ಕನ್ನಡ ನಾಮಫಲಕ ಶೇ.50ಕ್ಕೆ ಅವಕಾಶ ನೀಡಿ

Kannada Editorial
Published on

ಮೈಸೂರು: ಪ್ರವಾಸಿ ಸ್ಥಳಗಳಲ್ಲಿ ಶೇ.50ಕ್ಕಿಂತ ಹೆಚ್ಚು ನಾಮಲಕಗಳು ಕನ್ನಡದಲ್ಲಿ ಇದ್ದರೆ ಹೊರ ರಾಜ್ಯದ ಪ್ರವಾಸಿಗರಿಗೆ ಅರ್ಥವಾಗುವುದಿಲ್ಲ. ಹಾಗಾಗಿ ಮೈಸೂರು ಪ್ರವಾಸೋದ್ಯಮದ ದೃಷ್ಟಿಯಿಂದ ಹಿಂದಿನ ಆದೇಶದಂತೆ ಶೇ.50ರಷ್ಟು ನಾಮಲಕ ಹಾಕಿಕೊಳ್ಳಲು ಅವಕಾಶ ನೀಡಬೇಕು ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ಮನವಿ ಮಾಡಿದ್ದಾರೆ.

ನಾವು ವ್ಯಾಪಾರಿಗಳು, ತೆರಿಗೆಗಳನ್ನು ಪಾವತಿಸುವ ಜನರು. ಯಾವುದೇ ಕಾರಣಕ್ಕೂ ಕನ್ನಡ ವಿರೋಧಿಗಳಲ್ಲ. ನಮ್ಮ ಭಾಷೆ, ನೆಲ, ಜಲ ಮತ್ತು ಗಡಿ ವಿಚಾರದಲ್ಲಿ ಯಾವುದೇ ರಾಜಿ ಇಲ್ಲವೇ ಇಲ್ಲ. ಕನ್ನಡ ನಾಮಲಕ ಅಳವಡಿಕೆಗೆ ಸಂಪೂರ್ಣ ಸಹಕಾರ ನೀಡಲಾಗುವುದು. ಆದರೆ, ಶೇ.50ರ ಅನುಪಾತದಲ್ಲಿ ಯೋಜನೆ ಜಾರಿಗೊಳಿಸಬೇಕು ಎಂದು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರಪಾಲಿಕೆ ವ್ಯಾಪ್ತಿಗೆ ಒಳಪಟ್ಟಂತೆ ಎಲ್ಲ ವಾಣಿಜ್ಯ ಮಳಿಗೆಗಳು ಹಾಗೂ ಉದ್ದಿಮೆಗಳು ತಮ್ಮ ಶಾಖೆ ಹಾಗೂ ವ್ಯಾಪಾರ ಕೇಂದ್ರದ ಮುಂದೆ ನಾಮಲಕಗಳಲ್ಲಿ ಶೇ.50 ರಷ್ಟು ಕನ್ನಡವನ್ನು ಕಡ್ಡಾಯಗೊಳಿಸಿ ಈ ಹಿಂದೆ ಆದೇಶ ಹೊರಡಿಸಿತ್ತು. ಆದರೆ, ಇದೀಗ ಶೇ.60ರಷ್ಟು ಇರಬೇಕೆಂದು ಜಾರಿಗೆ ತಂದಿದ್ದಾರೆ. ಇದರಿಂದ ಹೊರ ರಾಜ್ಯದ ಪ್ರವಾಸಿಗರಿಗೆ ಅರ್ಥವಾಗುವುದಿಲ್ಲ. ಆದ್ದರಿಂದ ಈ ಹಿಂದಿನ ಆದೇಶವನ್ನೇ ಪಾಲಿಸಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net