಾಬ್ ನದಾಫ್, ವಿವೇಕಾನಂದ ಪಾಟೀಲ, ಆನಂದಪ್ಪ ಶಿವಪೂರ, ಸಿದ್ದಪ್ಪಗೌಡ ಬಿರಾದಾರ, ಮಹಿಬೂಬ ನದ್ಾ, ಹುಸೇನಬಾಷಾ ಹೊಸುರ, ಎಲ್.ಟಿ. ಹರಿಜನ, ಎಂ.ಎಂ. ಮೋಮಿನ ಇದ್ದರು.

ಮಕ್ಕಳಿಗೆ ವಿತರಿಸಿದ ಪಡಿತರ ಧಾನ್ಯದ ಪ್ರಮಾಣ

1-5ನೇ ತರಗತಿ ವಿದ್ಯಾರ್ಥಿಗಳಿಗೆ ತಲಾ 3.700 ಕೆಜಿ ಅಕ್ಕಿ, 250 ಗ್ರಾಂ ತೊಗರಿ ಬೇಳೆ, 500 ಗ್ರಾಂ ಹಾಲಿನ ಪುಡಿ ಮತ್ತು 6-7ನೇ ತರಗತಿ ವಿದ್ಯಾರ್ಥಿಗಳಿಗೆ ತಲಾ ಒಂದು ಕೆಜಿ ಒಳ್ಳೆಣ್ಣೆ, 5.500 ಕೆಜಿ ಅಕ್ಕಿ, 500 ಗ್ರಾಂ ಹಾಲಿನ ಪುಡಿ ವಿತರಿಸಲಾಗುತ್ತಿದೆ. ಶುಕ್ರವಾರ ಮತ್ತು ಶನಿವಾರ ಬಾಕಿ ವಿದ್ಯಾರ್ಥಿಗಳಿಗೆ ನೀಡಲಾಗುವುದೆಂದು ಮುಖ್ಯೋಪಾಧ್ಯಾಯ ಎಲ್.ಟಿ. ಹರಿಜನ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net