ವಸತಿ ಯೋಜನೆಗಳಡಿ ಶೀಘ್ರವೇ ನಿವೇಶನ ಮಂಜೂರು

11 ckm 3
ಚಿಕ್ಕಮಗಳೂರಿನ ನಗರಸಭೆ ಸಭಾಂಗಣದಲ್ಲಿ ಶಾಸಕ ಎಚ್.ಡಿ.ತಮ್ಮಯ್ಯ ಅಧ್ಯಕ್ಷತೆಯಲ್ಲಿ ಆಶ್ರಯ ಸಮಿತಿ ಸಭೆ ನಡೆಯಿತು. ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ಆಯುಕ್ತ ಬಿ.ಸಿ.ಬಸವರಾಜ್ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ವಿವಿಧ ವಸತಿ ಯೋಜನೆಗಳಡಿ ಶೀಘ್ರವೇ ವಸತಿ-ನಿವೇಶನ ರಹಿತರಿಗೆ ಮನೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಎಚ್.ಡಿ ತಮ್ಮಯ್ಯ ಭರವಸೆ ನೀಡಿದರು.

ನಗರಸಭೆಯ ಸಭಾಂಗಣದಲ್ಲಿ ಗುರುವಾ ನಡೆದ ಆಶ್ರಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಉಪ್ಪಳ್ಳಿ ವಾಜಪೇಯಿ ಬಡಾವಣೆಯಲ್ಲಿ ೧೫೧೧ ಜಿ+೨ ಮಾದರಿಯ ಮನೆಗಳ ಕಾಮಗಾರಿ ಬಹಾಳ ಬೇಗ ಮುಕ್ತಾಯಗೊಳಿಸಿ ಪ್ರತಿ ಫಲಾನುಭವಿಗೆ ನಿಗದಿಗೊಳಿಸಿದ್ದ ೩ ಲಕ್ಷ ರೂ. ಗಳ ಬದಲಿಗೆ ಸರ್ಕಾರ ೧ ಲಕ್ಷ ರೂ ಪಾವತಿಸುವಂತೆ ಆದೇಶ ಹೊರಡಿಸಿದೆ ಎಂದು ತಿಳಿಸಿದರು.
ಮೊದಲ ಹಂತದಲ್ಲಿ ಇನ್ನು ೩ ತಿಂಗಳಲ್ಲಿ ೩೦೦ ಮನೆಗಳ ಕಾಮಗಾರಿಯನ್ನು ಶೀಘ್ರ ಮುಗಿಸಿ ಫಲಾನುಭವಿಗಳಿಗೆ ಮನೆಗಳನ್ನು ವಿತರಿಸಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ನಗರದಲ್ಲಿ ಇರುವ ನಿವೇಶನ ವಸತಿ ರಹಿತರ ಗುರುತಿಸಲಾಗಿದ್ದು, ಇಂದಿರಾಗಾAಧಿ ಬಡಾವಣೆಯಲ್ಲಿ ಈಗಾಗಲೇ ಮನೆ ನಿರ್ಮಾಣ ಮಾಡಿಕೊಂಡಿರುವವರಿಗೆ ಹಕ್ಕುಪತ್ರ ಇಲ್ಲದೆ ತೊಂದರೆಯಾಗಿದೆ. ಈ ಬಗ್ಗೆ ಇಂದು ನಡೆದ ಆಶ್ರಯ ಸಮಿತಿ ಸಭೆಯಲ್ಲಿ ಚರ್ಚಿಸಲಾಗಿದ್ದು, ಇದನ್ನು ಸರಿದೂಗಿಸುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಹೇಳಿದರು.
ಈಗಾಗಲೇ ಸುಮಾರು ೮೬೧ ಮನೆಗಳಲ್ಲಿ ೪೬೩ ಮನೆಗಳು ನಿರ್ಮಾಣವಾಗಿವೆ. ಇದರಲ್ಲಿ ೧೭೩ ಜನರಿಗೆ ತಹಸೀಲ್ದಾರ್ ಸಹಿ ಇರುವ ಹಕ್ಕುಪತ್ರ ಸಿಕ್ಕಿದ್ದು, ಉಳಿದವರಿಗೆ ಕೆಲವು ಕಾರಣಗಳಿಂದಾಗಿ ಸಿಕ್ಕಿಲ್ಲ. ಬಡವರಾಗಿರುವ ಇವರು ಅಲ್ಲಿ ಮನೆಯನ್ನು ಕಟ್ಟಿಕೊಂಡು ವಾಸವಾಗಿದ್ದಾರೆ. ಈ ಬಗ್ಗೆ ಪರಿಶೀಲಿಸುವಂತೆ ಚರ್ಚಿಸಲಾಗಿದ್ದು ನಿಜವಾದ ಅರ್ಹ ಫಲಾನುಭವಿಗಳನ್ನು ಗುರುತಿಸಿ ಹಕ್ಕುಪತ್ರ ವಿತರಣೆ ಮಾಡುವುದಾಗಿ ಭರವಸೆ ನೀಡಿದರು.
