ಜಮೀನಿಗೆ ತೆರಳಲು ರೈತರಿಗೆ ಅವಕಾಶ ಮಾಡಿಕೊಡಿ

ಹಿರೀಸಾವೆಯ ರೈಲ್ವೆ ನಿಲ್ದಾಣದ ಬಳಿ ಎದುರಾಗಿರುವ ಜಾಗದ ಸಮಸ್ಯೆ ಸ್ಥಳಕ್ಕೆ ಶಾಸಕ ಬಾಲಕೃಷ್ಣ ಭೇಟಿ ನೀಡಿ ಪರಿಶೀಲಿಸಿದರು. ರಾಮಕೃಷ್ಣ, ರವಿಕುಮಾರ್, ಮಹೇಶ್, ವೆಂಕಟೇಶ್, ಸಿದ್ದಲಿಂಗಪ್ಪ, ಹೋಟೆಲ್ ರಾಮಣ್ಣ,  ಕುಮಾರ್, ಹರೀಶ್ ಮತ್ತಿತರರು ಇದ್ದರು.
ಹಿರೀಸಾವೆಯ ರೈಲ್ವೆ ನಿಲ್ದಾಣದ ಬಳಿ ಎದುರಾಗಿರುವ ಜಾಗದ ಸಮಸ್ಯೆ ಸ್ಥಳಕ್ಕೆ ಶಾಸಕ ಬಾಲಕೃಷ್ಣ ಭೇಟಿ ನೀಡಿ ಪರಿಶೀಲಿಸಿದರು. ರಾಮಕೃಷ್ಣ, ರವಿಕುಮಾರ್, ಮಹೇಶ್, ವೆಂಕಟೇಶ್, ಸಿದ್ದಲಿಂಗಪ್ಪ, ಹೋಟೆಲ್ ರಾಮಣ್ಣ, ಕುಮಾರ್, ಹರೀಶ್ ಮತ್ತಿತರರು ಇದ್ದರು.
Published on

ಹಿರೀಸಾವೆ: ಇಲ್ಲಿನ ರೈಲ್ವೆ ನಿಲ್ದಾಣದ ಬಳಿಯಿರುವ ಜಮೀನಿಗೆ ಹೋಗಲು ದಾರಿ ಇಲ್ಲದೆ ಸಮಸ್ಯೆಯಾಗಿದ್ದು, ಡಿಸಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಸಮಸ್ಯೆ ಬಗೆಹರಿಸಬೇಕು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.

ತೆಂಗಿನ ತೋಟ, ಹೊಲಕ್ಕೆ ಹೋಗುವವರು ಹಾಗೂ ರಾಮೇಶ್ವರ ದೇವಸ್ಥಾನಕ್ಕೆ ತೆರಳುವವರು ರೈಲ್ವೆ ನಿಲ್ದಾಣ ಮತ್ತು ಹಾಸನ-ಬೆಂಗಳೂರು ಮಾರ್ಗದ ಪಕ್ಕದಲ್ಲಿದ್ದ ಜಾಗವನ್ನು ಬಳಸುತ್ತಿದ್ದರು. ಆದರೆ ಇತ್ತೀಚೆಗೆ ಇಲಾಖೆ ಈ ಜಾಗಕ್ಕೆ ಕಬ್ಬಿಣದ ಕಂಬಿಗಳ ಬೇಲಿ ಹಾಕಿದ್ದು, ಇದರಿಂದ ಸಮಸ್ಯೆಯಾಗಿದೆ ಎಂದು ಸಾರ್ವಜನಿಕರು ಶಾಸಕರಿಗೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಸ್ಥಳಕ್ಕೆ ಶಾಸಕರು ಭೇಟಿ ನೀಡಿ ದಾರಿ ಇಲ್ಲದ್ದನ್ನು ಗಮನಿಸಿದ್ದಾರೆ. ನಂತರ ದೂರವಾಣಿ ಮೂಲಕ ಜಿಲ್ಲಾಧಿಕಾರಿಯನ್ನು ಸಂಪರ್ಕಿಸಿ ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಿದರು.

ಮುಖಂಡರಾದ ರಾಮಕೃಷ್ಣ, ರವಿಕುಮಾರ್, ಮಹೇಶ್, ವೆಂಕಟೇಶ್, ಸಿದ್ದಲಿಂಗಪ್ಪ, ಹೋಟೆಲ್ ರಾಮಣ್ಣ, ಉಯ್ಯಲೆ ಕಂಬದ ಕುಮಾರ್, ಸೊಸೈಟಿ ಹರೀಶ್, ಬೂಕದ ಬಾಲಾಜಿ, ಶ್ರೀನಾಥಬಾಬು ಸೇರಿದಂತೆ ಅನೇಕರು ಸಮಸ್ಯೆ ಕುರಿತು ಶಾಸಕರಿಗೆ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net