ಶಾಸಕ ಟಿ.ಎಸ್. ಶ್ರೀವತ್ಸರಿಂದ ಪಂಚಾಂಗ ವಿತರಣೆ

Almanac distribution by MLA T.S. Srivatsa
Published on

ಮೈಸೂರು: ನಗರದ ನಾರಾಯಣ ಶಾಸ್ತ್ರಿ ರಸ್ತೆಯ ಪುಸ್ತಕಂ ಶ್ರೀ ಸಂತಾನ ಗೋಪಾಲಸ್ವಾಮಿ ದೇವಸ್ಥಾನದಲ್ಲಿ ಯುಗಾದಿ ಹಬ್ಬದ ಅಂಗವಾಗಿ ಶಾಸಕ ಟಿ.ಎಸ್. ಶ್ರೀವತ್ಸ ಪಂಚಾಂಗ ವಿತರಿಸಿದರು.

ನಂತರ ಮಾತನಾಡಿದ ಅವರು, ಯುಗಾದಿ ವರ್ಷಾಚರಣೆಯು ಬೆಲ್ಲ ಕಹಿಸಿಹಿಯ ಸಂಕೇತ. ಕಷ್ಟಸುಖಗಳನ್ನು ಸಮವಾಗಿ ಸ್ವೀಕರಿಸಬೇಕು. ಸಮಬಾಳಿನ ಜೀವನವನ್ನು ಸರಿಯಾಗಿ ನಡೆಸಬೇಕಾದರೆ ಪಾಂಚಾಂಗದ ನಿರ್ಧಾರ ಮುಖ್ಯವಾಗುತ್ತದೆ. ಸಂವತ್ಸರ ಮಾಸ, ತಿಥಿ, ನಕ್ಷತ್ರ, ರಾಶಿ, ಕಾಲದ ಘಳಿಗೆಯ ಮಾಹಿತಿ ಮೊದಲು ತಿಳಿದುಕೊಳ್ಳುವುದು ಅವಶ್ಯಕ ಎಂದರು.

ಈ ಸಂದರ್ಭ ಸಂತಾನ ಗೋಪಾಲಸ್ವಾಮಿ ದೇವಸ್ಥಾನದ ಅರ್ಚಕ ರಾಮಾನುಜಂ, ಕಾಳಿದಾಸ ರಸ್ತೆಯ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದ ಸಿಇಒ ಯೋಗ ನರಸಿಂಹನ್, ನಗರ ಪಾಲಿಕೆ ಮಾಜಿ ಸದಸ್ಯೆ ಪ್ರಮೀಳಾ ಭರತ್, ಚಾಮರಾಜ ಕ್ಷೇತ್ರದ ಬಿಜೆಪಿ ಅಧ್ಯಕ್ಷ ದಿನೇಶ್ ಗೌಡ, ಮುಡಾ ಮಾಜಿ ಸದಸ್ಯ ನವೀನ್ ಕುಮಾರ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net