ಅತ್ತಿಬೆಲೆಯಲ್ಲಿ ಹೂವು ಮಾರುಕಟ್ಟೆಗೆ ಅವಕಾಶ ನೀಡಿ

09 09 205_BNG_RURAL_PAGE_02
ಆನೇಕಲ್​ ತಾಲೂಕಿನ ಬ್ಯಾಗಡದೇನಹಳ್ಳಿಯಲ್ಲಿ ಹಸಿರು ಮನೆ ಬೆಳೆಗಾರರ ೇಮಾಭಿವೃದ್ಧಿ ಸಂದಿಂದ ಆಯೋಜಿಸಿದ್ದ ಪುಷ್ಪೋದ್ಯಮ ರೈತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಹಸಿರು ಮನೆ ಬೆಳಗಾರರ ೇಮಾಭಿವೃದ್ಧಿ ಸಂದ ಕಾರ್ಯದರ್ಶಿ ಮೋಹನ್​, ನಿರ್ದೇಶಕ ಇಂಡ್ಲವಾಡಿ ಬಾಬುರೆಡ್ಡಿ, ಅಶೋಕ್​ ಕುಮಾರ್​, ರಮೇಶ್​ ರೆಡ್ಡಿ, ಮಧು ಗೌಡ, ಕೀರ್ತನಾ, ಗೋಪಾಲ್​ ರೆಡ್ಡಿ, ರಾಜಗೋಪಾಲ್​ ರೆಡ್ಡಿ, ಮಂಜುನಾಥ್​ ರೆಡ್ಡಿ, ಮಂಜುನಾಥ್​, ವೆಂಕಟೇಶ್​ ಇದ್ದರು.
Published on

ಆನೇಕಲ್​ : ಹೂವು ಮಾರುಕಟ್ಟೆಗೆ ಹೆಬ್ಬಾಳದ ಜಿಕೆವಿಕೆಯಲ್ಲಿ ಸ್ಥಳ ಕಾಯ್ದಿರಿಸಿರುವುದು ರೈತರ ಪ್ರಯಾಣ ವೆಚ್ಚ ಹೆಚ್ಚಿಸಲಿದೆ. ಹಾಗಾಗಿ ತಾಲೂಕಿನ ಅತ್ತಿಬೆಲೆ ಸಮೀಪದ ಆರ್​ಟಿಒ ಕಚೇರಿ ಸಮೀಪವಿರುವ ಸರ್ಕಾರಿ ಜಾಗದಲ್ಲಿ ಹೂವು ಮಾರುಕಟ್ಟೆಗೆ ಅವಕಾಶ ಕಲ್ಪಿಸಬೇಕು ಎಂದು ತಾಲೂಕು ಹಸಿರು ಮನೆ ಬೆಳೆಗಾರರ ೇಮಾಭಿವೃದ್ಧಿ ಸಂದ ಅಧ್ಯಕ್ಷ ಕೂನಮಡಿವಾಳ ವೈ.ಸೋಮಣ್ಣ ಆಗ್ರಹಿಸಿದರು.

