ಅಕ್ರಮ ನಿವೇಶನಗಳ ಸಕ್ರಮಕ್ಕೆ ಅವಕಾಶ

ತಾವರಗೇರಾ ಪಪಂನಲ್ಲಿ ಇ-ಖಾತಾ ಅಭಿಯಾನ ಶನಿವಾರ ಆರಂಭಿಸಲಾಯಿತು. ಮುಖ್ಯಾಧಿಕಾರಿ ಮಹೇಶ ಅಂಗಡಿ, ಸಿಬ್ಬಂದಿ ಖಾಜಾಹುಸೇನ್, ಶಾಮೂರ್ತಿ, ಶರಣಬಸವ ಸೈಂದರ, ಅಂತೋನಿ ರಾಜಾ, ರಾಘವೇಂದ್ರ, ಪ್ರಲ್ಲಾದ ಜೋಶಿ ಇತರರಿದ್ದರು.
ತಾವರಗೇರಾ ಪಪಂನಲ್ಲಿ ಇ-ಖಾತಾ ಅಭಿಯಾನ ಶನಿವಾರ ಆರಂಭಿಸಲಾಯಿತು. ಮುಖ್ಯಾಧಿಕಾರಿ ಮಹೇಶ ಅಂಗಡಿ, ಸಿಬ್ಬಂದಿ ಖಾಜಾಹುಸೇನ್, ಶಾಮೂರ್ತಿ, ಶರಣಬಸವ ಸೈಂದರ, ಅಂತೋನಿ ರಾಜಾ, ರಾಘವೇಂದ್ರ, ಪ್ರಲ್ಲಾದ ಜೋಶಿ ಇತರರಿದ್ದರು.
Published on

ತಾವರಗೇರಾ: ಪಪಂ ವ್ಯಾಪ್ತಿಯ ಅನಧಿಕೃತ ನಿವೇಶನ, ಮನೆ, ಎನ್‌ಎ ಪ್ಲಾಟ್‌ಗಳನ್ನು ಬಿ-ಖಾತಾ ಮೂಲಕ ಸಕ್ರಮಗೊಳಿಸಿಕೊಳ್ಳಲು ಮೂರು ತಿಂಗಳ ಕಾಲಾವಕಾಶವಿದ್ದು, ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮುಖ್ಯಾಧಿಕಾರಿ ಮಹೇಶ ಅಂಗಡಿ ತಿಳಿಸಿದರು.

ಪಪಂನಲ್ಲಿ ಶನಿವಾರ ಸಾರ್ವಜನಿಕರಿಂದ ಇ-ಖಾತಾ ಅರ್ಜಿ ಸ್ವೀಕರಿಸಿ ಮಾತನಾಡಿದರು. ಬಿ-ಖಾತೆಗಾಗಿ ಸ್ವಂತ ದಾಖಲೆಗಳಿಗೆ ಸಂಬಂಧಿಸಿದಂತೆ ಮಾಲೀಕತ್ವ ಸಾಬೀತು ಪಡಿಸಲು ನೋಂದಾಯಿತ ದಾಖಲೆ ಪತ್ರಗಳು, ದಾನಪತ್ರ, ವಿಭಾಗಪತ್ರ, ಸರ್ಕಾರದಿಂದ ನೀಡಲಾದ ಹಕ್ಕುಪತ್ರ, ಮಂಜೂರಾತಿ ಪತ್ರ, ಕಂದಾಯ ಇಲಾಖೆಯಿಂದ ನೀಡಿದ 94 ಸಿಸಿ ಹಕ್ಕುಪತ್ರಗಳು, ಪ್ರಸಕ್ತ ಸಾಲಿನ ಋಣಭಾರ ಪತ್ರ, ತೆರಿಗೆ ನೀಡಿದ ರಸೀದಿ, ಭಾವಚಿತ್ರ, ಮಾಲೀಕನ ಗುರುತಿನ ಚೀಟಿ, ಬಿ-ದಾಖಲೆಯಲ್ಲಿ ಆಸ್ತಿ ದಾಖಲಿಸಲು 2024ರ ದಾನಪತ್ರ, ಮಾರಾಟ ಪತ್ರ, ವಿಭಾಗ ಪತ್ರ, ಹಕ್ಕು ದಾಖಲೆ ಪತ್ರ, ಋಣಭಾರ ಪತ್ರ, ತೆರಿಗೆ ರಸೀದಿ ಸೇರಿ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು ಎಂದು ತಿಳಿಸಿದರು.

ಸಿಬ್ಬಂದಿ ಪ್ರಲ್ಲಾದ ಜೋಶಿ, ರಾಘವೇಂದ್ರ, ಖಾಜಾಹುಸೇನ, ಶಾಮೂರ್ತಿ, ಶರಣಬಸವ ಸೈಂದರ, ಅಂತೋನಿ ರಾಜ, ಅಬ್ದುಲ್ ಖಾದರ, ಪ್ರಮುಖರಾದ ಶಂಕರಸಿಂಗ್ ಹೊಸಮನಿ, ಚಂದ್ರಸಿಂಗ್ ಬನ್ನಿಕಟ್ಟಿ, ಶಂಕರಸಿಂಗ ಬಳ್ಳಾರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net