ಅಭ್ಯಥಿರ್ಗಳಿಗೆ ಚಿಹ್ನೆ ಹಂಚಿಕೆ

24 vikram 6
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಧಾರವಾಡ ಲೋಕಸಭೆ ಕ್ಷೇತ್ರದಿಂದ ಸ್ಪಧಿರ್ಸುವ ಅಭ್ಯಥಿರ್ಗಳಿಗೆ ಚುನಾವಣಾ ಆಯೋಗದ ನಿಯಮಗಳ ಅನ್ವಯ ಜಿಲ್ಲಾ ಚುನಾವಣಾಧಿಕಾರಿ ಚಿಹ್ನೆ ಹಂಚಿಕೆ ಮಾಡಿದ್ದಾರೆ.
ಮಾನ್ಯತೆ ಪಡೆದ ರಾಷ್ಟ್ರೀಯ ರಾಜಕೀಯ ಪಗಳಾದ ಭಾರತೀಯ ಜನತಾ ಪಕ್ಷದ ಅಭ್ಯಥಿರ್ ಪ್ರಲ್ಹಾದ ಜೋಶಿ ಅವರಿಗೆ ಕಮಲ, ಇಂಡಿಯನ್​ ನ್ಯಾಷನಲ್​ ಕಾಂಗ್ರೆಸ್​ ಪದ ಅಭ್ಯಥಿರ್ ವಿನೋದ ಅಸೂಟಿ ಅವರಿಗೆ ಕೈ ಚಿಹ್ನೆ ನೀಡಲಾಗಿದೆ. ನೋಂದಾಯಿತ ರಾಜಕೀಯ ಪಗಳ ಅಭ್ಯಥಿರ್ಗಳಾದ ನಾಕಿ ಭಾರತೀಯ ಏಕತಾ ಪಾಟಿರ್ಯ ಜಾವೀದ ಆಹ್ಮದ ಬೆಳಗಾವಂಕರಗೆ ಸೀಟಿ(ವಿಸಿಲ್​), ಪ್ರಹಾರ ಜನಶಕ್ತಿ ಪಾಟಿರ್ಯ ಟಾಕಪ್ಪ ಯಲ್ಲಪ್ಪ ಕಲಾಲಗೆ ಕಬ್ಬು ರೈತ, ಕರ್ನಾಟಕ ರಾಷ್ಟ್ರ ಸಮಿತಿ ಪದ ನಾಗರಾಜ ಕರೆಣ್ಣವರ ಅವರಿಗೆ ಬ್ಯಾಟರಿ ಟಾರ್ಚ್​, ಉತ್ತಮ ಪ್ರಜಾಕೀಯ ಪಾಟಿರ್ಯ ಬುಗಡಿ ಬಸವಲಿಂಗಪ್ಪ ಈರಪ್ಪ ಅವರಿಗೆ ಆಟೋ&ರಿಾ, ಭಾರತೀಯ ಪ್ರಜೆಗಳ ಕಲ್ಯಾಣ ಪದ ಮಹ್ಮಮದ ಇಸ್ಮಾಯಿಲ್​ ಮುಕ್ತಿ ಅವರಿಗೆ ಬ್ಯಾಟ್​, ಪ್ರೌಟಿಸ್ಟ್​ ಬ್ಲಾಕ್​ ಇಂಡಿಯಾ ಪದ ವಿನೋದ ದಶರಥ ೂಡಕೆ ಅವರಿಗೆ ಹಡಗು, ಇಂಡಿಯನ್​ ಲೇಬರ್​ ಪಾಟಿರ್ (ಅಂಬೇಡ್ಕರ್​ ಪುಲೆ) ಪದ ವೆಂಕಟೇಶ್​ ಪ್ರಸಾದ್​ ಎಚ್​. ಅವರಿಗೆ ಪೆಟ್ಟಿಗೆ, ಸೋಷಿಯಲಿಸ್ಟ್​ ಯೂನಿಟಿ ಸೆಂಟರ್​ ಆ್​ ಇಂಡಿಯಾ (ಕಮ್ಯುನಿಸ್ಟ್​) ಪದ ಶರಣಬಸವ ಗೋನವಾರ ಅವರಿಗೆ ಗಾಜಿನ ಲೋಟ, ಟಿಪ್ಪು ಸುಲ್ತಾನ ಪಾಟಿರ್ಯ ಬಂಕಾಪುರ ಶೌಖತ್​ಅಲಿ ಅವರಿಗೆ ಇಟ್ಟಿಗೆಯ ಚಿಹ್ನೆಗಳನ್ನು ನೀಡಲಾಗಿದೆ.
ಪೇತರ ಅಭ್ಯಥಿರ್ಗಳಾದ ಡಾ. ಗುರಪ್ಪ ಇಮ್ರಾಪರ ಅವರಿಗೆ ಹಲಸಿನ ಹಣ್ಣು, ಪ್ರವಿಣ ಹತ್ತೆನವರ ಅವರಿಗೆ ಸಿತಾರ್​, ಬಾಳನಗೌಡ್ರ ಮಲ್ಲಿಕಾರ್ಜುನಗೌಡ ಅವರಿಗೆ ಟಿಲ್ಲರ್​, ರಾಜು ಅನಂತಸಾ ನಾಯಕವಾಡಿ ಅವರಿಗೆ ಕೈಗಾಡಿ, ಶಕೀಲ ಅಹ್ಮದ ಮುಲ್ಲಾ ಅವರಿಗೆ ಹಣುಗಳು ಇರುವ ಬ್ಯಾಸ್ಕೆಟ್​, ಎಸ್​.ಎಸ್​. ಪಾಟಿಲ್​ ಅವರಿಗೆ ಏಳು ಕಿರಣಗಳು ಇರುವ ಪೆನ್ನಿನ ನಿಬ್​ ಚಿಹ್ನೆಗಳನ್ನು ಹಂಚಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ದಿವ್ಯ ಪ್ರಭು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net