

ರಾಯಚೂರು ಹಿಂದುಳಿದ ವರ್ಗಗಳ ಜಾತಿ ಸಮೀಕ್ಷೆ ನಡೆಸಲು ಉದ್ದೇಶಿಸಿರುವ ಸರ್ಕಾರ ಬ್ರಾಹ್ಮಣದ ಅನೇಕ ಉಪಜಾತಿಗಳನ್ನು ಪ್ರತ್ಯೇಕವಾಗಿ ಗುರುತಿಸಿ ಗೊಂದಲಕ್ಕೆ ಕಾರಣವಾಗಿದೆ. ಕ್ರಮಸಂಖ್ಯೆ 210 ರಲ್ಲಿ ಬ್ರಾಹ್ಮಣ ಸಮುದಾಯ ನೊಂದಣಿ ಮಾಡಿಕೊಳ್ಳಲು ಅವಕಾಶ ನೀಡಬೇಕೆಂದು ಮಹಾಸಭಾದ ರಾಜ್ಯ ಉಪಾಧ್ಯಕ್ಷ ಜಗನ್ನಾಥ ಕುಲ್ಕರ್ಣಿ ಸರ್ಕಾರಕ್ಕೆ ಒತ್ತಾಯಿಸಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರ ಗುರುತಿಸಿರುವ ಬ್ರಾಹ್ಮಣ ಸಮಾಜದಲ್ಲಿ ಅನೇಕ ವಿಂಗಡನೆ ಮಾಡಿದ್ದ ಅವೈಜ್ಞಾನಿಕವಾಗಿದೆ. ಬ್ರಾಹ್ಮಣ ಕ್ರಿಶ್ಚಿಯನ್ ಸೇರಿ ಅನೇಕ ಗೊಂದಲ ಉಪ ಪಂಗಡಗಳನ್ನು ಸೇರಿಸಿರುವ ಸಮಾಜವನ್ನು ವಿಭಜನೆಗೆ ಕಾರಣವಾಗಿದೆ. ಹಿಂದಿನ ಅನೇಕ ಸಮಾಜ ಗಣತಿಯಲ್ಲಿ ಬ್ರಾಹ್ಮಣ ಏಕ ಕ್ರಮ ಸಂಖ್ಯೆ ನೀಡಲಾಗಿತ್ತು. ಪ್ರಥಮ ಬಾರಿಗೆ ನಡೆಯತ್ತಿರುವ ಜಾತಿ ಸಮೀಕ್ಷೆಯಲ್ಲಿ ಗೊಂದಲ ಉಂಟಾಗದಂತೆ ಆಯೋಗ ಎಚ್ಚರವಹಿಸಲು ಉಳಿದೆಲ್ಲ ಕ್ರಮಸಂಖ್ಯೆಯನ್ನು ತೆಗೆದು ಕ್ರಮಸಂಖ್ಯೆ 210 ಮಾತ್ರ ಅಳವಡಿಸಿ ಗಣತಿ ನಡೆಸಬೇಕು.
ಆರ್ಥಿಕವಾಗಿ ಹಿಂದುಳಿದ ಅನೇಕ ಬ್ರಾಹ್ಮಣ ಕುಟುಂಬಗಳಿದ್ದು ತಪ್ಪು ಮಾಹಿತಿ ಸಂಗ್ರಹಿಸಿ ಸಮೂದಾಯಕ್ಕೆ ಆಗುವ ಆನ್ಯಾಯ ತಡೆಯಲು ಮರು ಪ್ರಕಟಣೆ ನೀಡಿ ಏಕಿಕೃತ ಬ್ರಾಹ್ಮಣ ಕ್ರಮಸಂಖ್ಯೆ 210 ಮಾತ್ರ ಉಳಿಸಲು ಆದೇಶ ಹೊರಡಿಸಬೇಕೆಂದರು. ಈ ಸಂದರ್ಭದಲ್ಲಿ ಗುರುರಾಜಾಚಾರ್ಯ ತಾಳಿಕೋಳಿ, ಹರೀಶ ಕೊಪ್ಪರ, ಗೋಪಾಲಕೃಷ್ಣ ಕಟ್ಟಿ ಇದ್ದರು.