ತಾಲೂಕಿನ ಬ್ಯಾಗಡದೇನಹಳ್ಳಿಯಲ್ಲಿ ಹಸಿರು ಮನೆ ಬೆಳೆಗಾರರ ೇಮಾಭಿವೃದ್ಧಿ ಸಂದಿಂದ ಆಯೋಜಿಸಿದ್ದ ಪುಷ್ಪೋದ್ಯಮ ರೈತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅತ್ತಿಬೆಲೆಯಲ್ಲಿ ಹೂವಿನ ಮಾರುಕಟ್ಟೆ ಸ್ಥಾಪಿಸುವುದರಿಂದ ಆನೇಕಲ್​, ಮಾಲೂರು, ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರ ಸೇರಿ 10ಕ್ಕೂ ಹೆಚ್ಚು ತಾಲೂಕು ರೈತರಿಗೆ ಅನುಕೂಲವಾಗಲಿದೆ. ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರೈತರಿಗೆ ಪ್ರಯಾಣದ ವೆಚ್ಚ ಕಡಿಮೆಯಾಗಲಿದೆ. ಆದ್ದರಿಂದ ಸರ್ಕಾರ ಜಿಕೆವಿಕೆಯಲ್ಲಿ ಕಾಯ್ದಿರಿಸಿರುವ ಜಾಗದ ಬದಲಿಗೆ ಅತ್ತಿಬೆಲೆಯಲ್ಲಿರುವ ಸರ್ಕಾರಿ ಜಾಗದಲ್ಲಿ ಹೂವಿನ ಮಾರುಕಟ್ಟೆಗೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಸಂಸದರ ಜನಸ್ಪಂದನಾ ಕಾರ್ಯಕ್ರಮದಲ್ಲಿಯೂ ರೈತರ ಸಮಸ್ಯೆ ಬಗ್ಗೆ ವಿವರಿಸಲಾಗಿದೆ. ಮುಂದಿನ ದಿನಗಳಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್​ ಅವರಿಗೆ ಹೂವು ಮಾರುಕಟ್ಟೆಯನ್ನು ಆನೇಕಲ್​ ತಾಲೂಕಿನ ಅತ್ತಿಬೆಲೆಯ ಆರ್​ಟಿಒ ಕಚೇರಿ ಸಮೀಪದ ಸರ್ಕಾರಿ ಜಾಗದಲ್ಲಿ ಸ್ಥಾಪಿಸಲು ಮನವಿ ಸಲ್ಲಿಸಲಾಗುವುದು.

ಬೆಂಗಳೂರು ನಗರ, ಗ್ರಾಮಾಂತರ ಪ್ರದೇಶಗಳಲ್ಲಿ 1500 ಎಕರೆಗೂ ಹೆಚ್ಚು ವ್ಯಾಪ್ತಿಯಲ್ಲಿ ರೈತರು ಪುಷ್ಪ ಕೃಷಿ ಮಾಡುತ್ತಾರೆ. 20 ವರ್ಷಗಳಿಂದ ಹೂವುಗಳನ್ನು ಬೆಂಗಳೂರಿನ ಕೆಆರ್​ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿತ್ತು. ಇದೀಗ ಹೆಬ್ಬಾಳದ ಜಿಕೆವಿಕೆಯಲ್ಲಿ ಜಾಗ ನೀಡಲು ಸಿದ್ಧತೆ ನಡೆಸಲಾಗಿದೆ. ಇದರಿಂದಾಗಿ ಈ ಭಾಗದ ಜನರಿಗೆ ತೊಂದರೆಯಾಗಲಿದೆ. ಓಡಾಟ ಖರ್ಚಿನ ಜತೆಗೆ ದಲ್ಲಾಳಿಗಳ ಕಾಟ ಹೆಚ್ಚಾಗಲಿದೆ ಎಂದರು. ಆನೇಕಲ್​ ತಾಲೂಕು ಹಸಿರು ಮನೆ ಬೆಳಗಾರರ ೇಮಾಭಿವೃದ್ಧಿ ಸಂದ ಉಪಾಧ್ಯಕ್ಷ ಲೋಕೇಶ್​ ಮಾತನಾಡಿ, ಈ ಭಾಗದಲ್ಲಿ ನೈಸ್​ ರಸ್ತೆ, ಎಸ್​ಟಿಆರ್​ಆರ್​ ರಸ್ತೆ, ಮೆಟ್ರೋ ಸೇವೆ, ರಾಷ್ಟ್ರೀಯ ಹೆದ್ದಾರಿ, ವಿಮಾನ ನಿಲ್ದಾಣ, ರೈಲ್ವೇ ಸೇವೆ ಸೇರಿ ಎಲ್ಲ ಸೌಲಭ್ಯ ಇರುವುದರಿಂದ ಅತ್ತಿಬೆಲೆಯಲ್ಲಿ ಹೂವಿನ ಮಾರುಕಟ್ಟೆ ಪ್ರಾರಂಭಿಸಬೇಕು. ಎಲ್ಲೆಡೆ ವಾಹನ ದಟ್ಟಣೆ ಹೆಚ್ಚಿರುವುದರಿಂದ ಹೂವು ವ್ಯಾಪಾರಕ್ಕೆ ತೊಂದರೆಯಾಗಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net