

ರೋಣ: ಪೌರಕಾರ್ಮಿಕರನ್ನು ಸರ್ಕಾರಿ ನೌಕರರೆಂದು ಪರಿಗಣಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪುರಸಭೆ ಕಚೇರಿ ಮುಂದೆ ಪೌರಕಾರ್ಮಿಕರು ಮುಷ್ಕರ ನಡೆಸಿದರು.
ಸಂಘದ ತಾಲೂಕು ಉಪಾಧ್ಯಕ್ಷ ಎಚ್.ಎನ್. ಬಳ್ಳಾರಿ ಮಾತನಾಡಿ, ಕರ್ನಾಟಕದ ಎಲ್ಲ ಪೌರಕಾರ್ಮಿಕರು ಹಾಗೂ ಸಿಬ್ಬಂದಿಯನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು. ಪೌರಕಾರ್ಮಿಕರ ವೇತನ ಹೆಚ್ಚಳ, ದಿನಗೂಲಿ ಕ್ಷೇಮಾಭಿವೃದ್ಧಿ, ಕನಿಷ್ಠ ವೇತನ, ಸಮಾನ ಕೆಲಸಕ್ಕೆ ಸಮಾನ ವೇತನ, ಸೇವೆ ಕಾಯಂ ಸೇರಿದಂತೆ ವಿವಿಧ ಬೇಡಿಕೆಗಳನ್ನು ತಕ್ಷಣವೇ ಈಡೇರಿಸಬೇಕು. ಹಿಂದೆ ಸಿಎಂ ಜತೆ ಕಾರ್ಮಿಕರ ಮುಖಂಡರು ನೇರವಾಗಿ ಮಾತನಾಡಲು ಅವಕಾಶ ಮಾಡಿಕೊಡುವುದಾಗಿ ಕಾರ್ಮಿಕ ಸಚಿವರು ಭರವಸೆ ನೀಡಿದ್ದರು. ಅದು ಇದುವರೆಗೂ ಈಡೇರಿಲ್ಲ. ಹೀಗಾಗಿ ಮುಷ್ಕರ ಅನಿವಾರ್ಯ ಎಂದರು.
ಉಮೇಶ ಓಜನಳ್ಳಿ, ಸಂತೋಷ ಚವಾಣ, ಬಸವರಾಜ ಕಿರೇಸೂರ, ಪರಿದ್ ಸರ್ವರ, ರೇಣ್ಣವ್ವ ಚಲವಾದಿ, ಶಿವಪ್ಪ ದೊಡ್ಡಮನಿ, ಎನ್.ಬಿ. ಬಂಡಿ, ರೇಣವ್ವ ಮಾದರ, ಸಿದ್ದಮ್ಮ ದೊಡ್ಡಮನಿ, ಈರಪ್ಪ ಪಲ್ಲೇದ, ಮೈಲಾರಪ್ಪ ಕಳಸಣ್ಣವರ ಇತರರಿದ್ದರು.