

ರಾಯಚೂರು: ನಗರದ ವಿವಿಧ ಸ್ಲಂಗಳಲ್ಲಿ ವಾಸಿಸುವ ಬಡ ಜನರಿಗೆ ವಾಜಪೇಯಿ ನಗರ ನಿವೇಶನ ಯೋಜನೆಯಡಿ ಮಂಜೂರಿಯಾಗಿರುವ ನಿವೇಶನಗಳನ್ನು ಹಂಚಿಕೆ ಮಾಡುವಂತೆ ಒತ್ತಾಯಿಸಿ ಸ್ಥಳೀಯ ಜಿಲ್ಲಾಕಾರಿ ಕಚೇರಿ ಮುಂದೆ ರಾಯಚೂರು ಸ್ಲಂ ನಿವಾಸಿಗಳ ಕ್ರಿಯಾ ವೇದಿಕೆಯಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.
ನಂತರ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಪ್ರಶಾಂತಕುಮಾರಗೆ ಮನವಿ ಸಲ್ಲಿಸಿ, 2017ರಲ್ಲಿ ಯೋಜನೆಯಡಿ ಸರ್ವೇ ನಂ.581, 929/2, 726, 727ರಲ್ಲಿ ನಿವೇಶನ ಮಂಜೂರು ಮಾಡಲಾಗಿದೆ. ಆದರೆ ಇದುವರೆಗೂ ನಿವೇಶನ ಅಭಿವೃದ್ಧಿ ಪಡಿಸಿ ಹಂಚಿಕೆ ಮಾಡಲಾಗಿಲ್ಲ ಎಂದು ದೂರಿದರು.
ಕೇವಲ ನಿವೇಶನ ಹಕ್ಕುಪತ್ರ ವಿತರಿಸಲಾಗಿದ್ದು, ಹಂಚಿಕೆ ಮಾಡಲಾಗಿಲ್ಲ. ಇದರಿಂದ ಬಡ ಜನರಿಗೆ ಮಂಜೂರಾದ ಭೂಮಿಯನ್ನು ಭೂಗಳ್ಳರು ಅತಿಕ್ರಮಿಸಿಕೊಳ್ಳುತ್ತಿದ್ದಾರೆ. ಕೂಡಲೇ ಜಮೀನು ಸರ್ವೇ ನಡೆಸಿ ಚೆಕ್‌ಬಂದಿ ಗುರುತಿಸಿ ನಿವೇಶನ ಹಂಚಿಕೆ ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಪ್ರತಿಭಟನೆಯಲ್ಲಿ ವೇದಿಕೆ ಅಧ್ಯಕ್ಷ ಜನಾರ್ದನ ಹಳ್ಳಿಬೆಂಚಿ, ಪದಾಕಾರಿಗಳಾದ ಬಸವರಾಜ ಹೊಸೂರು, ನೂರ್‌ಜಹಾನ್, ಜಿ.ರಾಜು, ವೆಂಕಟೇಶ ಭಂಡಾರಿ, ವೀರೇಶ, ಜಂಬಣ್ಣ ಹಾಗೂ ಲಾನುಭವಿಗಳು ಪಾಲ್ಗೊಂಡಿದ್ದರು.