ಧರಣಿಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿ

Published on

ಹಗರಿಬೊಮ್ಮನಹಳ್ಳಿ: ಗೌರವಧನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಬೆಂಗಳೂರಿನ ಪ್ರೀಡಂ ಫಾರ್ಕ್‌ನಲ್ಲಿ ಜು.7ರಂದು ಕರ್ನಾಟಕ ರಾಜ್ಯ ಮುಖ್ಯ ಪುಸ್ತಕ ಬರಹಗಾರರ ಒಕ್ಕೂಟದಿಂದ ನಡೆಯಲಿರುವ ಅನಿರ್ದಿಷ್ಟವಾಧಿ ಧರಣಿಯಲ್ಲಿ ಭಾಗವಹಿಸಲು ಸ್ಥಳಿಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳು, ಸಖಿಯರಿಗೆ ಅವಕಾಶ ನೀಡುವಂತೆ ಒತ್ತಾಯಿಸಿ ಒಕ್ಕೂಟದ ತಾಲೂಕು ಘಟಕದಿಂದ ತಾಪಂ ಇಒ ಡಾ.ಪರಮೇಶ್ವರಪ್ಪಗೆ ಬುಧವಾರ ಮನವಿ ಸಲ್ಲಿಸಲಾಯಿತು. ಕೌಶಲಾಭಿವೃದ್ಧಿ ಇಲಾಖೆಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿ ದುಡಿಯುತ್ತಿರುವ ಒಕ್ಕೂಟದ ಎರಡು ಸಾವಿರಕ್ಕೂ ಹೆಚ್ಚು ನೌಕರರು ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ. ನಮಗೂ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು. ಒಕ್ಕೂಟದ ಕೆ.ಶಾರದಮ್ಮ, ಎಂ.ಜಿ.ಶಿಲ್ಪಾ, ಕೆ.ಪವಿತ್ರಾ, ಕೆ.ಶ್ವೇತಾ, ಪಾರ್ವತಿ, ಎ.ಬಸಮ್ಮ, ಬಿ.ಅಕ್ಕಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net