ಉಳಿದ ೨೩೮ ಜನ ಯಾವುದೇ ದಾಖಲೆ ಪತ್ರ ಸಲ್ಲಿಸಿಲ್ಲ. ಇನ್ನೊಮ್ಮೆ ಪರಿಶೀಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನಗರದ ವಿವಿದೆಡೆ ನಿವೇಶನ ಹೊಂದಿರುವವರು ಅಲ್ಲಿ ನಿವೇಶನ ಮನೆ ಪಡೆದುಕೊಂಡಿದ್ದಾರೆ. ಸ್ಲಂಬೋರ್ಡ್ನಿAದ ಮನೆ ನಿರ್ಮಾಣ ಮಾಡುವ ಗುರಿ ಹೊಂದಲಾಗಿದ್ದು, ನಗರದಿಂದ ೫ ಕಿ.ಮೀ ವ್ಯಾಪ್ತಿಯಲ್ಲಿ ೫-೧೦ ಎಕರೆ ಜಾಗವನ್ನು ಗುರುತಿಸುವಂತೆ ತಹಸೀಲ್ದಾರ್ ಮತ್ತು ಉಪ ವಿಭಾಗಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜಾಗ ಲಭ್ಯವಾದರೆ ರಾಜೀವ್ ಗಾಂಧಿ ವಸತಿ ನಿಗಮದಿಂದ ಮಂಜೂರಾತಿ ಪಡೆದು ಮನೆ ನಿರ್ಮಾಣ ಮಾಡಲು ಉz್ದೆÃಶಿಸಲಾಗಿದೆ. ಈಗಾಗಲೇ ವಸತಿ ರಹಿತ ೪೦೦ ಜನರು ಅರ್ಜಿ ಸಲ್ಲಿಸಿದ್ದು, ಇವರಿಗೆ ಮನೆ ಮಂಜೂರು ಮಾಡುವುದಾಗಿ ಭರವಸೆ ನೀಡಿದರು.
ಬೀಕನಹಳ್ಳಿ ಸರ್ವೇ ನಂಬರ್‌ನ ಎಐಟಿ ಕಾಲೇಜು ಹಿಂಭಾಗ ೩ ಎಕರೆ ಸರ್ಕಾರಿ ಜಾಗವನ್ನು ಗುರುತಿಸಲಾಗಿದ್ದು, ಇದರ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇದರಲ್ಲೂ ನಿವೇಶನಗಳನ್ನು ನೀಡಲು ಬದ್ಧವಾಗಿರುವುದಾಗಿ ತಿಳಿಸಿದರು.
ನಗರಸಭಾಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಮಾತನಾಡಿ, ನಗರದ ಉಪ್ಪಳ್ಳಿ ವಾಜಪೇಯಿ ಬಡಾವಣೆಯಲ್ಲಿ ನಿರ್ಮಾಣವಾಗುತ್ತಿರುವ ಜಿ+೨ ಮಾದರಿಯ ಮನೆಗಳ ಶೀಘ್ರ ಕಾಮಗಾರಿ ಮುಗಿಸಿ ಫಲಾನುಭವಿಗಳಿಗೆ ವಿತರಿಸಲು ಕ್ರಮವಹಿಸಲಾಗಿದೆ ಎಂದರು.
ಉಪ್ಪಳ್ಳಿ ಸರ್ವೆ ನಂಬರ್ ೨೭ ರಲ್ಲಿ ೮ ಎಕರೆ ಗೋಮಾಳ ಜಾಗವನ್ನು ಒತ್ತುವರಿ ಮಾಡಿ, ತೋಟ, ಮನೆ ಕಟ್ಟಿ ವಾಸ ಮಾಡುತ್ತಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿಗಳು ಹಾಗೂ ತಹಸೀಲ್ದಾರ್ ಗಮನ ಹರಿಸಿರಲಿಲ್ಲ. ಕಳೆದ ಒಂದು ತಿಂಗಳ ಹಿಂದೆ ಈ ಭೂಮಿಯನ್ನು ವಶಪಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದ್ದು ಸರ್ವೆ ಮಾಡಿ ಸರ್ಕಾರಿ ಜಾಗವನ್ನು ಖುಲ್ಲಾಗೊಳಿಸುವಂತೆ ಒತ್ತಾಯಿಸಿರುವುದಾಗಿ ತಿಳಿಸಿದರು.
ಸಭೆಯಲ್ಲಿ ಪೌರಾಯುಕ್ತ ಬಿ.ಸಿ ಬಸವರಾಜು, ನಗರ ಆಶ್ರಯ ಸಮಿತಿ ಸದಸ್ಯರಾದ ಫಯಾಜ್ ಅಹಮ್ಮದ್, ಪ್ರಸಾದ್‌ಅಮೀನ್, ಎನ್.ಕೆ.ಮಧು, ಬಿ.ಯಶೋಧ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net