ಪಠ್ಯದ ಜತೆ ಆಟೋಟಗಳಿಗೆ ಸಮಯ ಮೀಸಲಿಡಿ

Allow time for autographs along with the text
ಕಲಾದಗಿಯ ಹಣ್ಣು ಬೆಳೆಗಾರರ ವಿದ್ಯಾ ಸಂಸ್ಥೆಯಲ್ಲಿ ಕ್ರೀಡಾಪಟು ಲಕ್ಷ್ಮಣ ಮಾದರ ಅವರನ್ನು ಸನ್ಮಾನಿಸಲಾಯಿತು. ಪತ್ರಕರ್ತ ದ. ರಾ.ಪುರೋಹಿತ, ಶಾಲೆ ಮುಖ್ಯಶಿಕ್ಷಕ ಆರ್. ವಿ. ಜಾಧವ, ಶ್ರೀಕಾಂತ ಕೆರಕಲಮಟ್ಟಿ, ದೈಹಿಕ ಶಿಕ್ಷಣ ಶಿಕ್ಷಕ ಆರ್.ಪಿ.ಜೋಶಿ ಇದ್ದರು.
Published on

ಕಲಾದಗಿ: ವಿದ್ಯಾರ್ಥಿ ಜೀವನ ಬರೀ ಅಂಕ ಗಳಿಸಲು ಹಾಗೂ ಅನವಶ್ಯಕವಾಗಿ ಮೊಬೈಲ್ ಬಳಸಲಷ್ಟೆ ಸೀಮಿತಗೊಳ್ಳದೆ, ಆರೋಗ್ಯಯುತ ದೇಹ ಹಾಗೂ ಮನಸ್ಸು ತಯಾರು ಮಾಡುವಂಥ ಆಟೋಟಗಳಿಗೂ ಮೀಸಲಿಡಬೇಕು ಎಂದು ಹಣ್ಣುಬೆಳೆಗಾರರ ಪ್ರೌಢಶಾಲೆ ಮುಖ್ಯಶಿಕ್ಷಕ ಆರ್.ವಿ.ಜಾಧವ ಹೇಳಿದರು.

ಶಾಲೆಯಲ್ಲಿ ಕ್ರೀಡಾದಿನದ ನಿಮಿತ್ತ ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬದುಕಿನ ಸಾಧನೆಗೆ ಪ್ರೇರಕವಾಗುವ ಕ್ರೀಡೆಗಳಲ್ಲಿ ಪಾಲ್ಗೊಳ್ಳದೆ ಬಹುತೇಕ ವಿದ್ಯಾರ್ಥಿಗಳು ಮೊಬೈಲ್ ಬಳಕೆಯಲ್ಲಿ ಕಾಲ ಕಳೆಯುತ್ತಿರುವುದು ಕಳವಳಕಾರಿ ಸಂಗತಿ. ವಿದ್ಯಾರ್ಥಿಗಳು ಪಾಠದ ಜತೆಗೆ ಆಟದಲ್ಲೂ ಪಾಲ್ಗೊಳ್ಳಬೇಕು ಎಂದು ಆಶಯ ವ್ಯಕ್ತಪಡಿಸಿದರು. ಅಂಗವಿಕಲ ಕ್ರೀಡಾಪಟು ಲಕ್ಷ್ಮಣ ಮಾದರ ನಮಗೆಲ್ಲ ಸ್ಫೂರ್ತಿ ಎಂದು ಪ್ರಶಂಸಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಅಂಗವಿಕಲ ಕ್ರೀಡಾಪಟು ಲಕ್ಷ್ಮಣ ಮಾದರ, ರಾಷ್ಟ್ರ ಧ್ವಜವನ್ನು ಮೈಮೇಲೆ ಹಾಕಿಕೊಳ್ಳುವಂಥ ಶ್ರೇಷ್ಠ ಆವಕಾಶ ಸೈನಿಕರು ಹಾಗೂ ಕ್ರೀಡಾಪಟುವಿಗೆ ಮಾತ್ರ ದೊರೆಯುತ್ತದೆ. ಇಂಥ ಅವಕಾಶವನ್ನು ಪಡೆಯುವಂಥವರು ನೀವಾಗಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಪ್ಯಾರಾ ಥ್ರೊಬಾಲ್ ಆಟದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಸಮೀಪದ ಅಂಕಲಗಿಯ ಅಂಗವಿಕಲ ಕ್ರೀಡಾಪಟು ಲಕ್ಷ್ಮಣ ಮಾದರ ಅವರನ್ನು ಸನ್ಮಾನಿಸಲಾಯಿತು.

ಪತ್ರಕರ್ತ ದ.ರಾ.ಪುರೋಹಿತ, ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಶ್ರೀಕಾಂತ ಕೆರಕಲಮಟ್ಟಿ, ದೈಹಿಕ ಶಿಕ್ಷಣ ಶಿಕ್ಷಕ ಆರ್.ಪಿ.ಜೋಶಿ ವೇದಿಕೆಯಲ್ಲಿದ್ದರು. ದೈಹಿಕ ಶಿಕ್ಷಣ ಶಿಕ್ಷಕ ಮಾರುತಿ ಬಾರಕೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಪಿ. ಎಚ್. ಮಾರಂಗಪ್ಪನವರ ನಿರೂಪಿಸಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net