26ರ ವರೆಗೆ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅವಕಾಶ: ಡಿಸಿ ಡಾ.ಕೆ.ವಿ.ರಾಜೇಂದ್ರ ಮಾಹಿತಿ

IMG_20231202_164430
Published on

ಮೈಸೂರು: ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ವಿಳಾಸ ಬದಲು ಸೇರಿದಂತೆ ಇನ್ನಿತರ ತಿದ್ದುಪಡಿಗೆ ವಿಶೇಷ ಆಂದೋಲನ ನಡೆಯುತ್ತಿದ್ದು, ಅರ್ಹರು ಸದುಪಯೋಗ ಪಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದರು.
ಈಗಾಗಲೇ ಕರಡು ಮತದಾರರ ಪಟ್ಟಿ ಪ್ರಕಟಣೆಗೊಂಡಿದ್ದು, ಡಿಸೆಂಬರ್ 26ರ ವರೆಗೆ ಹೆಸರು ಸೇರ್ಪಡೆ, ತಿದ್ದುಪಡಿ ಮಾಡಲು ಹಾಗೂ ಮರಣ ಹೊಂದಿರುವವರು, ವಿಳಾಸ ಬದಲಾಯಿಸಿದವರ ಹೆಸರು ತೆಗೆದು ಹಾಕಲು ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಡಿ.3ರಂದು ವಿಶೇಷ ಆಂದೋಲನಾ ನಡೆಯಲಿದ್ದು, ಮತದಾರು ತಮ್ಮ ಸಮೀಪದ ಮತಗಟ್ಟೆಗೆ ತೆರೆಳಿ ಹೆಸರು ಪರಿಶೀಲಿಸಿಕೊಳ್ಳಬೇಕು. ಜನವರಿಗೆ 18 ವರ್ಷ ತುಂಬುವವರು ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಿಕೊಳ್ಳಬೇಕು ಎಂದರು.
ಹೆಸರು ಸೇರ್ಪಡೆ, ತಿದ್ದುಪಡಿ ಮಾಡಲು ಅಥವಾ ತೆಗೆದು ಹಾಕಲು ಡಿಸೆಂಬರ್ 26ರ ವರೆಗೆ ಸಮಯಾವಕಾಶ ನೀಡಲಾಗಿದೆ. ಅಂತಿಮ ಮತದಾರರ ಪಟ್ಟಿ ಪರಿಶೀಲನೆ 2024ರ ಜನವರಿಗೆ ಒಂದರಂದು ನಡೆಯಲಿದ್ದು, ಜನವರಿ 5ಕ್ಕೆ ಅಂತಿಮ ಮತದಾರರ ಪಟ್ಟಿ ಪ್ರಕಟಣೆ ಆಗಲಿದೆ ಎಂದು ತಿಳಿಸಿದರು.
ಮಹಿಳಾ ಮತದಾರರೇ ಹೆಚ್ಚು;
ಜಿಲ್ಲೆಯಲ್ಲಿ ಒಟ್ಟು 27,03,083 ಮತದಾರರು ಇದ್ದು, ಇವರಲ್ಲಿ ಮಹಿಳಾ ಮತದಾರರೇ ಹೆಚ್ಚು. 13, 66,453 ಮಹಿಳಾ ಮತದಾರರು ಇದ್ದರೆ, 13,36,405 ಪುರುಷ ಮತದಾರರು ಇದ್ದಾರೆ. 225 ತೃತೀಯ ಲಿಂಗಿ ಮತದಾರರು ಇದ್ದಾರೆ ಎಂದು ಹೇಳಿದರು.

ಜಿಲ್ಲೆಯಲ್ಲಿ 41,429 ಯುವ ಮತದಾರರು ಇದ್ದು, 22,603 ಯುವಕರು, 18,822 ಯುವತಿಯರು ಇದ್ದಾರೆ. ನಾಲ್ವರು ತೃತೀಯ ಲಿಂಗಿಗಳು ಇದ್ದಾರೆ. ಆದರೆ ಜಿಲ್ಲೆಯಲ್ಲಿ ಯುವ ಮತದಾರರ ಸಂಖ್ಯೆ ಇನ್ನೂ ಹೆಚ್ಚಿದ್ದು, ಹೆಚ್ಚಿನವರು ನೋಂದಣಿ ಮಾಡಿಕೊಂಡಿಲ್ಲ. ಹಾಗಾಗಿ ಕಾಲೇಜುಗಳಲ್ಲಿಯೂ ವಿಶೇಷ ಅಭಿಮಾನ ಮಾಡಲಾಗುತ್ತಿದೆ. ಮತದಾರರ ಪಟ್ಟಿಯನ್ನು ಠಿಠಿ://್ಚಛಿಟ.ಚ್ಟ್ಞಠಿ.ಜಟ.ಜ್ಞಿ ಇಲ್ಲಿ ಪರಿಶೀಲಿಸಬಹುದು ಎಂದು ತಿಳಿಸಿದರು.

ಬರ ಪರಿಹಾರ ಪಡೆಯಲು ನೋಂದಣಿ
ರಾಜ್ಯದಲ್ಲಿ ಉಂಟಾಗಿರುವ ಬರ ಪರಿಸ್ಥಿತಿಯಲ್ಲಿ ರೈತರಿಗೆ ಸಹಾಯ ಮಾಡಲು ಸರ್ಕಾರ ಮುಂದಾಗಿದೆ. ಹಾಗಾಗಿ ಸಹಾಯ ಪಡೆಯಲು ರೈತರು ರೈತ ಸೇವಾ ಕೇಂದ್ರದಲ್ಲಿ ನೋಂದಣಿ ಮಾಡಿಸುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದರು.
ಚಾಲ್ತಿಯಲ್ಲಿರುವ ಆಧಾರ್ ಲಿಂಕ್ ಅಗಿರುವ ಬ್ಯಾಂಕ್ ಪುಸ್ತಕ, ಆಧಾರ್ ಕಾರ್ಡ್, ಆರ್‌ಟಿಸಿಯನ್ನು ಸೇವಾ ಕೇಂದ್ರದಲ್ಲಿ ಅಫ್‌ಲೋಡ್ ಮಾಡಿಸಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ 10,78,637 ಹಿಡುವಳಿದಾರರು ಇದ್ದು, 5,96,953 ನೋಂದಣಿ ಮಾಡಿಸಿಕೊಂಡಿದ್ದಾರೆ. 4,71,684 ನೋಂದಣಿ ಮಾಡಿಸಿಕೊಳ್ಳಬೇಕಿದೆ. ಎಲ್ಲರೂ ತಕ್ಷಣ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net