

ಆಲಮೇಲ: ಪಟ್ಟಣದ ಅಂಜುಮನ್ ಎ ಇಸ್ಲಾಂ ಕಮಿಟಿಯನ್ನು ಕೂಡಲೇ ರದ್ದುಗೊಳಿಸಿ ಚುನಾವಣೆ ನಡೆಸಬೇಕೆಂದು ಆಗ್ರಹಿಸಿ ಪಟ್ಟಣದ ಮುಸ್ಲಿಂ ಯುವಕರ ಹಾಗೂ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ನಡೆಸುತ್ತಿರುವ ಧರಣಿ ಸತ್ಯಾಗ್ರಹ ಮಂಗಳವಾರ 5ನೇ ದಿನ ಪೂರೈಸಿತು. ಧರಣಿ ಸ್ಥಳಕ್ಕೆ ಆಲಮೇಲ ಉಪ ತಹಸೀಲ್ದಾರ್ ಕಾಶೀನಾಥ ಅವರಾಧಿ ಭೇಟಿ ನೀಡಿ ಧರಣಿ ನಿರತರ ಬೇಡಿಕೆಗಳ ಮನವಿ ಪತ್ರ ಸ್ವೀಕರಿಸಿ, ಕೂಡಲೇ ಮೇಲಧಿಕಾರಿಗಳ ಗಮನಕ್ಕೆ ತಂದು ಸೂಕ್ತ ನ್ಯಾಯ ಒದಗಿಸುವ ಪ್ರಯತ್ನ ಮಾಡುವ ಭರವಸೆ ನೀಡಿದರು.
ಮುಖಂಡ ಸೈಫನ್ ಜಮಾದಾರ ಮಾತನಾಡಿ, ನಮಗೆ ನ್ಯಾಯ ಸಿಗುವವರೆಗೂ ಧರಣಿ ಹಿಂಪಡೆಯುವುದಿಲ್ಲ ಎಂದು ತಿಳಿಸಿದರು.
ಸೈಫನ್ ಮುಲ್ಲಾ, ಬಾಬು ಮುಲ್ಲಾ, ಅಲ್ಲಾಸಾಬ ಗೊಬ್ಬುರ, ಮಾಲಾಲಿ ಕಮಲಾಪೂರ, ಅಲಾಭಕ್ಷ ಸುಂಬಡ, ಗಾಲೀಬ ತಾಂಬೋಳ್ಳಿ, ಗಾಲೀಬ ಯಲಗಾರ, ಇಲ್ಲಿಯಾಸ ಮರ್ತೂರ, ನಿಸಾರ ಜಮಾದಾರ, ಸೈಫನ್ ಅಘಾನ, ದಸ್ತಗಿರ ವಡಿಗೇರಿ ಇತರರಿದ್ದರು.