ಅನಾಥ ಮಕ್ಕಳ ಶಾಲೆಗೆ ಅನುಮತಿ ಕೊಡಿ

14 smg 2
ಗೋಪಾಲಗೌಡ ಬಡಾವಣೆಯಲ್ಲಿ ಶಾಲೆ ಆರಂಭಿಸಲು ಅನುಮತಿ ನೀಡುವಂತೆ ಒತ್ತಾಯಿಸಿ ಟಿ.ಮಾಲತಿ, ಶೋಭಾ, ಮಂಜುಳಾ, ಜಗದೀಶ್, ಕೆ.ಬಿ.ಉಮೇಶ್ ಇತರರು ಪ್ರತಿಭಟನೆ ನಡೆಸಿದರು.
Published on

ಶಿವಮೊಗ್ಗ: ಗೋಪಾಲ ಗೌಡ ಬಡಾವಣೆಯಲ್ಲಿ ಅನಾಥ ಮಕ್ಕಳ ಶಾಲೆ ತೆರೆಯಲು ಅನುಮತಿ ನೀಡಬೇಕೆಂದು ಆಗ್ರಹಿಸಿ ಸ್ನೇಹಾಶ್ರಯ ಅರ್ಬನ್ ಆ್ಯಂಡ್ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಸದಸ್ಯರು ಶುಕ್ರವಾರ ಜಿಲ್ಲಾಽಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಗೋಪಾಲಗೌಡ ಬಡಾವಣೆ 100 ಅಡಿ ರಸ್ತೆ ಪ್ರದೇಶದಲ್ಲಿ ಪ್ರಕೃತಿ ಪೂರ್ವ ಪ್ರಾಥಮಿಕ ಶಾಲೆ ತೆರೆಯಲು ಜೂ.೧೩ರಂದು ಶಿಕ್ಷಣ ಇಲಾಖೆಗೆ ಅರ್ಜಿ ಸಲ್ಲಿಸಿದ್ದೆವು. ಜು.1 ರಂದು ಸ್ಥಳ ಪರಿಶೀಲನೆ ಮಾಡಿದ್ದ ಶಿಕ್ಷಣ ಇಲಾಖೆ ಅಽಕಾರಿಗಳು ಶಾಲೆ ಮಂಜೂರಾತಿ ಪ್ರಕ್ರಿಯೆ ಆರಂಭಿಸಿದ್ದರು. ಶಾಲೆ ತೆರೆಯಲು ಅನುಮತಿ ಸಿಗುವ ಹಂತದಲ್ಲಿತ್ತು. ಅಷ್ಟರೊಳಗೆ ಜು. 10ರಂದು ಮದ್ಯದಂಗಡಿ ಆರಂಭಿಸಲು ವ್ಯಕ್ತಿಯೊಬ್ಬರು ಜಿಲ್ಲಾಡಳಿತಕ್ಕೆ ಅರ್ಜಿ ಸಲ್ಲಿಸಿದ್ದರಿಂದ ಶಿಕ್ಷಣ ಇಲಾಖೆ ಅಽಕಾರಿಗಳು ಶಾಲೆಗೆ ಅನುಮತಿ ನೀಡಲು ನಿರಾಕರಣೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಶಿಕ್ಷಣ ಇಲಾಖೆಯಿಂದ ಅನುಮತಿ ನಿರಾಕರಣೆ ಮಾಡಿರುವುದರಿಂದ ಜಿಲ್ಲಾಽಕಾರಿಗಳೇ ಸ್ಥಳ ಪರಿಶೀಲನೆ ನಡೆಸಬೇಕು. ನಮ್ಮ ದಾಖಲೆಗಳನ್ನು ಪರಾಮರ್ಶೆ ಮಾಡಿ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು. ಅಧ್ಯಕ್ಷೆ ಟಿ.ಮಾಲತಿ, ಪ್ರಮುಖರಾದ ಜಗದೀಶ್, ಶೋಭಾ, ಮಂಜುಳಾ, ಕೆ.ಬಿ.ಉಮೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net