ಹನಿ ನೀರಾವರಿ ಅಳವಡಿಕೆಗೆ ಅವಕಾಶ: ತೋಟಗಾರಿಕೆ ಇಲಾಖೆಯಿಂದ ಅರ್ಜಿ ಆಹ್ವಾನ

Drip irrigation
Published on

ಮಂಡ್ಯ: ತೋಟಗಾರಿಕೆ ಇಲಾಖೆಯ ವತಿಯಿಂದ ಅನುಷ್ಠಾನಗೊಳಿಸುತ್ತಿರುವ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಸೂಕ್ಷ್ಮ ನೀರಾವರಿ ಕಾರ್ಯಕ್ರಮದಲ್ಲಿ ಕಾಫಿ, ಟೀ, ರಬ್ಬರ್, ಅಡಿಕೆ ಬೆಳೆ ಹೊರತುಪಡಿಸಿ ಉಳಿದೆಲ್ಲ ತೋಟಗಾರಿಕೆ ಬೆಳೆಗೆ ಹನಿ ನೀರಾವರಿ ಅಳವಡಿಸಿಕೊಳ್ಳಲು ಸಹಾಯಧನ ಕಲ್ಪಿಸಲಾಗುತ್ತಿದೆ.

ಡಾ.ಅಂಬೇಡ್ಕರ್ ಅಭಿವೃದ್ಧಿ ನಿಗಮ ಮತ್ತು ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ಗಂಗಾ ಕಲ್ಯಾಣ ಯೋಜನೆಯಡಿ ಬೋರ್‌ವೆಲ್‌ಗೆ ಸಹಾಯಧನ ಪಡೆದಿರುವ ಫಲಾನುಭವಿಗಳಿಗೆ ಹನಿ ನೀರಾವರಿ ಪದ್ಧತಿ ಅಳವಡಿಕೆಗೆ ಅವಕಾಶವಿದೆ. ಮಾಹಿತಿಗೆ ಕೆ.ಆರ್.ಪೇಟೆ ತಾಲೂಕಿನವರು ದೂ.ಸಂ 08237-262540, ಮದ್ದೂರು ದೂ.ಸಂ 08232-233450, ಮಳವಳ್ಳಿ ದೂ.ಸಂ 08230-242301, ಮಂಡ್ಯ ದೂ.ಸಂ 08232-225735, ನಾಗಮಂಗಲ ದೂ.ಸಂ 08234-286160, ಪಾಂಡವಪುರ ದೂ.ಸಂ 08236-255055 ಮತ್ತು ಶ್ರೀರಂಗಪಟ್ಟಣ ತಾಲೂಕಿನವರು ದೂ.ಸಂ 08236-253205 ಅನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net